ಲೋಕಕಲ್ಯಾಣದಿಂದ ಜೀವನ ಪಾವನ:ಶ್ರೀಧರಾಚಾರ್ಯ

ತಾಳಿಕೋಟೆ:ಫೆ.28:ದೇವಭಕ್ತಿಯೊಂದಿಗೆ ಮುನ್ನಡೆಯುತ್ತÀ ಲೋಕಕಲ್ಯಾಣವಾಗಲಿ ಜಗತ್ತಿನಲ್ಲಿ ಇರತಕ್ಕಂತಹ ಎಲ್ಲ ಜನತೆ ಸುಖಸಂಪತ್ತಿನೊಂದಿಗೆ ಬಾಳಿ ಬದುಕಲಿ ಎಂಬ ಆಸೆ ಎಲ್ಲ ಭಕ್ತ ಸಮೂಹದ್ದದಾಗಿರಬೇಕೆ ವಿನಃ ಕೇವಲ ನಮ್ಮದೆಯಾದ ಸುಖ ಶಾಂತಿಗಾಗಿ ಬದುಕುವುದರೊಂದಿಗೆ ಅನ್ನರಿಗೆ ಸುಖಶಾಂತಿ ನಮ್ಮದಿ ದೊರಕಲಿ ಎಂದು ಆಶಿಸಿದರೆ ದೇವರು ಒಲಿದೇ ಒಲಿಯುತ್ತಾನೆಂದು ತಿರುಪತಿ ಮತ್ತು ಹೈದ್ರಾಬಾದನಿಂದ ಆಗಮಿಸಿದ ಶ್ರೀಧರಾಚಾರ್ಯ ಅವರು ನುಡಿದರು.

       ಕಳೆದ ದಿನಾಂಕ ಫೆ,22ಬುಧುವಾರರಿಂದ ಫೆ,25ಶನಿವಾರವರೆಗೆ ಸ್ಥಳಿಯ ಮಾರ್ವಾಡಿ ಸಮಾಜ ಬಾಂಧವರ ವತಿಯಿಂದ ಪುರಾತನ ದೇವಾಯಲವಾದ ಬಾಲಾಜಿ ಮಂದಿರದಲ್ಲಿ ಏರ್ಪಡಿಸಲಾದ ಬಾಲಾಜಿ ಉತ್ಸವಮೂರ್ತಿ ಪ್ರತಿಷ್ಠಾಪನೆ ಹಾಗೂ ದೇವಾದಿ ದೇವತೆಗಳ ಮೂರ್ತಿ ಪ್ರತಿಷ್ಠಾಪನೆಯ ಪೂಜಾ ಕಾರ್ಯಕ್ರಮವನ್ನು ನೇರವೆರಿಸಿ ಮಾತನಾಡುತ್ತಿದ್ದ ಅವರು ಮಾರ್ವಾಡಿ ಸಮಾಜ ಬಾಂಧವರು ತಮ್ಮದೆಯಾದ ವ್ಯವಹಾರ ಉದ್ಯೋಗವನ್ನು ತೊಡಗಿಸಿಕೊಂಡು ಜನಪ್ರೀಯತೆ ಗಳಿಸಿಕೊಂಡು ಬಂದವರಾಗಿದ್ದಾರೆ ಯಾವುದೇ ನಗರ ಪಟ್ಟಣದಲ್ಲಿಯ ಜನತೆ ಅಲ್ಲಿರತ್ತಕ್ಕಂತಹ ಮಾರ್ವಾಡಿ ಜನರ ಮೇಲೆ ಪ್ರೀತಿ ವಿಶ್ವಾಸದೊಂದಿಗೆ ಸಾಗಿರುವು ಹೆಮ್ಮೆಯ ವಿಷಯವಾಗಿದೆ ಎಂದ ಅವರು ಎಲ್ಲರಲ್ಲಿ ಸದಾ ದೇವ ಭಕ್ತಿ ಇರಲಿ ಇದರಿಂದ ದೇವ ಒಲುಮೆಯಾಗಿ ಸುಖ ಸಂಪತ್ತು ಲಭಿಸುವುದರಲ್ಲಿ ಯಾವ ಸಂಶಯವಿಲ್ಲ ಕಾರಣ ವಸುದೇವ ಕುಟುಂಭದವರಾದ ನಾವೇಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ನಡೆಯಬೇಕೆಂದರು.
     ಕಾರ್ಯಕ್ರಮ ಮೊದಲಿಗೆ 1934ರಲ್ಲಿ ರಾಜಸ್ಥಾನದ ಜೈಪುರದಿಂದ ತಂದು ಪ್ರತಿಷ್ಠಾಪಿಸಲಾಗಿದ್ದ ಪುರಾತನ ಬಾಲಾಜಿ ಮಹಾಮೂರ್ತಿಗೆ ಬಿಲ್ವಾರ್ಛನೆ,ಪುಷ್ಪಾರ್ಚನೆ ಮಹಾಮಂಗಳಾರತಿಯೊಂದಿಗೆ ಅಲಂಕಾರ ಗೈಯಲಾಯಿತಲ್ಲದೆ ಹಾಗೂ ಇತ್ತಿಚಿಗೆ ತರಲಾದ ಉತ್ಸವ ಮೂರ್ತಿಗಳಾದ ಶ್ರೀನಿವಾಸ, ಶ್ರೀದೇವಿ, ಭೂದೇವಿ, ಗೊದಾಮಾತಾ, ಸುದರ್ಶನ, ನರಸಿಂಹ, ರಾಮಾನುಜಾಚಾರ್ಯರ ಮೂರ್ತಿಗಳನ್ನು ಶ್ರೀಗಳು ಹಾಗೂ ಅವರ ತಂಡದವರು ಪಂಚಸೂಕ್ತ ಹೋಮ, ಸುದರ್ಶನ ಹೋಮ, ವಿಷ್ಣುಪಾರಾಯಣ ಮಾಡಿ ಹೋಮ ಹವನ ಕಾರ್ಯಕ್ರಮ ನಡೆಸಿ ಮಹಾಪೂಜೆಗೈದು ಈ ಎಲ್ಲ ಮೂರ್ತಿಗಳನ್ನು ತಮ್ಮ ಅಮೃತಹಸ್ತದಿಂದ ಪ್ರತಿಷ್ಠಾಪಿಸಿದರು. ಇದು ಅಲ್ಲದೆ ನೇಪಾಳದಿಂದ ತರಲಾದ ಶ್ರೀ ಲಕ್ಷ್ಮಿನಾರಾಯಣ ಸಾಲಿಗ್ರಾಮ ಪ್ರತಿಷ್ಠಾಪಿಸಲಾಯಿತು.

ಪಲ್ಲಕಿ ಸೇವೆಯೊಂದಿಗೆ ಎಲ್ಲ ಭಕ್ತಸಮೂಹಕ್ಕೆ ಮಹಾಪ್ರಸಾದ ವಿತರಿಸಲಾಯಿತು.

    ಇದೇ ಸಮಯದಲ್ಲಿ ಶ್ರೀಗಳಿಗೆ ಹಾಗೂ ಬಾಗೆವಾಡಿ, ಸಾಂಗ್ಲಿ, ಇಚಲಕರಂಜಿ ತಾಳಿಕೋಟೆ ಬಾಗದ ಸಮಾಜ ಬಾಂದವರಿಗೆ ಅಲ್ಲದೇ ಗಣ್ಯ ಮಾನ್ಯರಿಗೂ ಸನ್ಮಾಣಿಸಿ ಗೌರವಿಸಲಾಯಿತು.
     ಈ ಕಾರ್ಯಕ್ರಮದಲ್ಲಿ ತಾಳಿಕೋಟೆ ಮಾರ್ವಾಡಿ ಸಮಾಜದ ಅಧ್ಯಕ್ಷರಾದ ಶ್ರೀರಂಗ ಅಗರವಾಲ ಹಾಗೂ ಹಿರಿಯರಾದ ಡಾ|| ಪರಶುರಾಮ ಅಗರವಾಲ, ಓಂಪ್ರಕಾಶ ತಿವಾಡಿ, ಮಹಾಬೀರ ಅಗರವಾಲ, ಸುಭಾಸ ಅಗರವಾಲ, ಪ್ರಮೋದ ಅಗರವಾಲ, ರಾಮವತಾರ ಅಗರವಾಲ, ರಾಮಸ್ವರೂಪ ಅಗರವಾಲ, ಭರತ ಅಗರವಾಲ, ಡಾ|| ರವಿ ಅಗರವಾಲ, ಮಹೇಂದ್ರ ಅಗರವಾಲ, ವಿಕ್ರಮ ಅಗರವಾಲ, ನರೆಂದ್ರ ಅಗರವಾಲ, ಅವರನ್ನೊಳಗೊಂಡು ಅಸಂಖ್ಯಾತ ಸಮಾಜ ಭಾಂಧವರು ಪಾಲ್ಗೋಂಡು ಕಾರ್ಯಕ್ರಮದಲ್ಲಿ ಭಕ್ತಿಭಾವ ಮೆರೆದರು.