ಲೋಕಸಭಾ ಚುನಾವಣೆಗೆ ರಕ್ಷ ರಾಮಯ್ಯಗೆ ಟಿಕೆಟ್ ಕೊಡಿಸಲು ಪ್ರಯುತ್ನ;ಸೀತಾರಾಂ

ಚಿಕ್ಕಬಳ್ಳಾಪುರ: ಜು.೧-ಮುಂಬರುವ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ನನ್ನ ಮಗ ರಕ್ಷಾ ರಾಮಯ್ಯ ರವರಿಗೆ ಟಿಕೆಟ್ ದೊರಕಿಸಿಕೊಡಲು ನಾನು ಪ್ರಯತ್ನ ಪಡುತ್ತೇನೆ ಕಾಂಗ್ರೆಸ್ ಪಕ್ಷದ ಬಿ ಫಾರಂ ನಮಗೆ ದೊರೆತರೆ ಈ ಕ್ಷೇತ್ರದಿಂದ ಜಯ ಖಚಿತವಾದಂತೆ ಆಗುತ್ತದೆ ಎಂದು ಮಾಜಿ ಸಚಿವ ಎಂ .ಆರ್. ಸೀತಾರಾಮ್ ತಿಳಿಸಿದರು .
ಅವರು ನಗರದಲ್ಲಿ ಖಾಸಗಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದು ನಂತರ ಸುದ್ದಿಗಾರರೊಂದಿಗೆ ಮಾತನಾಡಿ ೨೦೦೯ರಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಹಿಂದುಳಿದ ವರ್ಗಗಳ ನಾಯಕ ರಾಗಿದ್ದ. ಆರ್. ಎಲ್. ಜಾಲಪ್ಪ ರವರು ನನ್ನನ್ನು ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ರವರ ಬಳಿ ಕರೆದುಕೊಂಡು ಹೋಗಿ ಇವರಿಗೆ ಲೋಕಸಭಾ ಸದಸ್ಯ ಸ್ಥಾನದ ಟಿಕೆಟ್ ನೀಡಬೇಕು ಎಂದು ಹೇಳಿದ್ದರು ಆದರೆ ವೀರಪ್ಪ ಮೈಲಿ ರವರು ಲೋಕಸಭಾ ಸದಸ್ಯರಾದರು ನಾವು ಅವರ ಜಯಕ್ಕಾಗಿ ಶ್ರಮಿಸಿದ್ದೆವು ಅದಾದ ನಂತರ ೨೦೧೪ ಮತ್ತು ೨೦೧೯ ರಲ್ಲಿಯೂ ಸಹ ಅವರೇ ಲೋಕಸಭಾ ಸದಸ್ಯತ್ವದಕ್ಕಾಗಿ ಟಿಕೆಟ್ ಪಡೆದಿದ್ದರು ನಮಗೆ ತುಂಬಾ ಬೇಸರವಾಗಿ ಸಾಯುವವರೆಗೂ ವೀರಪ್ಪ ಮೊಯ್ಲಿನೇ ಸದಸ್ಯರಾಗಲಿ ಎಂದು ಸುಮ್ಮನಾದೆವು.
ಈಗ ಇಲ್ಲಿನ ಕಾಂಗ್ರೆಸ್ ಮುಖಂಡರುಗಳ ಮತ್ತು ಕಾರ್ಯಕರ್ತರುಗಳ ಒತ್ತಾಯ ನಮ್ಮ ಕುಟುಂಬದವರು ಲೋಕಸಭಾ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಬೇಕು ಎಂಬುದಾಗಿದೆ ಈ ಕಾರಣದಿಂದ ನನ್ನ ಮಗ ರಕ್ಷಾ ರಾಮಯ್ಯ ಇಲ್ಲಿನ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದು ಅವರಿಗೆ ಟಿಕೆಟ್ ಕೊಡಿಸುವುದಕ್ಕೆ ನಾನು ಪ್ರಯತ್ನಿಸುತ್ತೇನೆ ಎಂದರು.
ರಾಜ್ಯದಲ್ಲಿ ಸಿದ್ದರಾಮಯ್ಯರವರ ನೇತೃತ್ವದ ಸರ್ಕಾರ ಚುನಾವಣಾ ಪೂರ್ವ ಮತದಾರರಿಗೆ ನೀಡಿದ್ದ ಗ್ಯಾರಂಟಿಗಳ ಭರವಸೆ ಈಡೇರಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಅಕ್ಕಿ ಕೊಡುವಲ್ಲಿ ಕೇಂದ್ರ ಸರ್ಕಾರ ಮಲ್ತಾಯಿದ್ದೋರಣೆ ತಳಿದಿದೆ ಇದು ಸರಿ ಅಲ್ಲ ಆದ ಕಾರಣ ಸಿದ್ದರಾಮಯ್ಯರವರು ಎಷ್ಟೇ ಕಷ್ಟವಾದರೂ ೫ ಕೆಜಿ ಅಕ್ಕಿ ಹಾಗೂ ಉಳಿದಂತೆ ೫ ಕೆಜಿಗೆ ಸಮಾನಾಂತರವಾಗಿ ಹಣ ಫಲಾನುಭವಿಗಳ ಖಾತೆಗೆ ಹೇಳಿದ್ದಾರೆ ಇದು ಅವರ ಬದ್ಧತೆಯನ್ನು ಸೂಚಿಸುತ್ತದೆ ಎಂದರು.
ಭಾರತೀಯ ಜನತಾ ಪಕ್ಷದವರು ಮೊಸರಿನಲ್ಲಿ ಕಲ್ಲನ್ನು ಹುಡುಕುವ ಕೆಲಸ ಮಾಡುತ್ತಿದ್ದಾರೆ ತಮ್ಮಲ್ಲೇ ನೂರಾರು ಲೋಕಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ದೂಷಿಸುತ್ತಾರೆ ಇದು ಅವರ ಯೋಗ್ಯತೆಯನ್ನು ಸೂಚಿಸುತ್ತದೆ ಬಿಜೆಪಿಯವರಿಗೆ ಸಂಸ್ಕಾರ ಇಲ್ಲ ಬಿಜೆಪಿ ಮುಖಂಡರುಗಳಾದ ಸಿಟಿ ರವಿ ಅಶೋಕ್ ಮುಂತಾದವರು ಸಂಸ್ಕಾರವಿಲ್ಲದೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಇದು ಸರಿ ಅಲ್ಲದ ಇವರುಗಳು ಪರಿಪಕ್ವತೆ ಇಲ್ಲದ ರಾಜಕಾರಣಿಗಳು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಾ ರಾಮಯ್ಯ ರವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಬಲವಾದ ಪ್ರಯತ್ನ ನಡೆಸುತ್ತೇವೆ. ಪ್ರತಿಸ್ಪರ್ಧಿ ಯಾರೇ ಆದರೂ ಚಿಂತೆ ಇಲ್ಲ ಕಾಂಗ್ರೆಸ್ ಪಕ್ಷಕ್ಕೆ ಶತಮಾನಕ್ಕೂ ಅಧಿಕ ಇತಿಹಾಸ ಇದೆ ಅಲ್ಲದೆ ಈ ಭಾಗದಲ್ಲಿ ನಮ್ಮನ್ನು ಬೆಂಬಲಿಸುವವರು ಲಕ್ಷಾಂತರ ಮಂದಿ ಇದ್ದಾರೆ ವೀರಪ್ಪ ಮೈಲಿ ರವರು ಮಾಡುವ ಪ್ರಯತ್ನ ಅವರು ಮಾಡಲಿ ಮಾಜಿ ಸಚಿವ ಸುಧಾಕರ್ ಸ್ಪರ್ಧೆ ಮಾಡುವರು ಎಂಬ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದ ರಕ್ಷಾ ರಾಮಯ್ಯ ಪ್ರತಿಸ್ಪರ್ಧಿಗಳು ಯಾರೇ ಆಗಲಿ ನಮಗೇನು ಅಡ್ಡಿಯಿಲ್ಲ ಇದು ಪ್ರಜಾಪ್ರಭುತ್ವ ರಾಷ್ಟ್ರ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಂ. ಬಿ .ಚಿಕ್ಕನರಸಿಂಹಯ್ಯ ಚಿನ್ನಿ ಮಾಜಿ ಶಾಸಕ ಮುನಿಯಪ್ಪ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಬಿ ಎಸ್ ರಫಿ ಉಲ್ಲಾ ನಾಯನ ಹಳ್ಳಿ ನಾರಾಯಣಸ್ವಾಮಿ ಕುಬೇರ ಅಚ್ಚು ಹಾಜರಿದ್ದರು.