ಲೋಕನಾಯಕ ನಗರದ ಸಂಜೀವಿನಿ ಸರ್ಕಲ್‍ನಲ್ಲಿ ಡಾಂಬರೀಕರಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸೋಮಶೇಖರ್ ಗುದ್ದಲಿಪೂಜೆ

ಮೈಸೂರು, ನ.4: ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಕೆ.ಆರ್.ಎಸ್ ಮುಖ್ಯ ರಸ್ತೆಯಿಂದ ಲೋಕನಾಯಕ ನಗರದ ಸಂಜೀವಿನಿ ಸರ್ಕಲ್ ಹಾಗೂ ಬಸವನಗುಡಿ ಮುಖಾಂತರ ಕುವೆಂಪು ಸರ್ಕಲ್ ನಿಂದ ಸೂರ್ಯ ಬೇಕರಿ ಸರ್ಕಲ್ ವರೆಗೆ 1.99 ಕೋಟಿ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಇಂದು ಲೋಕನಾಯಕ ನಗರದ ಸಂಜೀವಿನಿ ಸರ್ಕಲ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗುದ್ದಲಿಪೂಜೆ ನೆರವೇರಿಸಿದರು.
ಈ ಸಂದರ್ಭ ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ವಾರ್ಡ್ ಸಂ-01 ರ ಲಕ್ಷ್ಮಿಶಿವಣ್ಣ , ವಾರ್ಡ್ ಸಂ-2 ರ ಸದಸ್ಯರಾದ ಪ್ರೇಮ ಶಂಕರೇಗೌಡ, ವಾರ್ಡ್ ಸಂ-3 ರ ಸದಸ್ಯ ಶ್ರೀಧರ್, ವಾರ್ಡ್ ಸಂ-4 ರ ಸದಸ್ಯರಾದ ಪೈಲ್ವಾನ್ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.