ಲೋಕಾಯುಕ್ತ ಅಧಿಕಾರಿಗಳ ಸಭೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.28: ಇಂದು ನಗರದ ಹಳೇ ತಹಶೀಲ್ದಾರ್ ಕಚೇರಿ ಹತ್ತಿರ ನಡೆದ ಲೋಕಾಯುಕ್ತ ಅಧಿಕಾರಿಗಳ ಸಭೆಯಲ್ಲಿ  ಸಾರ್ವಜನಿಕರು, ಇಲಾಖೆಗಳ ಅಧಿಕಾರಿಗಳು ಮತ್ತು ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಸಾರ್ವಜನಿಕ ಕುಂದು ಕೊರತೆ ಗಳ ಬಗ್ಗೆ ಹಲವಾರು ಜನರು ದೂರುಗಳು ನೀಡಿದರು ಮತ್ತು ಮೇ ತಿಂಗಳಲ್ಲಿ ಕೊಟ್ಟಿರುವ ಸಮಸ್ಯೆಗಳಿಗೆ ಪರಿಷ್ಕರಣೆ ನೀಡಿದರು,  ಹಿರಿಯ ವಕೀಲರು ರಾಮಿರೆಡ್ಡಿ,  ಸಾಮಾಜಿಕ ಹೋರಾಟಗಾರ ಆರ್ ವೆಂಕಟರೆಡ್ಡಿ ಅವರು ಮತ್ತು ವಿರೂಪಾಕ್ಷ,  ಸಿದ್ಧರಾಮಪ್ಪ ಮೊದಲಾದವರು  ಭಾಗವಹಿಸಿದ್ದರು