ಲೋಕಶಕ್ತಿ ಪಾರ್ಟಿಯ  ಜಿಲ್ಲಾ ಘಟಕದ ಉದ್ಘಾಟನೆ

ದಾವಣಗೆರೆ.ಜ.೨೩: ಲೋಕಶಕ್ತಿ ಪಾರ್ಟಿಯ ದಾವಣಗೆರೆ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ಜ. ೨೫ ರಂದು ರೋಟರಿ ಬಾಲಭವನದಲ್ಲಿ ನಡೆಯಲಿದೆ ಎಂದು ಲೋಕ ಶಕ್ತಿ ಪಾರ್ಟಿಯ ರಾಜ್ಯ ಅಧ್ಯಕ್ಷ ಚಂದ್ರಶೇಖರ್ ವಿ. ಸ್ಥಾವರ್‌ಮಠ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ದೇಶ, ರಾಜ್ಯ ಕಂಡಂತಹ ಮಹಾನ್‌ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಮೌಲ್ಯಾಧಾರಿತ, ಜನಪರ ಆಡಳಿತದ ರಾಜಕಾರಣವನ್ನು ಮರು ಸ್ಥಾಪಿಸುವ ಮಹತ್ತರ ಉದ್ದೇಶದಿಂದ ಲೋಕ್‌ಶಕ್ತಿ ಪಾರ್ಟಿಯ ಜಿಲ್ಲಾ ಘಟಕ ಅಸ್ತಿತ್ವಕ್ಕೆ ಬರುತ್ತಿದೆ ಎಂದರು.ಜ.೨೫ ರ ಬೆಳಗ್ಗೆ ೧೧.೩೦ಕ್ಕೆ ದಾವಣಗೆರೆ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭ ನಡೆಯಲಿದೆ. ರಾಜ್ಯ, ಜಿಲ್ಲಾ ಮಟ್ಟದ ಪದಾಽಕಾರಿಗಳು ಭಾಗವಹಿಸುವರು. ಉದ್ಘಾಟನಾ ಸಮಾರಂಭದಲ್ಲೇ ಜಿಲ್ಲಾ ಅಧ್ಯಕ್ಷರ ಆಯ್ಕೆಯನ್ನು ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.ಲೋಕ್‌ಶಕ್ತಿ ಪಾರ್ಟಿ ಮುಂದಿನ ವಿಧಾನ ಸಭೆ, ಲೋಕಸಭೆ, ಜಿಲ್ಲಾ, ತಾಲೂಕು ಪಂಚಾಯತ್ ಒಳಗೊಂಡಂತೆ ಎಲ್ಲ ಸ್ತರದ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದೆ. ನಮಗೆ ಅಽಕಾರಕ್ಕಿಂತಲೂ ರಾಜ್ಯದಲ್ಲಿ ಮತ್ತೆ ಮೌಲ್ಯಾಧಾರಿತ, ಜನಪರ ಆಡಳಿತದ ರಾಜಕಾರಣದ ವಾತಾವರಣ ನಿರ್ಮಾಣ ಆಗಬೇಕು. ರಾಜ್ಯದ ೧೧ ಜಿಲ್ಲೆಗಳಲ್ಲಿ ಲೋಕ್ ಶಕ್ತಿ ಪಾರ್ಟಿಯ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದರು.೧೯೮೩ರಲ್ಲಿ ರಾಜ್ಯದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು ಅನೇಕ ಜನಪರ ಕಾರ್ಯಕ್ರಮ, ಯೋಜನೆ ಜಾರಿಗೆ ತಂದರು. ಜನತಾ ಪರಿವಾರದಿಂದ ಹೊರ ಬಂದ ನಂತರ ೧೯೯೭ ರ ಫೆಬ್ರವರಿಯಲ್ಲಿ ಲೋಕ್‌ಶಕ್ತಿ ಪಾರ್ಟಿ ಪ್ರಾರಂಭಿಸಿದರು. ಅವರ ನಂತರ ೨೦೨೧ರಲ್ಲಿ ಮತ್ತೆ ಪಾರ್ಟಿ ಪ್ರಾರಂಭ ಮಾಡಲಾಗಿದೆ. ಜನತಾದಳ, ಕಾಂಗ್ರೆಸ್, ಬಿಜೆಪಿಗೆ ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಪಾಟೀಲ್, ಪ್ರಧಾನ ಕಾರ್ಯದರ್ಶಿ ಎಚ್.ಬಿ. ಸತೀಶ್, ಜಿಲ್ಲಾ ಸಂಚಾಲಕ ಬಸವರಾಜಪ್ಪ ನೀರ್ಥಡಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.