ಲೋಕಸಭಾ ಚುನಾವಣೆಗೆ ಸಜ್ಜು: ಯಲಹಂಕದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾಕ್ಷೇತ್ರದ ರಣಕಣ ರಂಗೇರುತ್ತಿರುವ ಬೆನ್ನಲ್ಲೆ ಯಲಹಂಕ ಕ್ಷೇತ್ರದಿಂದ ಬಿಜೆಪಿ ಪ್ರಚಾರ ಕಾರ್ಯದ ರಣಕಹಳೆ ಆರಂಭಿಸಿದೆ.
ಲೋಕಸಭಾ ಚುನಾವಣೆ ಹಿನ್ನಲೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ಕೈಗೊಂಡು ಯಲಹಂಕದಿಂದ ಹೊಸಕೋಟೆವರೆಗೂ ಬೃಹತ್ ರ?ಯಾಲಿ ನಡೆಸಿದರು.
ಮಾಜಿ ಸಚಿವ, ಚಿಕ್ಕಬಳ್ಳಾಪುರಪುರ ಕ್ಷೇತ್ರ ಬಿಜೆಪಿ ಚುನಾವಣಾ ಉಸ್ತುವಾರಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಬಿಜೆಪಿ ಮುಖಂಡರು ಸಾಥ್ ನೀಡಿದರು.
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಅಲೋಕ್ ವಿಶ್ವನಾಥ್ ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಕಾರ್‌ರ?ಯಾಲಿಯಲ್ಲಿ ಪಾಲ್ಗೊಂಡಿದ್ದು ಈ ಮೂಲಕ ಕಾರ್ಯಕರ್ತರು ಶಕ್ತಿಪ್ರದರ್ಶನ ಮಾಡಿದರು.
ಸುಮಾರು ೬೦೦ಕ್ಕೂ ಹೆಚ್ಚು ಕಾರುಗಳು ರ?ಯಾಲಿಯಲ್ಲಿ ಪಾಲ್ಗೊಂಡು ಯಲಹಂಕ, ದೊಡ್ಡಬಳ್ಳಾಪುರ, ಸೇರಿದಂತೆ ೭ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದ್ದು ದೇವನಹಳ್ಳಿ ಕ್ಷೇತ್ರದ ಬೂದಿಗೆರೆ ಗ್ರಾಮದಲ್ಲಿ ಅಂತ್ಯಗೊಳ್ಳಲಿದೆ.
ಈ ವೇಳೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದೇವೆ. ಹತ್ತುದಿನದೊಳಗೆ ಟಿಕೆಟ್ ಪಟ್ಟಿ ಅಂತಿಮವಾಗಲಿದೆ.ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಯಾರಿಗೆ ಸಿಕ್ಕರು ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಕಾರ್ಯತಂತ್ರ ರೂಪಿಸಲಾಗುವುದು. ೩ಲಕ್ಷ ಮತಗಳ ಮೂಲಕ ಬಿಜೆಪಿ ಅಭ್ಯರ್ಥಿಯನ್ನು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಂದು ಕಾರ್‌ರ?ಯಾಲಿ ಹಮ್ಮಿಕೊಂಡಿದ್ದೇವೆ ಪ್ರತಿ ವಿಧಾನಸಭಾಕ್ಷೇತ್ರದಿಂದ ೨೦೦ಕಾರ್‌ಗಳು ಸೇರಿಕೊಳ್ಳಲಿವೆ ಎಂದು ಅವರು ತಿಳಿಸಿದರು.
ಬೃಹತ್ ರ?ಯಾಲಿಯಲ್ಲಿ ಬಿಜೆಪಿ ಕಿಸಾನ್ ಮೋರ್ಚಾ ರಾಜ್ಯ ಕಾರ್ಯದರ್ಶಿ ಕಡತನಮಲೆ ಸತೀಶ್, ಹಿರಿಯಮುಖಂಡರಾದ ದಿಬ್ಬೂರು ಜಯಣ್ಣ,ಎಸ್.ಎನ್.ರಾಜಣ್ಣ, ಬಿಜೆಪಿ ಯಲಹಂಕ ಗ್ರಾ.ಮಂಡಲ ಅಧ್ಯಕ್ಷ ಬಿ.ಹನುಮಯ್ಯ, ಪ್ರಧಾನ ಕಾರ್ಯದರ್ಶಿ ಜನಾರ್ಧನ್ ಜಾನಿ, ಎಸ್.ಜಿ.ನರಸಿಂಹಮೂರ್ತಿ(ಎಸ್‌ಟಿಡಿ ಮೂರ್ತಿ), ಎ.ಸಿ.ಮುನಿಕೃಷ್ಣಪ್ಪ, ಚೊಕ್ಕನಹಳ್ಳಿ ವೆಂಕಟೇಶ್, ಎಸ್.ಜಿ.ಪ್ರಶಾಂತ್‌ರೆಡ್ಡಿ, ಸೇರಿದಂತೆ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.