ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದಏಕೈಕ ಸಚಿವ ಶ್ರೀರಾಮುಲು


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಏ,26- ಜಿಲ್ಲಾ ಉಸ್ತುವಾರಿ ಸಚಿವ ಬಿ‌‌‌ ಶ್ರೀರಾಮುಲು ಅವರು 2021-22 ನೇ ಸಾಲಿನ ಆಸ್ತಿ ಮತ್ತು ದಾಯಿತ್ವದ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸದ ರಾಜ್ಯದ ಏಕೈಕ ಸಚಿವ ಬಿ‌ಶ್ರೀರಾಮುಲು ಆಗಿದ್ದಾರೆ.
ಈ ಬಗ್ಗೆ ಲೋಕಾಯುಕ್ತರು ಮಾಧ್ಯಮಗಳಿಗೆ ಪ್ರಕಟಣೆ ನೀಡಿದ್ದಾರೆ‌. ಸಾರ್ವಜನಿಕ ಸೇವೆಯಲ್ಲಿರುವ ಸಚಿವ, ಶಾಸಕರು ಲೋಕಾಯುಕ್ತಕ್ಕೆ ತಮ್ಮ. ಆಸ್ತಿಯ ವಿವರವನ್ನು ಪ್ರತಿ ಆರ್ತಿಕ ವರ್ಷದ ನಂತರದ ಮೂರು ತಿಂಗಳೊಳಗೆ ಸಲ್ಲಿಸಬೇಕು ಆದರೆ ಶ್ರೀರಾಮುಲು ಅವರು 2023 ಬಂದರೂ ಸಲ್ಲಿಸಿಲ್ಲ. ಹಾಗಾಗಿ ಸಾರ್ವಜನಿಕ ಜೀವದಲ್ಲಿರುವವರ ಬಗ್ಗೆ ಮಾಧ್ಯಮಗಳ ಮೂಲಕ ಪ್ರಚುರ ಪಡಿಸುತ್ತಿದೆಂದು ಹೇಳಿದ್ದಾರೆ.