ಕಲಬುರಗಿ,ಜೂ.27-ಮುರಿಗೆಪ್ಪ ಕುಂಬಾರ ಅಲಿಯಾಸ್ ಮುರಿಗೇಶ ಎಂಬಾತನು ಸರಕಾರಿ ಅಧಿಕಾರಿ/ನೌಕರರ ಹೆಸರು ಮೊಬೈಲ್ ಸಂಖ್ಯೆಗಳನ್ನು ತಿಳಿದುಕೊಂಡು, ಮೊಬೈಲ್ ಸಂ.7353568253 ಮತ್ತು 9561497208 ರಿಂದ ಹಾಗೂ ಇನ್ನಿತರೆ ಮೊಬೈಲ್ ಸಂಖ್ಯೆಯಿಂದ ಅವರಿಗೆ ಕರೆ ಮಾಡಿ, ತಾನು ಲೋಕಾಯುಕ್ತ ಡಿ.ವೈ.ಎಸ್‍ಪಿ ಎಂದು ಹೇಳಿ ಸರಕಾರಿ ಅಧಿಕಾರಿ/ನೌಕರರಿಗೆ ನಿಮ್ಮ ವಿರುದ್ದ ಲೋಕಾಯುಕ್ತದಲ್ಲಿ ದೂರು ಇದೆ. ತನ್ನನ್ನು ಕಾಣುವಂತೆ ನಿಗದಿತÀ ಸ್ಥಳಕ್ಕೆ ಬರಲು ತಿಳಿಸಿ, ಸಂಬಂಧಪಟ್ಟ ಅಧಿಕಾರಿಯವರಿಂದ ಹಣಕ್ಕಾಗಿ ಬೇಡಿಕೆ ಇಡುತ್ತಿರುವುದು ಬೆಳಕಿಗೆ ಬಂದಿದೆ.
ಅಲ್ಲದೆ ಸರಕಾರಿ ಅಧಿಕಾರಿ, ನೌಕರರಿಗೆ ಒಂದು ವೇಳೆ ತಾನು ತಿಳಿಸಿದ ಸ್ಥಳಕ್ಕೆ ಬರದೇ ಇದ್ದರೆ ನಿಮ್ಮ ಮೇಲೆ ಲೋಕಾಯುಕ್ತ ರೇಡ್ ಅಥವಾ ಟ್ರ್ಯಾಪ್ ಮಾಡುವುದಾಗಿ ಹೆದರಿಸುತ್ತಿರುವುದು ಬೆಳಕಿಗೆ ಬಂದಿದ್ದು, ಜಿಲ್ಲೆಯ ಎಲ್ಲಾ ಸರಕಾರಿ ಅಧಿಕಾರಿ/ನೌಕರರು ಈ ರೀತಿಯಾಗಿ ಯಾವುದೇ ಫೋನ್ ಕರೆ ಮಾಡಿ ಯಾರಾದರು ಹೆದರಿಸುತ್ತಿದ್ದರೆ, ಅದನ್ನು ಫೋನಿನಲ್ಲಿ ರೆಕಾರ್ಡ್ ಮಾಡಿಕೊಂಡು, ತಕ್ಷಣದಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿ, ಈ ಬಗ್ಗೆ ಲೋಕಾಯುಕ್ತ ಕಛೇರಿಗೆ ಮಾಹಿತಿ ಸಲ್ಲಿಸಬೇಕು ಎಂದು ಲೋಕಾಯುಕ್ತ ಎಸ್.ಪಿ.ಎ.ಆರ್.ಕರ್ನೂಲ್ ತಿಳಿಸಿದ್ದಾರೆ.