ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪಾಠ ಕಲಿಸಿ

ಕೋಲಾರ, ಜೂ,೨೩- ಕಾಂಗ್ರೆಸ್ ಪಕ್ಷವು ಅಧಿಕಾರದ ಮದದಲ್ಲಿ ಮೆರೆಯುತ್ತಿದೆ.ಮುಂ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಜನತೆ ಬುದ್ದಿ ಕಲಿಸಲು ಸಿಗುವ ಅವಕಾಶವನ್ನು ಸದ್ಬಳಿಸಿ ಕೊಳ್ಳಲಿದ್ದಾರೆ. ಈಗಾಗಲೇ ಗ್ಯಾರಂಟಿ ಯೋಜನೆಗಳಿಂದ ಜನತೆ ಕಾಂಗ್ರೆಸ್ ಪಕ್ಷ ಮತ ನೀಡಿ. ಈಗ ವಂಚನೆಗೆ ಒಳಗಾಗಿರುವ ಅರಿವುಂಟಾಗಿ ಪಶ್ಚತಾಪ ಪಡುತ್ತಿದ್ದಾರೆ ಎಂದು ಮಾಜಿ ಉಪ ಮುಖ್ಯ ಮಂತ್ರಿ ಆರ್.ಅಶೋಕ್ ತಿಳಿಸಿದರು.
ನಗರ ಹೊರವಲಯದ ರತ್ನ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ಬಿಜೆಪಿ ಪಕ್ಷವು ಆಯೋಜಿಸಿದ್ದ ಜಿಲ್ಲಾ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ ಕಾಂಗ್ರೇಸ್ ಪಕ್ಷವು ಚುನಾವಣೆ ಸಂದರ್ಭದಲ್ಲಿ ನೀಡಿದ್ದ ೫ ಗ್ಯಾರೆಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ೨೪ ಗಂಟೆಯಲ್ಲಿ ಅನುಷ್ಟನಕ್ಕೆ ತರುತ್ತೇವೆ ಎಂದು ತಿಳಿಸಿ ಅಧಕಾರಕ್ಕೆ ಬಂದು ೪೦ ದಿನಗಳಾದರೂ ಸಹ ಪರಿಪೂರ್ಣವಾಗಿ ಅನುಷ್ಟನಕ್ಕೆ ತರುವಲ್ಲಿ ವಿಫಲವಾಗಿದ್ದು ಒಂದೊಂದು ಗ್ಯಾರೆಂಟಿಗೆ ಒಂದೊಂದು ಕಾರಣಗಳನ್ನು ಹೇಳಿ ಅದಕ್ಕೆ ಕೇಂದ್ರದಲ್ಲಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಮುಂದೊಡುತ್ತಾ ಬರುತ್ತಿದೆ ಎಂದರು.
ಲೋಕ ಸಭೆ ಚುನಾವಣೆಗೆ ಇನ್ನು ೨-೩ ತಿಂಗಳು ಬಾಕಿ ಎನ್ನುವಾಗ ಗ್ಯಾರೆಂಟಿಗಳನ್ನು ಅನುಷ್ಠನಕ್ಕೆ ತಂದು ಲೋಕಸಭಾ ಚುನಾವಣೆಯಲ್ಲಿ ಮತ್ತೆ ಜನರಿಗೆ ವಂಚಿಸಲು ಕಾಂಗ್ರೇಸ್ ಕುತಂತ್ರವನ್ನು ರೂಪಿಸಿ ಕೊಂಡಿದೆ ಜನರಿಗೆ ಈ ಕುರಿತು ಜಾಗ್ರತೆಯನ್ನು ಮೋಡಿಸುವ ಕೆಲಸವನ್ನು ಬಿಜೆಪಿ ಪಕ್ಷವು ಮಾಡ ಬೇಕಾಗಿದೆ. ನಾವುಗಳು ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಯೋಜನೆಗಳನ್ನು ಸಮರ್ಪಕವಾಗಿ ಜನತೆಗೆ ತಿಳಿಸುವಲ್ಲಿ ನಾವು ವಿಫಲ ಹೊಂದಿದ ಹಿನ್ನಲೆಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನಪ್ಪ ಬೇಕಾಗಿ ಬಂದಿತ್ತು ಎಂದ ಅವರು ಇದೇ ರೀತಿ ವಾಜಪೇಯಿ ಅವರ ಅಡಳಿತದಲ್ಲಿ ಅಗಿತ್ತು. ಇದು ಮರುಕಳುಸದಂತೆ ಕಾರ್ಯಕರ್ತರು ಜನರಲ್ಲಿ ಅರಿವು ಮೋಡಿಸುವಂತಾಗ ಬೇಕೆಂದು ಕರೆ ನೀಡಿದರು,
ಕಾಂಗ್ರೆಸ್ ಪಕ್ಷವು ವಿಧಾನದ ಮೇಲೆ ೫ ಗ್ಯಾರೆಂಟಿಗಳಿಗೆ ನಾಳೆ ಬಾ ಎಂದು ಹಾಕಿದೆ. ೨೦೦ ಯೊನಿಟ್ ವಿದ್ಯುತ್ ಉಚಿತ. ಪದವಿಧರ ನಿರುದ್ಯೋಗಿಗಳಿಗೆ ೩ ಸಾವಿರ ರೂ ಭತ್ಯೆ, ಮನೆ ಯಾಜಮಾನಿಗೆ ೨ ಸಾವಿರ ರೂ, ೧೦ ಕೆ.ಜಿ.ಅಕ್ಕಿ, ಉಚಿತ ಬಸ್‌ಗಳು ಎಲ್ಲದಕ್ಕೂ ಈಗಾ ಕರಾರುಗಳನ್ನು ಹಾಕುವ ಮೂಲಕ ಜನತೆ ನೀಡಿದ್ದ ಆಶ್ವಾಸನೆಗಳನ್ನು ವಂಚಿಸಲು ಮುಂದಾಗಿದೆ.
ಈಗಾಗಲೇ ಕ್ಯಾಬಿನೆಟ್ ಸಭೆಯ ನಂತರ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅಧಿಕಾರಗಳನ್ನು ಸಭೆಯಿಂದ ಹೊರಗೆ ಇಟ್ಟು ಸಚಿವರೊಂದಿಗೆ ನಾವು ರಾಜ್ಯದಲ್ಲಿ ಯಾವ ಗ್ಯಾರೆಂಟಿಗಳನ್ನು ಬಹಳಷ್ಟು ದಿನ ಮುಂದುವರೆಸಲು ಸಾಧ್ಯವಿಲ್ಲ .ಎಲ್ಲದಕ್ಕೂ ಏನೊ ಒಂದು ಕಾರಣ ತೋರಿಸಿ ಕೇಂದ್ರದ ಮೋದಿ ಮೇಲೆ ಅರೋಪ ಮಾಡೋಣಾ, ಲೋಕ ಸಭೆ ಚುನಾವಣೆಯವರೆಗೆ ಮೇನೆಜ್ ಮಾಡಿದ ಮೇಲೆ ಮುಂದಿನ ೪ ವರ್ಷ ನಮ್ಮನ್ನು ಕೇಳುವವರೋ ಇರುವುದಿಲ್ಲ ಎಂದು ನಿರ್ದರಿಸಿದ್ದಾರೆ.

ಹಾಗಾಗಿ ನಾವು ಮುಂದಿನ ದಿನಗಳಲ್ಲಿ ಜನರ ಮಧ್ಯೆ ಇದ್ದು ಸಂಘಟಿಸುವ ಮೂಲಕ ಹೋರಾಟಗಳನ್ನು ಮಾಡ ಬೇಕಾಗಿರುವುದು ಅನಿವಾರ್ಯವಾಗಿದೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ೨೮ ಸ್ಥಾನಗಳ ಪೈಕಿ ೨೫ ಸ್ಥಾನಗಳನ್ನು ಪಡೆಯುವಂತಾಗ ಬೇಕು. ಎಲ್ಲರೂ ಈಗಿನಿಂದಲೇ ಸಂಘಟನೆ ಕಾರ್ಯದಲ್ಲಿ ತೊಡಗಿಸಿ ಕೊಳ್ಳಬೇಕೆಂದು ತಿಳಿಸಿದರು,