ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ ಓಬಿಸಿ ವಿಭಾಗದ ಸಂಘಟನಾ ಸಭೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.03:  ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಎಐಸಿಸಿ ಸಂಯೋಜಕ ಮುರಳಿ ಕೃಷ್ಣ ಅವರು.  ನಗರ ಹಿಂದುಳಿದ ವರ್ಗಗಳ ಘಟಕದಿಂದ,  ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ  ಸರಗು ನಾಗರಾಜ್ ನೇತೃತ್ವದಲ್ಲಿ,  ನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ  ನಿನ್ನೆ ಪಕ್ಷ ಸಂಘಟನೆ ಕುರಿತು ಸಭೆಯನ್ನು  ಹಮ್ಮಿಕೊಂಡಿತ್ತು.
ಲೋಕಸಭಾ ಚುನಾವಣೆಗಾಗಿ ಕೈಗೊಳ್ಳಬೇಕಾದ ಅನೇಕ ವಿಷಯಗಳ ಕುರಿತು ಈ ಸಂದರ್ಭದಲ್ಲಿ ಚರ್ಚಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿ ರಾಹುಲ್ ಗಾಂಧಿ ಅವರ ಕೈ ಬಲಪಡಿಸೋಣ ಎಂದರು.
ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷರುಗಳಾದ  ಕೆ.ಬಿ.ಗೋಪಿಕೃಷ್ಣ,  ಸಿ.ದೇವಾನಂದ, ಕಂದಾರಿ ನಾಗರಾಜ್, ರಾಜ್ಯ ಸಂಯೋಜಕ ಹನುಮಜ್ಜ,  ಕುರುಗೋಡು ಮಲ್ಲಿಕಾರ್ಜುನ,  ವಾಸು,  ಭೋಜರಾಜ್,  ಹರೀಶ್,  ವೆಂಕಟಲಕ್ಷ್ಮಿ ನಾರಾಯಣ,  ಲಿಂಗರಾಜ್, ಯುವ ಮುಖಂಡರಾದ  ಬಾಬು,  ಉದಯ್ ಕುಮಾರ್,  ಶಿವಕುಮಾರ್,  ಪೆನ್ನಯ್ಯ ಹಾಗೂ ಹಿಂದುಳಿದ ವರ್ಗಗಳ ವಿಭಾಗದ ಬ್ಲಾಕ್ ಅಧ್ಯಕ್ಷರುಗಳು, ಮುಖಂಡರು ಹಾಗೂ ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.