ಲೋಕಕಲ್ಯಾಣಕ್ಕಾಗಿ  ಶ್ರೀ ಮಹಾಸುದರ್ಶನ ಹೋಮ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.04: ವಿಶ್ವದಲ್ಲಿ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಗಳು ಮೂಡಲಿ ಎನ್ನುವ ಸದಾಶಯದಿಂದ ಇಲ್ಲಿನ ಸತ್ಯನಾರಾಯಣ ಪೇಟೆಯ  ಮೊದಲನೇ ಅಡ್ಡರಸ್ತೆಯಲ್ಲಿರುವ ಶ್ರೀ ಸುಶೀಮಿಂದ್ರ ತೀರ್ಥ ಕಲ್ಯಾಣ ಮಂಟಪದಲ್ಲಿ ಶ್ರೀ ಮಹಾಸುದರ್ಶನ ಹೋಮಗಳು ನಡೆದವು.
ಶ್ರೀ ಕ್ರೋಧಿ ನಾಮ ಸಂವತ್ಸರದ ಗೌತಮ ಸೂರ್ಯ ಸಿದ್ಧಾಂತದ  ಪಂಚಾಂಗ ಬಿಡುಗಡೆ ಅಂಗವಾಗಿ ಶ್ರೀ ವಿದ್ಯಾಸಿಂಧು ಮಾಧವತೀರ್ಥ ಗುರುಗಳ ಅಮೃತ ಹಸ್ತದಿಂದ ಈ ವರ್ಷ 2024-2025 ರಲ್ಲಿ ಮಳೆ ಬೆಳೆ ಚೆನ್ನಾಗಿ ಬರಲೆಂದೂ ಸಹಿ ಈ  ಶ್ರೀ ಮಹಾ ಸುದರ್ಶನ ಹೋಮವನ್ನು ಹಮ್ಮಿಕೊಳ್ಳಲಾಗಿದ್ದು, ಅಸಂಖ್ಯಾತ ಭಕ್ತರು ಪಾಲ್ಗೊಂಡಿದ್ದರು.
 ತಜ್ವ ವೈದ್ಯೆ ಡಾ. ಅನುಪಮಾ ಬಿಕೆ ಸುಂದರ್, ಜ್ಯೋತಿಷಿಗಳಾದ ಪಂಪಯ್ಯ ಶಾಸ್ತ್ರಿ,  ಗುಂಡಯ್ಯಸ್ವಾಮಿ, ವಿಮ್ಸ್ ನ ಡಾ. ರವಿಶಂಕರ್,  ಇಂಜಿನಿಯರ್ ಸಂಜೀವ್ ಪ್ರಸಾದ್, ಶಾರದಾ ವಿದ್ಯಾಪೀಠದ ಕವಿತಾ ವಾದಿರಾಜ್, ಪತ್ರಕರ್ತರಾದ ವೆಂಕಟೇಶ ದೇಸಾಯಿ ಹಾಗೂ ಇತರ ಹಿರಿಯ ವರದಿಗಾರರನ್ನು ಸನ್ಮಾನಿಸಲಾಯಿತು.
ಕುಮಾರಿ ವಿಭಾ ಆರ್ ಕುಲಕರ್ಣಿ ಅವರಿಂದ ದಾಸವಾಣಿ ಕಾರ್ಯಕ್ರಮ ಜರುಗಿತು. ತಬಲಾ ಸಾಥ್ ಪವಮಾನ ಅರಳಿಕಟ್ಟಿ, ಹಾರ್ಮೋನಿಯಂ ಪದ್ಮಜಾ ಅರಳಿಕಟ್ಟಿ ಹಾಗೂ ಇನ್ನಿತರ ಭಜನಾ ಮಂಡಳಿಗಳಿಂದ ನೆರೆದ ಭಕ್ತಾದಿಗಳಿಗೆ ಭಕ್ತಿರಸ ಉಣಬಡಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘಟಕರು ಹಾಗೂ ಸಮಾಜ ಸೇವಕರಾದ ಗಿರೀಶ್, ಅಶೋಕ್ ಕುಲಕರ್ಣಿ, ಕರಣಂ ಶ್ರೀನಿವಾಸ್, ಶ್ರೀನಿವಾಸ್ ತಬಲ, ಡಿಕೆ ಪ್ರಸಾದ್, ಡಾ. ಶ್ರೀನಾಥ್, ಡಾ. ನಪುರ್ ಶ್ರೀನಿವಾಸ್, ಸತೀಶ್ ದೇಸಾಯಿ, ಕುಮಾರಿ ವಸುಧ, ಪಾರ್ಥಸಾರಥಿ, ಎಸ್ ಕೆ ಮುರಳಿ, ದೇಶಪಾಂಡೆ ಮತ್ತಿತರರು ಉಪಸ್ಥಿತರಿದ್ದರು,
ಈ ಎಲ್ಲಾ ಕಾರ್ಯಕ್ರಮಗಳು ಖ್ಯಾತ ಜ್ಯೋತಿಷಿ ಗುರುರಾಜ ಕುಲಕರ್ಣಿ ಅವರ ನೇತೃತ್ವದಲ್ಲಿ ನಡೆದವು.