ಲೋಕಸಭಾ ಚುನಾವಣೆ: ಕೃತಜ್ಞತೆ ತಿಳಿಸಿದ ಜಿಲ್ಲಾಧಿಕಾರಿ


ಬಳ್ಳಾರಿ, ಜೂ.06: ಲೋಕಸಭೆ ಸಾರ್ವತ್ತಿಕ ಚುನಾವಣೆ ಸಂಬಂಧ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೇ. 7 ರಂದು ಜರುಗಿದ ಮತದಾನ ಹಾಗೂ ಜೂ. 04 ರಂದು ನಡೆದ ಮತ ಎಣಿಕೆ ಕಾರ್ಯಗಳಲ್ಲಿ ಸಕ್ರಿಯಾಗಿ ತೊಡಗಿಕೊಂಡು ಸುಗಮ ಹಾಗೂ ಯಶಸ್ವಿ ಚುನಾವಣೆ ನಡೆಸಲು ಸಹಕರಿಸಿದ ಎಲ್ಲ ಇಲಾಖೆ ಅಧಿಕಾರಿಗಳು, ಪೊಲೀಸ್ ಇಲಾಖಾ ಅಧಿಕಾರಿ ಸಿಬ್ಬಂದಿಗಳು, ಸಾರ್ವಜನಿಕರು ಹಾಗೂ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಕಾಲಕಾಲಕ್ಕೆ ವ್ಯಾಪಕ ಪ್ರಚಾರ ನೀಡಿ ಸಹಕರಿಸಿದ ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾದ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಧನ್ಯವಾದಗಳನ್ನು ಸಲ್ಲಿದ್ದಾರೆ.