ಲೋಕಪ್ರಕಾಶ ಸಂಸ್ಥೆಯಿಂದ ಪ್ರಬಂಧ ಸ್ಪರ್ಧೆ

 ದಾವಣಗೆರೆ, ಜೂ.೪; ಧಾರವಾಡದ ಲೋಕಪ್ರಕಾಶ ಶಿಕ್ಷಣ, ಸಂಸ್ಕೃತಿ ಸಾಹಿತ್ಯ ಸೇವಾ ಸಂಸ್ಥೆಯು ರಾಜ್ಯ ಮಟ್ಟದ ಉಚಿತ ಲಿಖಿತ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ರಾಜ್ಯಾಧ್ಯಕ್ಷರಾದ ಡಾ. ಐ.ಎ.ಲೋಕಾಪುರ್ ತಿಳಿಸಿದ್ದಾರೆ.ಸೆಪ್ಟಂಬರ್ 8 ರಂದು “ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ” ಅಂಗವಾಗಿ ಹಮ್ಮಿಕೊಳ್ಳಲಾದ ಈ ಸ್ಪರ್ಧೆ ಅವಕಾಶ ವಂಚಿತ ಎಲೆಮರೆಯ ಸಾಹಿತ್ಯ ಪ್ರತಿಭೆಗಳಿಗೆ ಮುಕ್ತವಾದ ಅವಕಾಶ ಕಲ್ಪಿಸಿ, ಅವರ ಲಿಖಿತ ಪ್ರತಿಭೆ ಅನಾವರಣಗೊಳಿಸುವ ಹಂತದಲ್ಲಿ ಯಾವುದೇ ವಯಸ್ಸಿನ ಪರಿಮಿತಿ ಇಲ್ಲದೇ ಹಮ್ಮಿಕೊಳ್ಳಲಾಗಿದೆ.“ಆನ್‌ಲೈನ್ ಶಿಕ್ಷಣದ ಮಹತ್ವ ಪದ್ಧತಿ ಹಾಗೂ ಪರಿಣಾಮ” ಈ ವಿಷಯದ ಕುರಿತು ಬರೆಯಬೇಕಾದ ಲಿಖಿತ ಪ್ರಬಂಧವನ್ನು ಡಿ.ಟಿ.ಪಿ. ಮಿಡಿಯಂ ಪಾಂಟ್ ಒಂದು ಪುಟ ಮೀರದಂತೆ ಹಾರ್ಡ್ ಅಥವಾ ಸಾಪ್ಟ್ ಕಾಪಿಯನ್ನು ಆಗಸ್ಟ್ 15 ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳಿಸಬಹುದಾಗಿದೆ ಎಂದು ದಾವಣಗೆರೆ ಜಿಲ್ಲಾಧ್ಯಕ್ಷ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನವಾಗಿ ಪ್ರಥಮ ಬಹುಮಾನ ಎಂಟು ಸಾವಿರ, ದ್ವಿತೀಯ ಬಹುಮಾನ ಐದು ಸಾವಿರ, ತೃತೀಯ ಬಹುಮಾನ ಮೂರು ಸಾವಿರ ರೂಪಾಯಿ. ಸಮಾಧಾನಕರ ಬಹುಮಾನಗಳು ಒಂದೊಂದು ಸಾವಿರ ರೂಪಾಯಿ, ಪ್ರಶಸ್ತಿ ಪತ್ರ ವಿತರಿಸಲಾಗುವುದು. ಪ್ರಬಂಧ ಬರೆದು ಸ್ಪರ್ಧಿಗಳ ಪೂರ್ಣಪ್ರಮಾಣದ ಹೆಸರು, ವಿಳಾಸ, ತಾಲ್ಲೂಕು, ಜಿಲ್ಲೆ, ವ್ಯಾಟ್ಸ್ಪ್ ನಂಬರ್‌ನೊಂದಿಗೆ ಅಂಚೆ ಅಥವಾ ಕೋರಿಯರ್‌ನಲ್ಲಿ ಕಳಿಸುವ ವಿಳಾಸ ಡಾ. ಐ.ಎ.ಲೋಕಾಪುರ್, ಅಧ್ಯಕ್ಷರು, ಲೋಕಪ್ರಕಾಶ ಶಿಕ್ಷಣ, ಸಂಸ್ಕೃತಿ ಸಾಹಿತ್ಯ ಸೇವಾ ಸಂಸ್ಥೆ, ನಂ.4, ಮಂಜುನಾಥ ಕಾಲೋನಿ, ರೈಲ್ವೆ ಲೈನ್ ಹತ್ತಿರ, ಧಾರವಾಡ-580007, ಹೆಚ್ಚಿನ ಮಾಹಿತಿಗೆ 9739788642 ಈ ಮೊಬೈಲ್‌ಗೆ ಸಂಪರ್ಕಿಸಬಹುದು.