ಲೋಕಸಭೆ ಚುನಾವಣೆ: ಇಂಡಿಯಾ ಹೆಸರಲ್ಲಿ ವಿರೋದ ಪಕ್ಷಗಳು ಒಗ್ಗೂಡಿ ಹೊರಾಟ : ಖರ್ಗೆ

ಬೆಂಗಳೂರು,ಜು.18- ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ನಿಟ್ಟಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ವಿರೋದ ಪಕ್ಷಗಳು ಒಗ್ಗೂಡಿ ಹೋರಾಟ ಮಾಡುವ ಮಹಾ ಮೈತ್ರಿಗೆ ” ಇಂಡಿಯಾ ” ಎಂದು ಹೆಸರಿಟ್ಟು ಅದರಡಿ ಹೋರಾಟ ಮಾಡಲು ನಿರ್ದರಿಸಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ತಿಳಿಸಿದ್ದಾರೆ.

ಇಂಡಿಯಾ – ಇಂಡಿಯನ್ ನ್ಯಾಷನಲ್ ಡೆವಲಪ್ ಮೆಂಟ್ ಇನ್‌ಕ್ಲೂಸೀವ್ ಅಲೆಯೆನ್ಸ್ ಅಂದರೆ ಭಾರತೀಯ ರಾಷ್ಟ್ರೀಯ ಅಭಿವೃದ್ದಿ ಸಮಗ್ರ ಒಕ್ಕೂಟ ಎಂದು ಹೆಸರಿಡಲಾಗಿದೆ ಎಂದು ಹೇಳಿದ್ದಾರೆ.

ಮುಂಬರುವ ಲೋಕಭೆ ಚುನಾವಣೆಯ ಹಿನ್ನೆಲ೩ಯಲ್ಲಿ ನಗರದಲ್ಲಿ ನಡೆದ ಎರಡು ದಿನಗಳ ವಿರೋಧ ಪಕ್ಷಗಳ 26 ನಾಯಕರ ಸಭೆಯ ಬಳಿಕ ಜಂಟಿ ಸುದ್ದಿಗೋಷ್ಟಿಯಲ್ಲಿ ವಿವರ ನೀಡಿದ ಮಲ್ಲಿಕಾರ್ಜುನ ಖರ್ಗೆ ಅವರು ಸೋನಿಯಾಗಾಂಧಿ ಸೇರಿದಂತೆ ವಿವಿಧ ಪಕ್ಷಗಳ 26 ಪಕ್ಷಗಳ ನಾಯಕರು ಒಮ್ಮತದಿಂದ ಇಂಡಿಯಾ ಹೆಸರಿನಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಅಧಿಕಾರಕ್ಕೆ ವಿಶ್ವಾಸ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಇಂದು ಭಾಗಿಯಾಗಿದ್ದ ಪಕ್ಣಗಳು ಸೇರಿ ಇನ್ನಷ್ಡು ಪಕ್ಣಗಳ ಜೊತೆಗೂಡಿ ಒಗ್ಗೂಡಿ ಹೋರಾಟ ಮಾಡಲು ನಿರ್ಧರಿಸಿದ್ದೇವೆ. ಜೊತೆಗೆ ವಿರೋದ ಪಕ್ಷಗಳ ಮೈತ್ರಿಕೂಡ ಅಧಿಕಾರಕ್ಕೆ ಬರಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೆಲವು ನಾಯಕರಿಗೆ ವಿಮಾನ ನಿಗದಿಯಾಗಿದೆ ಹಿನ್ನೆಲೆಯಲ್ಲಿ ತಮ್ಮ ತಮ್ಮ ರಾಜ್ಯಗಳಲ್ಲಿ ತೆರಳಿದ್ದಾರೆ ಎಲ್ಲರೂ ಸರ್ವಾನು ಮತದಿಂದ ಬಿಜೆಪಿ ಪಕ್ಷವನ್ನ ಅಧಿಕಾರದಿಂದ ದೂರ ಇಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ

ಹೊಸ ಹೆಸರು ನಾಮಕರಣ: ದೀದಿ

ಈ ಮುಂಚೆ ವಿರೋದ ಪಕ್ಷಗಳ ಮೈತ್ರಿಕೂಟಕ್ಕೆ ಯುಪಿಎ ಎಂದು ಹೆಸರಿಟ್ಟಿದ್ದೆವು. ಈಗ ಅದನ್ನು ಬದಲಾಯಿಸಿ ಇಂಡಿಯಾ ಎಂದು ಮರುನಾಮಕರಣ ಮಾಡಿ ಅದರಡಿ ಹೋರಾಡಲು ಮುಂದಾಗಿರುವುದಾಗಿ ಟಿಎಂಸಿ ಅಧ್ಯಕ್ಷೆ ಹಾಗು ಪಶ್ವಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ 26 ರಾಜಕೀಯ ಪಕ್ಷಗಳು ಹಾಗು ಇನ್ನೂ ನಮ್ಮ ಜೊತೆ ಸೇರ ಬಹುದಾದ ಪಕ್ಷಗಳ ಜೊತೆಗೂಡಿ ಒಗ್ಗೂಡಿ ಹೋರಾಟ ಮಾಡಲು ನಿರ್ಧರಿಸಲಾಗಿದೆ ಎಂದರು.

ಬಿಜೆಪಿ ಸೋಲಿಸುವುದೇ ಗುರಿ: ಕೇಜ್ರಿವಾಲ್:

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟವನ್ನು ಸೋಲಿಸುವುದೇ ನಮ್ಮ ಪ್ರಮುಖ ಗುರಿ ಎಂದು ಎಎಪಿ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ..

ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ 26 ವಿವಿಧ ಪಕ್ಷಗಳ ರಾಜಕೀಯ ನಾಯಕರು ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸರ್ವಾನು ಮತದಿಂದ ಬಿಜೆಪಿ ವಿರುದ್ಧ ಹೋರಾಡುವ ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟದ ಹಲವು ನಾಯಕರು ಪಾಲ್ಗೊಂಡು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಕೇಂದ್ರದಲ್ಲಿ ಬಿಜೆಪಿಗೆ ಪರ್ಯಾಯವಾಗಿ ಸರ್ಕಾರ ರಚಿಸುವುದಾಗಿ ಗುಡುಗಿದ್ದಾರೆ‌