ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲವು ಖಚಿತ

ಕೋಲಾರ,ಮಾ,೧೬-ಮುಂಬರಲಿರುವ ಲೋಕಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್. ಮತ್ತು ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿಯು ಬಹುಮತಗಳಿಂದ ಗೆಲವು ಪಡೆಯುವುದು ಖಚಿತವಾಗಿದೆ ಜೆ.ಡಿ.ಎಸ್. ಪಕ್ಷದ ರಾಜ್ಯಾಧ್ಯಕ್ಷರಾದ ಕುಮಾರಣ್ಣನವರು ಈಗಾಗಲೇ ಸಮೀಕ್ಷೆಗಳನ್ನು ನಡೆಸಿದ್ದು ಗೆಲುವಿನ ವಿಶ್ವಾಸವನ್ನು ಹೊಂದಿದ್ದಾರೆ. ಜೆ.ಡಿ.ಎಸ್. ಪಕ್ಷವು ಕಾಂಗ್ರೇಸ್ ನಂತರದ ಅತಿ ಹೆಚ್ಚು ಮತಗಳನ್ನು ಪಡೆದಿರುವ ಹಿನ್ನಲೆಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆ.ಡಿ.ಎಸ್. ಪಕ್ಷಕ್ಕೆ ಅದ್ಯತೆ ನೀಡಿದ್ದಾರೆ ಎಂದು ಜೆ.ಡಿ.ಎಸ್. ಪಕ್ಷದ ಮುಖಂಡ ಸಿಎಂಆರ್. ಶ್ರೀನಾಥ್ ಅಭಿಪ್ರಾಯ ಪಟ್ಟರು,
ನಗರದ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ ಕೋಲಾರ ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಮಲ್ಲೇಶ್ ಬಾಬು, ಸಮೃದ್ದಿ ಮಂಜುನಾಥ್ ಹಾಗೂ ನಿಸರ್ಗ ನಾರಾಯಣಸ್ವಾಮಿ ಸೇರಿದಂತೆ ಮೂರು ಮಂದಿ ಅಕಾಂಕ್ಷಿಗಳಿದ್ದಾರೆ. ಸಮೃದ್ದಿ ಮಂಜುನಾಥ್ ಮುಳಬಾಗಿಲು ಕ್ಷೇತ್ರದ ಶಾಸಕರಾಗಿದ್ದಾರೆ. ಅವರು ಆಯ್ಕೆಯಾದಲ್ಲಿ ಮುಳಬಾಗಿಲು ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಸ ಬೇಕಾಗ ಬಹುದು ಎಂಬುವುದನ್ನು ಸಹ ಗಮನಿಸಿ ವರಿಷ್ಟರು ಮುಂದಿನ ತೀರ್ಮಾನ ತೆಗೆದು ಕೊಳ್ಳಲಿದ್ದಾರೆ. ನಾವು ಯಾರಿಗೆ ಟಿಕೆಟ್ ಹಂಚಿಕೆ ಮಾಡಿದರೂ ಹಗಲು ರಾತ್ರಿ ಕೆಲಸ ನಿರ್ವಹಿಸಿ ಗೆಲ್ಲಿಸಿ ಕೊಳ್ಳುವ ವಿಶ್ವಾಸವನ್ನು ಹೊಂದಿರುವುದಾಗಿ ತಿಳಿಸಿದರು,
ಪ್ರಶ್ನೆಯೊಂದಕ್ಕೆ ಬಿಜೆಪಿ ಪಕ್ಷದ ಸಂಸದ ಎಸ್. ಮುನಿಸ್ವಾಮಿ ಅವರು ಈಗಾಗಲೇ ಆಯ್ಕೆಯಾಗಿದ್ದು, ಮರು ಆಯ್ಕೆ ಬಯಸುವುದು ಸಹಜ ಅದರಲ್ಲಿ ತಪ್ಪೇನೂ ಇಲ್ಲವಲ್ಲ. ಇಷ್ಟು ದಿನಗಳಿಂದ ಟಿಕೆಟ್ ಹಂಚಿಕೆಯು ತೀರ್ಮಾನಿಸರಲಿಲ್ಲ ಬೇರೆ ಪ್ರತಿಷ್ಠಿತ ಕ್ಷೇತ್ರಗಳ ಕಡೆ ಗಮನ ಹರಿಸಲಾಗಿತ್ತು ಹಾಗಾಗಿ ಕೋಲಾರ ಕ್ಷೇತ್ರದ ಕುರಿತು ತೀರ್ಮಾನಿಸರಿಲಿಲ್ಲ ಎಂದರು
ಲೋಕಸಭಾ ಚುನಾವಣೆಗಾಗಿ ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿ ಕೊಂಡಿರುವ ನಮ್ಮ ಪಕ್ಷವು ( ಜೆ.ಡಿ.ಎಸ್.) ಕೋಲಾರ,ಮಂಡ್ಯ, ಹಾಸನ ಸೇರಿದಂತೆ ಮೂರು ಕ್ಷೇತ್ರಗಳಲ್ಲಿ ಸ್ವರ್ಧಿಸುತ್ತಿದೆ ಎಂದು ಜೆ.ಡಿ.ಎಸ್. ಪಕ್ಷದ ರಾಜ್ಯಾಧ್ಯಕ್ಷರಾದ ಕುಮಾರಣ್ಣ ಮೈಸೂರಿನಲ್ಲಿ ಪ್ರಕಟಿಸಿದ್ದಾರೆ. ಇನ್ನು ಕೆಲವು ಕ್ಷೇತ್ರಗಳನ್ನು ಜೆ.ಡಿ.ಎಸ್. ಪಡೆಯ ಬಹುದಾಗಿತ್ತು ಅದರೆ ನಮ್ಮ ಪಕ್ಷದ ವರಿಷ್ಠರು ಕೇಳಲಿಲ್ಲ.ಕೇಳಿದ್ದರೆ ಇನ್ನು ಹಲವು ಕ್ಷೇತ್ರಗಳಲ್ಲಿ ಸ್ವರ್ಧಿಸಲು ಅವಕಾಶ ಸಿಗುತ್ತಿತ್ತು ಎಂದು ಹೇಳಿದರು,
ರಾಜ್ಯದ ೨೮ ಕ್ಷೇತ್ರಗಳಲ್ಲೂ ಎನ್.ಡಿ.ಎ. ಅಭ್ಯರ್ಥಿಗಳನ್ನು ಗೆಲ್ಲಿಸ ಬೇಕು, ರಾಷ್ಟ್ರದಲ್ಲಿ ನರೇಂದ್ರ ಮೋದಿಯವರು ಮತ್ತೋಮ್ಮೆ ಪ್ರಧಾನಿಯಾಗ ಬೇಕೆಂಬುವುದು ನಮ್ಮ ಗುರಿಯಾಗಿದೆ. ರಾಷ್ಟ್ರದಲ್ಲಿ ಶಾಂತಿ, ಸೌಹಾರ್ಧತೆ ಕಾಪಾಡಲು ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗವುದು ಅತ್ಯಗತ್ಯವಾಗಿದೆ. ಈಗಾಗಲೇ ದೇವೇಗೌಡರು ಮೋದಿಯವರೊಂದಿಗೆ ಮಾತು ಕತೆ ನಡೆಸಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ.ಅದರೆ ಮೈತ್ರಿ ಬೇರೆ, ಜೆ.ಡಿ.ಎಸ್ ತತ್ವ ಸಿದ್ದಾಂತಗಳು ಬೇರೆಯಾಗಿ ಇರುತ್ತವೆ. ನಮ್ಮದು ಜಾತ್ಯತೀತ ತತ್ವ ಸಿದ್ದಾಂತಗಳು ಬದಲಾಗದು. ಈ ವಿಷಯದಲ್ಲಿ ಯಾವೂದೇ ರೀತಿ ರಾಜಿ, ಸಂಧಾನಗಳು ಇಲ್ಲ ಹಾಗೂ ಯಾವೂದೇ ಬದಲಾವಣೆ ಇರುವುದಿಲ್ಲ,ಎಂದು ಪ್ರಶ್ನೆಯೊಂದಕ್ಕೆ ಸ್ವಷ್ಟಪಡಿಸಿದರು,
ಜೆ.ಡಿ.ಎಸ್ ಮತ್ತು ಬಿಜೆಪಿ ಮೈತ್ರಿ ಯಶಸ್ವಿಯಾದರೆ ಮುಂದಿನ ಚುನಾವಣೆಗಳಲ್ಲೂ ಮೈತ್ರಿಯನ್ನು ಹೈ ಕಮಾಂಡ್ ಮುಂದುವರೆಸುವ ಸಾಧ್ಯತೆ ಇದೆ, ಎರಡು ಪಕ್ಷಗಳಲ್ಲೂ ಸಮನ್ವಯ ಸಮಿತಿಗಳನ್ನು ರಚಿಸಿ ಕೊಂಡು ಗ್ರಾಮ ಪಂಚಾಯಿತಿ ಹಾಗೂ ಹೋಬಳಿವಾರು ಸಭೆಗಳನ್ನು ನಡೆಸಲಾಗುವುದು. ಎರಡು ಪಕ್ಷಗಳಲ್ಲೂ ಹೊಂದಾಣಿಕೆ ಮಾಡಿ ಕೊಂಡು ಹೋಗುವುದು ಕಷ್ಟಕರವಾದರೂ ಎಲ್ಲರನ್ನು ಒಗ್ಗೂಡಿಸಿ ಕೊಂಡು ಮೃತ್ರಿಯನ್ನು ನಿಭಾಯಿಸುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು,
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ನಂತರ ದರಿದ್ರತೆ ಕಾಡುತ್ತಿದೆ. ನೀರಿಗೆ ಅಭಾವ, ವಿದ್ಯುತ್ ಅಭಾವ ಸೇರಿದಂತೆ ಕನಿಷ್ಟ ಜನರಿಗೆ ಮೂಲ ಭೂತ ಸೌಲಭ್ಯ ಕಲ್ಪಿಸುವಲ್ಲೂ ವಿಫಲರಾಗಿದ್ದಾರೆ. ನತದೃಷ್ಟ ಕಾಂಗ್ರೇಸ್ ಸರ್ಕಾರದಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತ ಮಂಡಳಿ ರಚನೆ ಮಾಡದೆ ಸಂಪೂರ್ಣವಾಗಿ ಕುಸಿದಿದೆ. ಶಾಸಕಾಂಗಕ್ಕೆ ಕಾರ್ಯಾಂಗದ ಮೇಲೆ ಹಿಡಿತ ಇಲ್ಲದೆ ಎಲ್ಲೆಡೆ ಭ್ರಷ್ಟಚಾರವು ತಂಡವಾಡುತ್ತಿದೆ. ಜನರಿಗೆ ಉದ್ಯೋಗವಿಲ್ಲದೆ, ಜೀವನ ನಿರ್ವಾಹಣೆಗಾಗಿ ಬಿಜಾಪುರ,ಬಾಗಲಕೋಟೆ ಸೇರಿದಂತೆ ಉತ್ತರ ಭಾಗದಲ್ಲಿ ಜನರು ಗುಳೆ ಹೋಗುತ್ತಿದ್ದಾರೆ. ರಾಜ್ಯದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದರು,