ಲೋಕಪ್ರಕಾಶ ಶಿಕ್ಷಣ, ಸಂಸ್ಕೃತಿ ಸಾಹಿತ್ಯ ಸೇವಾ ಸಂಸ್ಥೆಯ

ದಾವಣಗೆರೆ ಜಿಲ್ಲಾಧ್ಯಕ್ಷರಾಗಿ ಸಾಲಿಗ್ರಾಮ ಗಣೇಶ್ ಶೆಣೈ ಆಯ್ಕೆ ದಾವಣಗೆರೆ, ಜೂ.3; ಧಾರವಾಡದ ಲೋಕಪ್ರಕಾಶ ಶಿಕ್ಷಣ, ಸಂಸ್ಕೃತಿ ಸಾಹಿತ್ಯ ಸೇವಾ ಸಂಸ್ಥೆಯ ದಾವಣಗೆರೆ ಜಿಲ್ಲಾಧ್ಯಕ್ಷರಾಗಿ ದಾವಣಗೆರೆಯ ಹತ್ತು ಹಲವು ಪ್ರತಿಷ್ಠಿತ ಸಂಘಟನೆಗಳ ರೂವಾರಿ, ಕನ್ನಡ ನಾಡು-ನುಡಿಗಳ, ಇತಿಹಾಸ ಪರಂಪರೆಯನ್ನು ವೈಭವೀಕರಿಸುವ ನಿಟ್ಟಿನಲ್ಲಿ ಸದಾ ಕ್ರಿಯಾಶೀಲ ವ್ಯಕ್ತಿತ್ವದ “ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿ” ಎಂದೇ ಖ್ಯಾತಿ ಹೊಂದಿರುವ ಸಾಲಿಗ್ರಾಮ ಗಣೇಶ್ ಶೆಣೈಯವರನ್ನು ಅವಿರೋಧವಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಧಾರವಾಡದ ಲೋಕಪ್ರಕಾಶ ಶಿಕ್ಷಣ, ಸಂಸ್ಕೃತಿ ಸಾಹಿತ್ಯ ಸೇವಾ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಡಾ. ಐ.ಎ.ಲೋಕಾಪುರ್ ತಿಳಿಸಿದ್ದಾರೆ.ದಾವಣಗೆರೆಯ ಕಲಾಕುಂಚ, ಯಕ್ಷರಂಗ, ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಗಾಯಿತ್ರಿ ಪರಿವಾರ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆ, ಕರ್ನಾಟಕ ಸುಗಮ ಸಂಗೀತ ಪರಿಷತ್, ಸಮಾನ ಮನಸ್ಕರ ಸೇವಾ ಸಮಿತಿ, ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸೇರಿದಂತೆ ಗಣೇಶ್ ಶೆಣೈಯವರು ತೊಡಗಿಸಿಕೊಂಡಿರುವ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು, ಸರ್ವ ಸದಸ್ಯರು ಶೆಣೈಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.