ಲೋಕಸಭಾ ಚುನಾವಣೆಯಲ್ಲಿ ಶೇ 85 ಕ್ಕಿಂತ ಹೆಚ್ಚು ಮತದಾನದ ಗುರಿ,


ಸಂಜೆವಾಣಿ ವಾರ್ತೆ
ದಾವಣಗೆರೆ ಏ.೧೬; ಪರೋಕ್ಷ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದಾಗಿದ್ದು ಮತದಾನದ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಆದರೆ ಹೆಚ್ಚು ಮತದಾನವಾಗುವುದರಿಂದ ಉತ್ತಮರ ಆಯ್ಕೆ ಸಾಧ್ಯವಿದೆ ಎಂದು ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ 85 ಕ್ಕಿಂತ ಹೆಚ್ಚು ಮತದಾನದ ಗುರಿ ಹೊಂದಲಾಗಿದ್ದು ಮತದಾನ ಜಾಗೃತಿಗೆ ಇಲಾಖಾವಾರು ಕಾರ್ಯಕ್ರಮ ರೂಪಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್ ಬಿ.ಇಟ್ನಾಳ್ ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಏರ್ಪಡಿಸುವ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಬ್ಬರ ಮತ ಅತ್ಯಮೂಲ್ಯವಾದದು, ಈ ನಿಟ್ಟಿನಲ್ಲಿ ಎಲ್ಲರೂ ಮೇ 7 ರಂದು ಮತಗಟ್ಟೆಗೆ ಬಂದು ಮತದಾನ ಮಾಡಬೇಕೆನ್ನುವುದು ನಮ್ಮ ಪ್ರಮುಖ ಗುರಿಯಾಗಿದೆ. ಕಳೆದ ಚುನಾವಣೆಯಲ್ಲಿ ಎಲ್ಲಿ ಮತದಾನ ಕಡಿಮೆಯಾಗಿದೆ ಮತ್ತು ಮತದಾನ ಹೆಚ್ಚಾದ ಕಡೆಯು ಮತದಾನ ಜಾಗೃತಿ ಕಾರ್ಯಕ್ರಮಗಳಾಗಬೇಕು. ಎಲ್ಲಿ ಕಡಿಮೆಯಾಗಿದೆ ಅಲ್ಲಿ ಹೆಚ್ಚು, ಎಲ್ಲಿ ಹೆಚ್ಚಾಗಿದೆ ಅಲ್ಲಿ ತುಸು ಹೆಚ್ಚಿನ ಮತದಾನವಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.ನವ ಯುವ ಮತದಾರರು, ಮಧ್ಯ ವಯಸ್ಕರು, ಮಹಿಳೆಯರು, ಹಿರಿಯ ನಾಗರಿಕರು, ವಿಶೇಷಚೇತನರು ಸೇರಿದಂತೆ ಎಲ್ಲ ವರ್ಗದ ಮತದಾರರ ಆಕರ್ಷಣೆ ನಮ್ಮ ಗುರಿಯಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 60 ಕ್ಕಿಂತ ಹೆಚ್ಚು ವಿಶೇಷ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಯುವ ಮತಗಟ್ಟೆ, ಸಖಿ, ವಿಶೇಷಚೇತನರು, ಸಂಪ್ರದಾಯಿಕ, ವಿಷಯಾಧಾರಿತ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತಿದಎಲ್ಲಾ ಮತಗಟ್ಟೆಯಲ್ಲಿ ಕನಿಷ್ಠ ಸೌಲಭ್ಯದ ಭರವಸೆ ಮೂಡಿಸುವುದು, ಸಾಂಪ್ರದಾಯಿಕ, ಸಾಂಸ್ಕøತಿಕ, ಜಾನಪದ ಕಾರ್ಯಕ್ರಮ, ಚರ್ಚಾಸ್ಪರ್ಧೆ, ಗುಂಪು ಚರ್ಚೆ, ಆನ್‍ಲೈನ್ ಸೇರಿದಂತೆ, ಮನೆ ಮನೆ ಭೇಟಿ, ಚುನಾವಣಾ ಆಯೋಗದ ಕ್ರಮಗಳ ಜಾಗೃತಿ, ಫ್ಯಾಷನ್ ಶೋ, ವಿವಿಧ ಪಂದ್ಯಾವಳಿಗಳು, ಜಾಥಾ, ಕವಾಲಿ, ಕಾರ್ಮಿಕರ ಅರಿವು, ಸಂಗೀತ ಕಾರ್ಯಕ್ರಮ, ಮ್ಯಾರಾಥಾನ್, ಕ್ವಿಜ್, ರೋಡ್‍ಶೋ,  ರೀಲ್ಸ್, ಸಾಹಸ ಕ್ರೀಡೆಗಳು, ಯೋಗಾ ಸೇರಿದದಂತೆ ಅನೇಕ ಕಾರ್ಯಕ್ರಮಗಳನ್ನು ರೂಪಿಸಲು ತಿಳಿಸಿದರು.