
ದಾವಣಗೆರೆ. ಮೇ.೧೪; ಕಳೆದ ನಾಲ್ಕು ವರ್ಷಗಳಿಂದ ಕೇವಲ ಭ್ರಷ್ಟಾಚಾರ ಅಧಿಕಾರ ದುರುಪಯೋಗ ಬೆಲೆ ಏರಿಕೆ ಗಳಿಂದ ರೋಸಿ ಹೋಗಿದ್ದ ರಾಜ್ಯದ ಜನತೆ ವಿಧಾನಸಭಾ ಚುನಾವಣೆಯಲ್ಲಿ ಸರಿಯಾದ ತೀರ್ಪನ್ನು ನೀಡಿದ್ದಾರೆ ಎಂದು ಕೆಪಿಸಿಸಿ ವಕ್ತಾರರು ಹಾಗೂ ಸರ್ಕಾರದ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷರಾದ ಡಿ ಬಸವರಾಜ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಗೃಹ ಮಂತ್ರಿ ಅಮಿತ್ ಶಾ ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ರಾಜ್ಯ ಉದ್ದಗಲಕ್ಕೂ ದೊಡ್ಡ ಪ್ರಚಾರ ಸಭೆಗಳು ರೋಡ್ ಶೋಗಳನ್ನು ಮಾಡಿದರು ಆದರೂ ರಾಜ್ಯದ ಪ್ರಬುದ್ಧ ಮತದಾರರು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ದೇಶದ ಇತಿಹಾಸದಲ್ಲಿ ಪ್ರಧಾನಮಂತ್ರಿಗಳಾದವರು ಯಾರು ಕೂಡ ಬೀದಿ ಬೀದಿಗೆ ಮತ ಭಿಕ್ಷೆಗೆ ಬಂದಿರುವ ಉದಾರಣೆಗಳಿಲ್ಲ. ಪ್ರಧಾನಮಂತ್ರಿ ಸ್ಥಾನದ ಗೌರವವನ್ನು ಮೋದಿ ಕಳೆದಿದ್ದಾರೆ ಎಂದು ಅವರು ತೀವ್ರವಾಗಿ ಟೀಕಿಸಿದ್ದಾರೆ.ರಾಜ್ಯದ ಫಲಿತಾಂಶ ಮೋದಿಗೆ ಮುಖಭಂಗ ಮಾಡಿದೆ ಇನ್ನಾದರೂ ಅವರು ಪ್ರಧಾನ ಮಂತ್ರಿ ಹುದ್ದೆಯ ಮಹತ್ವ ಅರಿಯಬೇಕು ಎಂದು ತಿಳಿಸಿದ್ದಾರೆ.2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಕರ್ನಾಟಕದ ಫಲಿತಾಂಶ ದಿಕ್ಸೂಚಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವ ಜಿಲ್ಲೆಯ ಶಾಸಕರು ಮತ್ತು ರಾಜ್ಯದ ಶಾಸಕರಿಗೆ ಡಿ ಬಸವರಾಜ್ ಅಭಿನಂದಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಗೆಲ್ಲಲು ಹೋರಾಟ ಮಾಡಿದ ಕಾರ್ಯಕರ್ತರಿಗೆ ಮತದಾರರಿಗೆ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆಪ್ರಧಾನಿ ಮೋದಿಯವರು ತಮ್ಮ ಸ್ಥಾನದ ಗೌರವ ಮರೆತು ರಾಮನ ಭಕ್ತ ಹನುಮನ ಹೆಸರಲ್ಲಿ ಜೈ ಭಜರಂಗಿ ಎಂದು ಅಪಪ್ರಚಾರ ಮಾಡಿದರು ರಾಜ್ಯದ ಎಲ್ಲಾ ಕಡೆ ಸುಳ್ಳನ್ನೇ ನಿಜ ಮಾಡಲು ಹೊರಟು ವಿಫಲರಾಗಿದ್ದಾರೆ. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಡಿ ಕೆಂಪಣ್ಣನವರು ರಾಜ್ಯದಲ್ಲಿ 40% ಪರ್ಸೆಂಟು ಸರ್ಕಾರವಿದೆ ಎಂದು ದೂರು ನೀಡಿ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಳ್ಳದೆ ರಾಜ್ಯದ ಭ್ರಷ್ಟಾಚಾರಕ್ಕೆ ಬೆಂಬಲ ನೀಡಿದ ಪರಿಣಾಮ ಫಲಿತಾಂಶ ಬಂದಿದೆ ಎಂದು ಡಿ ಬಸವರಾಜ್ ತಿಳಿಸಿದ್ದಾರೆ