ಲೋಕಾಯುಕ್ತರಿಂದ ಸಾರ್ವಜನಿಕರ ಅಹವಾಲು ಸ್ವೀಕಾರ

ತಾಳಿಕೋಟೆ:ಮಾ.14: ಕರ್ನಾಟಕ ರಾಜ್ಯ ಲೋಕಾಯುಕ್ತರು ಬೆಂಗಳೂರ ಅವರ ನಿರ್ದೇಶನದಂತೆ ಪಟ್ಟಣದ ತಾಲೂಕಾ ಪಂಚಾಯತ್ ಸಭಾಭವನದಲ್ಲಿ ಬುಧವಾರರಂದು ನಡೆದ ವಿವಿಧ ಇಲಾಖಾ ಅಧಿಕಾರಿಗಳ ಸಭೆಯ ಬಳಿಕ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳನ್ನು ಸ್ವಿಕರಿಸಿದರಲ್ಲದೇ ಕೆಲವು ಸಮಸ್ಯಗಳಿಗೆ ಸ್ಥಳದಲ್ಲಿಯೇ ಉಪಸ್ಥಿತರಿದ್ದ ಅಧಿಕಾರಿಗಳಿಗೆ ನಿರ್ದೇಶನ ನೀಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿದರು.
ಪಟ್ಟಣದಲ್ಲಿ ಹೊಸದಾಗಿ ನಿರ್ಮಾಣಗೊಂಡ ಲೇಔಟ್‍ಗಳಿಗೆ ಸಂಬಂದಿಸಿ ಪುರಸಭಾ ಸದಸ್ಯ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ ಅವರು ಈ ಹಿಂದೆ ಲೇಔಟ್‍ಗಳನ್ನು ಅಭಿವೃದ್ದಿ ಪಡಿಸದೇ ಇದ್ದರೂ ಕೂಡಾ ಅವುಗಳನ್ನು ಅಧಿಕಾರಿಗಳು ಬಿಡುಗಡೆಗೊಳಿಸಿದ್ದು ಇದಕ್ಕೆ ಸಂಬಂದಿಸಿ ದೂರು ಸಲ್ಲಿಸಿ ವರ್ಷ ಕಳೆಯುತ್ತಾ ಬಂದಿದ್ದು ಯಾವುದೇ ಕ್ರಮವಾಗಿಲ್ಲಾವೆಂದಾಗ ಲೋಕಾಯುಕ್ತ ಸಿಪಿಐ ಆನಂದ ಟಕ್ಕಣ್ಣವರು ಈಗಾಗಲೇ ನಿಮ್ಮ ದೂರಿಗೆ ಸಂಬಂದಿಸಿ ಎಲ್ಲ ಪರಿಶೀಲನಾ ಹಂತ ಮುಗಿದಿದೆ ಬೆಂಗಳೂರಿನ ಲೋಕಾಯುಕ್ತ ನ್ಯಾಯಾಲಯದಲ್ಲಿ ತಮ್ಮ ದೂರು ವಿಚಾರಣೆ ನಡೆಯುತ್ತಿದ್ದು ಇದಕ್ಕೆ ಸಂಬಂದಿಸಿ ಅಲ್ಲಿಂದ ಮಾಹಿತಿ ಬಂದ ಕೂಡಲೇ ತಮಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವದೆಂದರು.
ಇನ್ನೋರ್ವ ಸಾಮಾಜಿಕ ಕಾರ್ಯಕರ್ತರಾದ ಸುರೇಶಕುಮಾರ ಹಜೇರಿ ಪಟ್ಟಣದ ಪುರಸಭೆಯವರು ಪುರಸಭೆಗೆ ಸಂಬಂದಿತ ಸರ್ಕಾರಿ ಜಾಗೆಯನ್ನು ಪರಾಭಾರೆ ಮಾಡಿ ಬೇರೆಯವರ ಹೆಸರಿಗೆ ಜಾಗೆ ಮಾಡಿದ್ದಾರೆ ಈ ಮೊದಲು ಪುರಸಭೆಗೆ ಸಂಬಂದಿತ ಉತ್ತಾರೆ ಮತ್ತು ಸದ್ಯ ಜಾಗೆ ಬೇರೆಯವರ ಹೆಸರಿಗೆ ಪರಬಾರೆ ಗೊಂಡಿರುವ ಜಾಗೆಯ ಉತ್ತಾರೆಯ ಜೊತೆಗೆ ಅಧಿಕೃತ ದಾಖಲೆಗಳನ್ನು ಲೋಕಾಯುಕ್ತರ ಮುಂದೆ ಹಾಜರಪಡಿಸಿದಾಗ ಲೋಕಾಯುಕ್ತ ಅಧಿಕಾರಿ ಆನಂದ ಟಕ್ಕಣ್ಣವರ ಅವರು ಈ ಎಲ್ಲ ದಾಖಲೆಗಳೊಂದಿಗೆ 192 ಫಾರ್ಮ ತುಂಬಿ ಕೊಡಲು ಹೇಳಿದರಲ್ಲದೇ ಈ ಕುರಿತು ಕೇಸು ದಾಖಲಿಸಿಕೊಂಡು ತನಿಖೆ ಗೈಗೊಳ್ಳುವದಾಗಿ ಹೇಳಿದರು.
ಇನ್ನೂಳಿದಂತೆ ಕಾರನೂರ ಗ್ರಾಮದ ಸ್ಮಶಾನ ಜಾಗೆಗೆ ಸಂಬಂದಿಸಿ ಮತ್ತು ತಹಶಿಲ್ದಾರ ಕಾರ್ಯಾಲಯಕ್ಕೆ ಸಂಬಂದಿಸಿ ಅಲ್ಲದೇ ಪುರಸಭೆಗೆ ಸಂಬಂದಿತ ಸಿಎ ಸೈಟ್‍ಗಳಿಗೆ ಸಂಬಂದಿಸಿ ಕೆಲವು ದೂರುಗಳು ಬಂದವಲ್ಲದೇ ಇದಕ್ಕೆ ಸಭಂದಿಸಿ ಕೆಲವು ದೂರುಗಳನ್ನು ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ಇರ್ದೇಶನ ನೀಡಿ ಸರಿಪಡಿಸಲು ಅಧಿಕಾರಿಗಳು ಸೂಚಿಸಿದರಲ್ಲದೇ ಕೆಲವು ದೂರಿಗೆ ಸಭಂದಿಸಿ ಸಂಬಂದಿಸಿದ ಅಧಿಕಾರಿಗಳಿಗೆ ಪತ್ರಮುಖೇನ ಮಾಹಿತಿ ಪಡೆದು ಸ್ಥಳ ಪರಿಶೀಲನೆ ಮಾಡಿ ಸೂಕ್ತ ಕ್ರಮಕ್ಕೆ ಲೋಕಾಯುಕ್ತ ನ್ಯಾಯ ಮೂರ್ತಿಗಳಿಗೆ ವರಧಿ ಸಲ್ಲಿಸುತ್ತೇವೆಂದು ಪತ್ರಿಕೆಗೆ ಲೋಕಾಯುಕ್ತ ಸಿಪಿಐ ಆನಂದ ಟಕ್ಕಣ್ಣವರ ಅವರು ಮಾಹಿತಿ ನೀಡಿದರು.
ಈ ಸಮಯದಲ್ಲಿ ಲೋಕಾಯುಕ್ತ ಸಿಪಿಐ ಆನಂದ ಡೋಣಿ, ಎಸ್.ಆಯ್.ಅಮರಖೇಡ, ಶಂಕರ ಕಟ್ಟೆ, ಶ್ರೀಶೈಲ ಎಂ ಬಳಗಾನೂರ, ಎಸ್.ಕೆ.ಚವ್ಹಾಣ, ವಾಷಿಮ್ ಅಕ್ಕಲಕೋಟ, ತಾಲೂಕಾ ತಹಶಿಲ್ದಾರ ಶ್ರೀಮತಿ ಕೀರ್ತಿ ಚಾಲಕ, ತಾಪಂ ಇಓ ಬಸವಂತ್ರಾಯಗೌಡ ಬಿರಾದಾರ, ಪುರಸಭಾ ಮುಖ್ಯಾಧಿಕಾರಿ ಮೋಹನ್ ಜಾಧವ, ಒಳಗೊಂಡು ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.