ವೆಲ್ಲೂರು,ಜೂ. 12- ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ಮನ ಗೆಲ್ಲಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೆಂಗೋಲ್ ಪ್ರಯೋಗಿಸಿದ್ದಾರೆ, 2024 ರ ಚುನಾವಣೆಯಲ್ಲಿ 39 ಲೋಕಸಭಾ ಸ್ಥಾನಗಳಲ್ಲಿ 25 ಸ್ಥಾನ ಎನ್‌ಡಿಎ ಗೆ ಗೆಲ್ಲಿಸಿ ಕೊಡಿ ಎಂದು ಮನವಿ ಮಾಡಿದ್ದಾರೆ.
ಲೋಕಸಭೆ ಚುನಾವಣೆಗೆ ಸುಮಾರು ಒಂದು ವರ್ಷ ಮುಂಚಿತವಾಗಿ ತಮಿಳುನಾಡಿನಲ್ಲಿ ಬಿಜೆಪಿಯ ಪ್ರಚಾರ ಪ್ರಾರಂಭಿಸಿರುವ ತಮಿಳುನಾಡಿನಲ್ಲಿ 25 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಆಯ್ಕೆ ಮಾಡಲು ನಿಮ್ಮೆಲ್ಲರಿಗೂ ಮನವಿ ಮಾಡಲು ಬಂದಿದ್ದೇನೆ ಎಂದಿದ್ದಾರೆ.
ವೆಲ್ಲೂರು ಜಿಲ್ಲೆಯ ಪಲ್ಲಿಕೊಂಡದಲ್ಲಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಚೋಳ ಸಾಮ್ರಾಜ್ಯದ ಪ್ರತೀಕವಾದ ಸೆಂಗೋಲ್ ಅನ್ನು ಹೊಸ ಸಂಸತ್ತಿನ ಕಟ್ಟಡದಲ್ಲಿ ಸೆಂಗೋಲ್ ಅನ್ನು ಸ್ಥಾಪಿಸಿದ್ದಕ್ಕಾಗಿ “ಕೃತಜ್ಞತೆಯ ಸಂಕೇತವಾಗಿ” ತಮಿಳುನಾಡಿನಿಂದ 25 ಎನ್‌ಡಿಎ ಸಂಸದರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
2014 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದ ಷಣ್ಮುಗಂ ಅವರು ಷಾ ಅವರಿಗೆ ಬೆಳ್ಳಿಯ ರಾಜದಂಡವನ್ನು ಉಡುಗೊರೆಯಾಗಿ ನೀಡಿದರು. ತಮಿಳು ಭಾಷೆಯನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ ಎಂದರು.
ಸಿಎಂ ವಿರುದ್ದ ವಾಗ್ದಾಳಿ
ಪ್ರಧಾನಿ ನರೇಂದ್ರ ‘ಮೋದಿ ಸರಕಾರ ಕಳೆದ ಒಂಬತ್ತು ವರ್ಷಗಳಲ್ಲಿ ತಮಿಳುನಾಡಿಗೆ ಏನು ಮಾಡಿದೆ ಎಂದು ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆಗೆ ಬನ್ನಿ ಎಂದು ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಅಮಿತ್ ಶಾ ಪ್ರಶ್ನಿಸಿ ವಾಗ್ದಾಳಿ ನಡೆಸಿದ್ದಾರೆ.
ಸ್ಟಾಲಿನ್ ಅವರ ಡಿಎಂಕೆ ಯುಪಿಎ ಸರ್ಕಾರದ ಭಾಗವಾಗಿದ್ದಾಗ, ತಮಿಳುನಾಡಿಗೆ 10 ವರ್ಷಗಳಲ್ಲಿ ಕೇಂದ್ರದಿಂದ 95,000 ಕೋಟಿ ರೂ. ಇದಕ್ಕೆ ವ್ಯತಿರಿಕ್ತವಾಗಿ ಪ್ರಧಾನಿ ಮೋದಿ ಒಂಬತ್ತು ವರ್ಷಗಳಲ್ಲಿ ತಮಿಳುನಾಡಿಗೆ 2,47,000 ಕೋಟಿ ರೂ ನೀಡಿದ್ದಾರೆ ಎಂದಿದ್ದಾರೆ.