
ಕೋಲಾರ,ಸೆ,೧- ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲು ಉಂಟಾಗಿದ್ದರೂ ಧೃತಿಗೆಡದೆ ಲೋಕ ಸಭಾ ಚುನಾವಣೆಯಲ್ಲಿ ಮತದಾರರು ಪಕ್ಷವನ್ನು ಕೈ ಬಿಟ್ಟು ಹೋಗದಂತೆ ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಶೇಷ ಚಿಂತನ ಮಂಥನಗಳನ್ನು ನಡೆಸಿ ರಣ ತಂತ್ರಗಳನ್ನು ರೂಪಿಸುವಂತೆ ಪಕ್ಷದ ಪ್ರಮುಖರಿಗೆ ಬಿಜೆಪಿ ಸೂಚನೆ ನೀಡಿದೆ
ಆಡಳಿತರೂಢ ಕಾಂಗ್ರೇಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಅನುಷ್ಠನದಿಂದ ಮತದಾರರು ಕಾಂಗ್ರೇಸ್ ಪಕ್ಷದತ್ತ ಅಕರ್ಷಿತರಾಗದಂತೆ ಪಕ್ಷದಡೆಗೆ ಸೆಳೆಯಲು ಮುಂದಾಗ ಬೇಕೆಂದು ಸಲಹೆ, ಸೂಚನೆಗಳನ್ನು ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನ ಬಿಜೆಪಿ ಪಕ್ಷದ ಕಚೇರಿಯಲ್ಲಿ ಗುರುವಾರ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್‌ಜೀ ಅವರ ನೇತ್ರತ್ವದಲ್ಲಿ ನಡೆದ ಲೋಕಸಭಾ ಕ್ಷೇತ್ರಗಳ ಮತದಾರ ಚೇತನ ಮಹಾ ಅಭಿಯಾನ ಸಭೆಯಲ್ಲಿ ಮುಂಬರಲಿರುವ ಲೋಕಸಭಾ ಚುನಾವಣೆಗೆ ಪಕ್ಷವನ್ನು ಮತ್ತಷ್ಟು ಸಂಘಟಿಸಿ ಹೆಚ್ಚಿನ ಸ್ಥಾನ ಗಳಿಸುವ ಕುರಿತು ಚರ್ಚಿಸಲಾಯಿತು.
ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮಾಜಿ ಸಿ.ಎಂ. ಡಿ.ವಿ ಸದಾನಂದಗೌಡ, ಮಾಜಿ ಸಚಿವ ಗೋವಿಂದಕಾರಜೋಳ ಸಂಸದ ಎಸ್.ಮುನಿಸ್ವಾಮಿ, ತೇಜಸ್ವಿಸೂರ್ಯ,ಶಾಸಕರಾದ ಎಸ್.ಆರ್. ವಿಶ್ವನಾಥ್ ರಮೇಶ್, ಜಾರಕಿಹೊಳಿ, ಶಿವರಾಜ್ ಸಿಂಗ್ ಪಾಟೀಲ್. ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಮಾಜಿ ಶಾಸಕರಾದ ವೈ,ಸಂಪಂಗಿ, ಬೆಳ್ಳಿ ಪ್ರಕಾಶ್, ಪ್ರೀತಂಗೌಡ, ತಿಪ್ಪಾರೆಡ್ಡಿ ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು,
ಕಳೆದ ಎರಡು ದಿನಗಳ ಹಿಂದೆ ಕೇಂದ್ರ ಸರ್ಕಾರವು ಗೃಹಬಳಕೆಯ ಅಡುಗೆ ಅನಿಲದ ದರವನ್ನು (೧೪ ಕೆ.ಜಿ.) ರೂ ೨೦೦ ಕಡಿತ ಗೋಳಿಸಿರುವ ಘೋಷಣೆ ಮಾಡಿದೆ ಈ ಯೋಜನೆಗೆ ಇನ್ನು ೭೫ ಲಕ್ಷ ಫಲಾನುಭವಿಗಳನ್ನು ಸೇರ್ಪಡೆ ಮಾಡಲು ಮುಂದಾಗಿದೆ. ಇದರ ಬಗ್ಗೆ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಸಮರ್ಪಕವಾಗಿ ಮನವರಿಕೆ ಮಾಡಬೇಕೆಂದು ತಿಳಿಸಲಾಗಿದೆ.
ಸೆ,೧೮ ರಿಂದ ೨೨ರವರೆಗೆ ೫ ದಿನಗಳ ಕಾಲ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಪ್ರಮುಖವಾದ ೫ ಕಲಾಪಗಳು ನಡೆಯಲಿದೆ ಅದರೆ ಈ ಕಲಾಪವು ನೂತನ ಕಟ್ಟಡದಲ್ಲಿ ನಡೆಯುವುದೋ ಅಥವಾ ಹಳೆ ಕಟ್ಟಡದಲ್ಲಿ ನಡೆಯುವುದೂ ಎಂಬ ಬಗ್ಗೆ ಖಚಿತ ಮಾಹಿತಿ ನೀಡಲ್ಲ. ಲೋಕಸಭೆ ಮತ್ತು ರಾಜ್ಯ ಸಭೆಯ ಜಂಟಿ ಅಧಿವೇಶನ ಅಗಿರುವ ಸಾಧ್ಯತೆಗಳೂ ಇಲ್ಲ. ಯಾವೂದಾದರೂ ಪ್ರಮುಖ ಮಸೂದೆ ಪಾಸ್ ಮಾಡಲಾಗುವುದೇ ಎಂಬ ಬಗ್ಗೆಐಉ ಮಾಹಿತಿ ಇಲ್ಲದೆ ಸಮಯವನ್ನು ಮಾತ್ರ ನಿಗಧಿ ಪಡೆಸಿರುವುದು ಕೂತುಹಲಕ್ಕೆ ಎಡೆ ಮಾಡಿ ಕೊಟ್ಟಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.