ಲೋಕಲ್ ಫೈಟ್ ಸ್ಪರ್ಧೆಗೆ ರಾಜಸ್ತಾನಿ ವ್ಯಕ್ತಿ. 2ನೇಬಾರಿ ಅದೃಷ್ಟ ಪರೀಕ್ಷೆಲಿ ಬೇರು ಸಿಂಗ್ ರಜಪೂತ್

ಕೂಡ್ಲಿಗಿ.ಡಿ.25: ವ್ಯಾಪಾರಕ್ಕೆಂದು ಬಂದು ತಾಲೂಕಿನ ಹೊಸಹಳ್ಳಿಯಲ್ಲಿ ಎಲೆಕ್ಟ್ರಿಕಲ್ ಶಾಪ್ ತೆರೆದು ಜನತೆಗೆ ಚಿರಪರಿಚಿತನಾದ ರಾಜಸ್ಥಾನ್ ಮೂಲದ ವ್ಯಕ್ತಿಯೋರ್ವ ಇಲ್ಲಿಯೇ ಮತದಾರ ಪಟ್ಟಿಯಲ್ಲಿ ಸೇರ್ಪಡೆಗೊಂಡು ಹಿರೇಕುಂಬಳಗುಂಟೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕಳೆದ ಬಾರಿ ಸ್ಪರ್ದಿಸಿ ಸ್ಥಳೀಯ ವ್ಯಕ್ತಿಯನ್ನು ಸೋಲಿಸಿ ಗೆಲುವಿನ ನಗೆಬೀರಿ ಐದು ವರ್ಷ ಜನಸೇವೆಗೈದ ರಾಜಸ್ತಾನಿ ಬೇರುಸಿಂಗ್ ರಜಪೂತ ಮತ್ತೊಮ್ಮೆ ಅದೇ ಗ್ರಾಮಪಂಚಾಯಿತಿ ವ್ಯಾಪ್ತಿಯ ಟಿ.ಸೂರವ್ವನಹಳ್ಳಿಯಿಂದ ಸ್ಪರ್ದಿಸಿ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ರಾಜ್ಯಾದ್ಯಂತ ಗ್ರಾಮ ಪಂಚಾಯತಿ ಚುನಾವಣೆ ಹಳ್ಳಿಗಳಲ್ಲಿ ಜೊರಾಗಿ ನಡೆಯುತ್ತಿದ್ದು ಈಗಾಗಲೇ ಮೊದಲ ಹಂತದ ಚುನಾವಣೆ ಮತದಾನ ಪ್ರಕ್ರಿಯೆ ಮುಗಿದಿದ್ದು ಎರಡನೇ ಹಂತದ ಚುನಾವಣೆ ಬರುವ 27ರಂದು ಮತದಾನ ನಡೆಯಲಿದೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು ಕಾನಾಹೊಸಹಳ್ಳಿ ಹೋಬಳಿಯ ಗಡಿಗ್ರಾಮ ಹಿರೇಕುಂಬಳಗುಂಟೆ ಗ್ರಾಮ ಪಂಚಾಯತಿಯ ಟಿ, ಸೂರವ್ವನಹಳ್ಳಿ ಸಾಮಾನ್ಯ ಸ್ಥಾನಕ್ಕೆ ರಾಜಸ್ಥಾನ ಮೂಲದ ಬೇರುಸಿಂಗ್ ರಜಪೂತ ಎರಡನೇ ಬಾರಿ ಚುನಾವಣೆ ಕಣಕ್ಕಿಳಿದಿರುವುದು ವಿಶೇಷವಾಗಿದೆ ,
ಬೇರು ಮೂಲ :
ಬೇರುಸಿಂಗ್ ರಜಪೂತ ಮೂಲತಃ ರಾಜಸ್ಥಾನದ ಬಾಡ್ ಮೇರ್ ಜಿಲ್ಲೆಯ ಪೋಚ್ ಪದರ ತಾಲೂಕಿನ ಆರಬುಡೊ ಗ್ರಾಮದವನಾಗಿದ್ದು, ಹದಿನಾಲ್ಕು ವರ್ಷಗಳ ಹಿಂದೆ ವ್ಯಾಪಾರಕ್ಕೆಂದು ಕಾನಾಹೊಸಹಳ್ಳಿಗೆ ಬಂದು ಎಲೆಕ್ಟ್ರಿಕಲ್ ಶಾಪ್ ಇಟ್ಟುಕೊಂಡಿದ್ದು, ಜನರ ಸೇವೆ ಮಾಡುವ ದೃಷ್ಟಿಯಿಂದ ಕಳೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹಿರೇಕುಂಬಳಗುಂಟೆ ಗೊಲ್ಲರಹಟ್ಟಿ 1ನೇ ವಾರ್ಡನಿಂದ ಸ್ಪರ್ದೆ ಮಾಡಿ 481 ಮತಗಳನ್ನು ಪಡೆದು 111 ಮತಗಳ ಅಂತರದಲ್ಲಿ ಸ್ಥಳೀಯ ವ್ಯಕ್ತಿಯನ್ನು ಸೋಲಿಸಿ ಬೇರುಸಿಂಗ್ ಜಯಗಳಿಸಿದ್ದು ಜನಸೇವೆ ಮಾಡಿ ಐದು ವರ್ಷದ ರಾಜಕೀಯ ಅನುಭವ ಪಡೆದುಕೊಂಡವ ಮತ್ತೆ ಇದೇ ಊರಿನಿಂದ ಈ ಬಾರಿಯೂ ಸ್ಪರ್ದಿಸಬೇಕೆಂಬ ಈರಾದೇ ಇತ್ತು ಆದರೆ ಈ ಬಾರಿ ಓಬಿಸಿ ಹಾಗೂ ಎಸ್ ಟಿ ಮೀಸಲು ಬಂದಿದ್ದರಿಂದ ಇದೇ ಪಂಚಾಯತಿ ವ್ಯಾಪ್ತಿಯ ಟಿ, ಸೂರವ್ವನಹಳ್ಳಿ ಯಲ್ಲಿ ಮೂರು ಸೀಟ್ ಗಳಲ್ಲಿ ಎರಡು ಸಾಮಾನ್ಯ ಮಹಿಳೆ ಹಾಗೂ ಒಂದು ಸಾಮಾನ್ಯ ಪುರುಷ ಬಂದಿದ್ದು, ಸಾಮಾನ್ಯ ಪುರುಷ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿ ಮತ್ತೊಮ್ಮೆ ಸ್ಪರ್ಧಾಕಣದಲ್ಲಿ ಬೇರುಸಿಂಗ್ ಇದ್ದಾರೆ. ಟಿ.ಸೂರವ್ವನಹಳ್ಳಿ ಗ್ರಾಮದಲ್ಲಿ 581 ಮತಗಳಿದ್ದು ,ಪುರುಷರು 322 ಮಹಿಳೆಯರು 291ಮತಗಳಿದ್ದು,
ಸಾಮಾನ್ಯ ಪುರುಷ ಕ್ಷೇತ್ರಕ್ಕೆ ಬೇರು ಸಿಂಗ್ ಸೇರಿದಂತೆ ರೇವಣಸಿದ್ದಪ್ಪ, ಅಂಜಿನಪ್ಪ, ನಾಗಭೂಷಣ, ನಾಲ್ಕು ಅಭ್ಯರ್ಥಿಗಳು, ಇದ್ದು, ನಾಲ್ಕು ಜನರು, ಭಿರುಸಿನ ಪ್ರಚಾರ ನಡೆಸಿದ್ದು ಒಟ್ಟಿನಲ್ಲಿ, ಜನರ ಚಿತ್ತ ಸೂರವ್ವನಹಳ್ಳಿಯತ್ತ ಎನ್ನುವಂತಾಗಿದೆ. ಕಣದಲ್ಲಿರುವ ನಾಲ್ಕುಜನರಲ್ಲಿ ಮತದಾರ ಯಾರ ಕೈ ಹಿಡಿಯುತ್ತಾನೆ ಎಂಬುದು ಕುತೂಹಲವಾಗಿದ್ದು ಬರುವ27 ರಲ್ಲಿ ನಡೆಯುವ ಮತದಾನದಲ್ಲಿ ಮತದಾರ ಪ್ರಭು ಯಾರಪರ ಮತ ಮುದ್ರೆ ಹಣೆಬರಹ ಒತ್ತಲಿದ್ದು ಇದೆ ತಿಂಗಳ 30ರಂದು ಸ್ಪರ್ಧಾಳುಗಳ ಹಣೆಬರಹ ಹೊರಬೀಳಲಿದೆ