ಲೋಕಕಲ್ಯಾಣಕ್ಕಾಗಿ ಆಧ್ಯಾತ್ಮ ಉತ್ಸವ


ದಾವಣಗೆರೆ, ನ.19; ಇಂದು ಬೆಳಿಗ್ಗೆ ದಾವಣಗೆರೆಯ ಆರ್.ಹೆಚ್. ಧರ್ಮಶಾಲೆಯಲ್ಲಿ ವೇದಮೂರ್ತಿ ಜಯತೀರ್ಥಾಚಾರ್ ಮತ್ತು ವೇದಮೂರ್ತಿ ಶಂಕರನಾರಾಯಣ ಶಾಸ್ತ್ರಿಯವರ ನೇತೃತ್ವದಲ್ಲಿ ಸ್ಪೂರ್ತಿ ಸೇವಾ ಟ್ರಸ್ಟ್, ಶಾಸ್ತ್ರಿಹಳ್ಳಿ ಅಭಯಾಶ್ರಮ, ಶ್ರೀ ಗಾಯತ್ರಿ ಪರಿವಾರ ಹಾಗೂ ಇಸ್ಕಾನ್ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಲೋಕಕಲ್ಯಾಣಕ್ಕಾಗಿ ಆಧ್ಯಾತ್ಮ ಉತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ರಾಮತಾರಕ ಯಜ್ಞ, ಶ್ರೀ ಗಾಯತ್ರಿ ಮಹಾಯಜ್ಞ ಸಂಕಲ್ಪದೊಂದಿಗಿನ ಕಾರ್ಯಕ್ರಮವನ್ನು   ಮಹಾಪೌರರಾದ ಎಸ್.ಟಿ.ವೀರೇಶ್ ಉದ್ಘಾಟಿಸಿದರು. ಸ್ಪೂರ್ತಿ ಸೇವಾ ಟ್ರಸ್ಟ್ನ ಸಂಸ್ಥಾಪಕರಾದ ಬಿ.ಸತ್ಯನಾರಾಯಣ ಮೂರ್ತಿ, ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷರಾದ ಡಾ. ಸುಶೀಲಮ್ಮ, ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್‌ಶೆಣೈ, ಸಮಿತಿ ಸದಸ್ಯರಾದ ಭಾವನ್ನಾರಾಯಣ, ಜಿ.ಬಿ.ಲೋಕೇಶ್, ಶ್ರೀಮತಿ ಶೈಲಾ ವಿಜಯಕುಮಾರ್ ಶೆಟ್ಟಿ, ಡಾ.ಸಿ.ಕೆ.ಆನಂದತೀರ್ಥಾಚಾರ್ ಮುಂತಾದವರು ಉಪಸ್ಥಿತರಿದ್ದರು.