
ಬೆಂಗಳೂರು, ಸೆ.೧೬-ಕಾಮಗಾರಿಯೇ ನಡೆಸದೆ ಹಣ ಬಿಡುಗಡೆ ಮಾಡಿಕೊಂಡಿರುವ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ, ಲೋಕಾಯುಕ್ತಕ್ಕೆ ಮಾಜಿ ಸಚಿವ ಮುನಿರತ್ನ ದೂರು ಸಲ್ಲಿಕೆ ಮಾಡಿದ್ದಾರೆ. ವಾರ್ಡ್ ನಂ. ೪೨ರಲ್ಲಿನ ಲಕ್ಷ್ಮೀದೇವಿ ನಗರ, ಹಾವಾಡಿಗರ ಕಾಲೋನಿ, ಕಾವೇರಿನಗರ, ನಂದಿನಿ ಲೇಔಟ್ ಮುಂತಾದ ಪ್ರದೇಶಗಳ ರಸ್ತೆ ಅಭಿವೃದ್ದಿ, ಫುಟ್ ಪಾತ್ ಅಭಿವೃದ್ದಿ, ಚರಂಡಿ ನಿರ್ಮಾಣ ಕಾಮಗಾರಿ ನಡೆಸದೇ ಬಿಲ್ ಸಲ್ಲಿಕೆ ಮಾಡಲಾಗಿದೆ ಎಂದು ದೂರಿದ್ದಾರೆ.
ಕಾಮಗಾರಿ ನಡೆಸದೆಯೇ ಬಿಲ್ ಸಲ್ಲಿಕೆ ಪತ್ತೆಯಾಗಿದೆ. ಸರಿ ಸುಮಾರು ೯.೫ ಕೋಟಿ ಮೊತ್ತದ ೪೨ ಕಾಮಗಾರಿ ನಾಪತ್ತೆ ಆಗಿದ್ದು ಸದರಿ ಕಾಮಗಾರಿಗಳ ಸ್ಥಳ ಪರೀಶಲನೆ ನಂತರವೇ ಬಿಲ್ ನೀಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೂ ಸಲ್ಲಿಸಿದ ದೂರಿನಲ್ಲಿ ಮುನಿರತ್ನ ಉಲ್ಲೇಖಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಬಿಬಿಎಂಪಿ ಮಾಜಿ ವೇಲು ನಾಯ್ಕ್, ರಾಜಕೀಯ ದುರದ್ದೇಶದಿಂದ ಈ ರೀತಿಯ ದೂರುಗಳು ಕೊಟ್ಟಿರಬಹುದು. ಹಾಸ್ಯಾಸ್ಪದ ಎಂದರೆ ಮೂರು ವರ್ಷಗಳಿಂದ ಮುನಿರತ್ನ ಏನು ಮಾಡುತ್ತಿದ್ದರು. ಅವರದ್ದೇ ಸರ್ಕಾರ ಇದ್ದಾಗ ಕ್ರಮ ಕೈಗೊಂಡಿಲ್ಲವೇಕೆ ಎಂದು ಪ್ರಶ್ನೆ ಮಾಡಿದರು.