ಸ್ಥಿರ ಸರ್ಕಾರಕ್ಕೆ ಬಿಜೆಪಿ ಬೆಂಬಲಿಸಿ: ಮೋದಿ

ಮೋದಿ ಪತ್ರ
ನವದೆಹಲಿ,ಏ,೧೮- ಈ ಬಾರಿಯ ಲೋಕಸಭೆ ಚುನಾವಣೆ ಸಾಮಾನ್ಯ ಚುನಾವಣೆಯಲ್ಲ, ಬದಲಾಗಿ ಬಿಜೆಪಿ ಪಡೆಯುವ ಪ್ರತಿ ಮತ ಸ್ಥಿರ ಸರ್ಕಾರ ರಚನೆಗೆ ಸಹಕಾರಿಯಾಗಲಿದೆ. ಜೊತೆಗೆ ೨೦೪೭ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವ ಸಂಕಲ್ಪದ ಪಯಣಕ್ಕೆ ವೇಗ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಕಳೆದ ೧೦ ವರ್ಷಗಳಲ್ಲಿ, ಸಮಾಜದ ಪ್ರತಿಯೊಂದು ವರ್ಗದವರ ಜೀವನದ ಗುಣಮಟ್ಟ ಸುಧಾರಿಸಿದೆ, ಇನ್ನೂ ಉತ್ತಮ ಜೀವನ ಖಚಿತಪಡಿಸಿಕೊಳ್ಳಲು ಈ ಚುನಾವಣೆ ನಿರ್ಣಾಯಕವಾಗಿದೆ ಎಂದಿದ್ದಾರೆ.ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ನಾಳೆ ನಡೆಯಲಿರುವ ಹಿನ್ನೆಲೆಯಲ್ಲಿ ಎನ್‌ಡಿಎ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಪತ್ರ ಬರೆದಿರುವ ಅವರು, ಪತ್ರದ ಸಾರವನ್ನು ತಮ್ಮ ಕ್ಷೇತ್ರದ ಜನರಿಗೆ ತಲುಪಿಸಿ ಬಿಜೆಪಿ ಮತ್ತು ಎನ್‌ಡಿಎ ಅಭ್ಯರ್ಥಿಗಳ ಪರ ಮತಚಲಾಯಿಸಲು ಪ್ರೆರೇಪಿಸಿ ಎಂದಿದ್ದಾರೆ.ಈ ಚುನಾವಣೆಯು ದೇಶದ ವರ್ತಮಾನವನ್ನು ಉಜ್ವಲ ಭವಿಷ್ಯದೊಂದಿಗೆ ಸಂಪರ್ಕಿಸಲು ಒಂದು ಅವಕಾಶವಾಗಿದೆ . ಹೀಗಾಗಿ ದೇಶದ ಜನರು ಮತದಾನ ಆರಂಭದ ಮೊದಲೇ ಮತದಾನ ಬಿಜೆಪಿ ಕಡೆ ಆಗುವಂತೆ ಮಾಡಿ ಎಂದು ಮನವಿ ಮಾಡಿದ್ದಾರೆ.ಮತದಾರರು ಮುಂಜಾನೆಯೇ ಮತದಾನ ಮಾಡುವಂತೆ ಮನವಿ ಮಾಡಿದರು. ಅವರು ಬಿಜೆಪಿಯ ಅಭ್ಯರ್ಥಿಯಾಗಿ ಪ್ರತಿಯೊಬ್ಬ ಮತದಾರರಿಗೂ ಪ್ರತಿ ಕ್ಷಣವನ್ನು ಶ್ರೇಯೋಭಿವೃದ್ಧಿಗೆ ಮೀಸಲಿಡುವ ಭರವಸೆ ತಿಳಿಸಿ,ನಾಗರಿಕರ. ಚುನಾವಣೆಯಲ್ಲಿ ನಿಮ್ಮ ಗೆಲುವಿಗಾಗಿ ಶುಭ ಕೋರುವುದಾಗಿ ತಿಳಿಸಿದ್ದಾರೆ.ಸಾಮಾನ್ಯ ಚುನಾವಣೆಯಲ್ಲ ಎಂದು ನಿಮ್ಮ ಕ್ಷೇತ್ರದ ಜನರಿಗೆ ಹೇಳಲು ಬಯಸುತ್ತೇನೆ ದೇಶಾದ್ಯಂತ ಕುಟುಂಬಗಳು, ವಿಶೇಷವಾಗಿ ಹಿರಿಯ ಸದಸ್ಯರು, ೫ ರಿಂದ ೬ ದಶಕಗಳ ಕಾಂಗ್ರೆಸ್ ಆಡಳಿತದಲ್ಲಿ ಅನುಭವಿಸಿದ ಕಷ್ಟಗಳನ್ನು ನೆನಪಿಸಿಕೊಳ್ಳುತ್ತಾರೆ.ಹೀಗಾಗಿ ಪಕ್ಷದ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸಿ ಎಂದು ಮನವಿ ಮಾಡಿದ್ದಾರೆ

ಕಡ್ಡಾಯವಾಗಿ ಮತ ಚಲಾಯಿಸಿ: ಪಿಎಂ

ಬೇಸಿಗೆಯ ಬಿರು ಬಿಸಿಲಿನಲ್ಲಿ ಸುತ್ತಮುತ್ತಲಿನ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.ಬಿಸಿಲು ಎಲ್ಲರಿಗೂ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ನಡುವೆ ಚುನಾವಣೆ ದೇಶದ ಭವಿಷ್ಯಕ್ಕೆ ಅತ್ಯಂತ ಮಹತ್ವದ್ದಾಗಿದೆ. ಹಾಗಾಗಿ ಕಡ್ಡಾಯ ಮತ ಚಲಾಯಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಈ ನಿರ್ಣಾಯಕ ಸಮಯದಲ್ಲಿ, ಎಲ್ಲಾ ಕಾರ್ಯಕರ್ತರು ಚುನಾವಣಾ ಪ್ರಚಾರದ ಕೊನೆಯ ಕೆಲವು ಗಂಟೆಗಳ ಸಂಪೂರ್ಣ ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ