ಲೋಕಸಭೆಯಲ್ಲಿ 28 ಸ್ಥಾನ ಗೆಲ್ಲುವುದು ಖಚಿತ


ಸಂಜೆವಾಣಿ ವಾರ್ತೆ
ಕೊಟ್ಟೂರು, ಫೆ.13: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಬಳ್ಳಾರಿ ಸೇರಿದಂತೆ 28 ಸ್ಥಾನಗಳಲ್ಲಿಯೂ ಬಿಜೆಪಿ ಗೆಲುವನ್ನು ಸಾಧಿಸುವುದು ಖಚಿತ ಎಂದು ಮಾಜಿ ಸಚಿವರಾದ ಶ್ರೀರಾಮುಲು ಹೇಳಿದರು.
ಪಟ್ಟಣದ ಬಾಲಾಜಿ ಕನ್ವೆನ್ಷನ್ ಹಾಲ್ನಲ್ಲಿ ಹಮ್ಮಿಕೊಂಡ  ಕೆ.ಎಸ್ ಈಶ್ವರಗೌಡ್ರು ಸ್ಮಾರಕ ಟ್ರಸ್ಟ್ ಮತ್ತು ಭಾರತೀಯ ಜನತಾ ಪಕ್ಷದ  ಸಹಯೋಗದಲ್ಲಿ ಹಮ್ಮಿಕೊಂಡ ವಿಜಯನಗರ ಜಿಲ್ಲೆಯ ಬಿಜೆಪಿ ಪಕ್ಷದ ಅಧ್ಯಕ್ಷರಾದ ಚನ್ನಬಸವನ ಗೌಡ್ರು ಪಾಟೀಲ್  ಅವರ ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಬಿಜೆಪಿ ಪಕ್ಷವು ಭೂತ್ ಮಟ್ಟದಲ್ಲಿ ಗೆಲ್ಲಬೇಕು. ಬಳ್ಳಾರಿಯಿಂದ ನಾಲ್ಕು ಬಾರಿ ಈಗಾಗಲೇ ಗೆದ್ದಿದ್ದೇವೆ ನಾವು ಐದನೇ ಬಾರಿ ಬಳ್ಳಾರಿ ಜಿಲ್ಲೆಯಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು  ಗೆಲ್ಲುವುದಕ್ಕೆ ಶ್ರಮಿಸಿ ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿಯಾಗಬೇಕು ಎಂದು    ತಿಳಿಸಿದರು. ದೇಶದಲ್ಲಿ  ಇಂಡಿಯಾ ಕೂಟದಿಂದ ಈಗಾಗಲೇ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕರು ಹೊರಗಡೆ ನಡೆದಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ  400ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.
ನಂತರ ಮಾಜಿ ಸಚಿವರಾದ ರೇಣುಕಾಚಾರ್ಯ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು  ಯಡಿಯೂರಪ್ಪ ಅವರು ಘೋಷಣೆ ಮಾಡಿದ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ವಾಪಸ್ ಪಡೆದುಕೊಂಡಿದ್ದಾರೆ, ರಾಜ್ಯದಲ್ಲಿ ಯುವ ನಿಧಿ, ಗೃಹಲಕ್ಷ್ಮಿ ಸೇರಿದಂತೆ ಎಲ್ಲಾ ಯೋಜನೆಗಳು  ಜನರಿಗೆ ಸೇರುವುದರಲ್ಲಿ ವಿಫಲವಾಗಿವೆ ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತಕ್ಕ ಪಾಠ ಕಲಿಸಿ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನ ಮಂತ್ರಿ ಆಗುವಂತೆ ಮಾಡಬೇಕು ಹಾಗಾಗಿ ಎಲ್ಲಾ ವರ್ಗದವರು ಸೇರಿ ನಮ್ಮ ರಾಜ್ಯದಿಂದ 28 ಸ್ಥಾನಗಳನ್ನು ಗೆಲ್ಲಿಸುವುದರ ಮೂಲಕ ಭಾರತೀಯ ಜನತಾ ಪಾರ್ಟಿಯನ್ನು ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಶ್ರಮ ವಹಿಸಬೇಕು ಎಂದು ತಿಳಿಸಿದರು.
ನಂತರ  ಸಂಸದ ವೈ ದೇವೇಂದ್ರಪ್ಪ ಮಾತನಾಡಿ ನಾನು ಶ್ರೀರಾಮುಲು, ಬಂಗಾರ ಹನುಮಂತು ಸೇರಿದಂತೆ ಅನೇಕರು ಬಳ್ಳಾರಿಯಿಂದ ಲೋಕಸಭೆ ಚುನಾವಣೆಯ  ಟಿಕೆಟ್ ಗಾಗಿ ಅರ್ಜಿಯನ್ನು ಸಲ್ಲಿಸಿದ್ದೇವೆ, ಹೈಕಮಾಂಡ್ ಟಿಕೆಟ್ ಯಾರಿಗೆ ನಿರ್ಧರಿಸುತ್ತೋ  ಅವರ ಬೆನ್ನೆಲುಬುವಾಗಿ ನಿಂತು ಬಳ್ಳಾರಿಯ ಲೋಕಸಭಾ ಕ್ಷೇತ್ರದ ಗೆಲುವಿಗಾಗಿ ನಾವೆಲ್ಲರೂ ಒಂದಾಗಿ ಶ್ರಮವಹಿಸೋಣ,
 ಚನ್ನಬಸವನಗೌಡ್ರು ಸತತ ನಾಲ್ಕನೇ ಬಾರಿ ಜಿಲ್ಲಾ ಅಧ್ಯಕ್ಷ ಆಗಿರುವುದು ಅವರ ಶ್ರಮದದಿಂದ ಎಂದು ತಿಳಿಸಿದರು.
ಬಲ್ಲಾಹುಣ್ಸಿ ರಾಮಣ್ಣ, ನಂದಿಹಳ್ಳಿ ಹಾಲಪ್ಪ ಬಂಗಾರ ಹನುಮಂತಪ್ಪ, ಭರಮನಗೌಡ್ರು ಪಾಟೀಲ್ ಮಾತನಾಡಿದರು.
 ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರಾದ ನ ನಂಜನಗೌಡ್ರು, ಕರ್ನಾಟಕ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಕಡ್ಲಿ ಈರಣ್ಣ,  ಪಿ.ಎಚ್ ಪಂಪಣ್ಣ, ಕೊಟ್ರೇಶ್, ಪಟ್ಟಣ ಪಂಚಾಯತಿ ಸದಸ್ಯರಾದ ಕೆಂಗಪ್ಪ. ಈಶ್ವರ ಗೌಡ್ರು ಸ್ಮಾರಕ ಟ್ರಸ್ಟ್ ನ ಅಧ್ಯಕ್ಷರಾದ ಕೆ ಎಸ್ ಈಶ್ವರಗೌಡ, ನಿವೃತ್ತ ಅಧೀಕ್ಷಕ ಅಭಿಯಂತಕರಾದ ಎಚ್ ಬಿ ಜಯಪ್ರಕಾಶ್, ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ  ಬಿ.ಸಿ ಮಹಾಬಲೇಶ್ವರ ಸೇರಿದಂತೆ ಅನೇಕ ಬಿಜೆಪಿಯ ಕಾರ್ಯಕರ್ತರು ಉಪಸ್ಥಿತರಿದ್ದರು.