ಲೊಯೋಲ ಸಂಸ್ಥೆಗೆ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ಭೇಟಿ

ರಾಯಚೂರು.ಏ.೦೩- ಮಾನ್ವಿಯ ಲಯೋಲೋ ಶಿಕ್ಷಣ ಸಂಸ್ಥೆಗೆ ಕಾಂಗ್ರೆಸ್ ಅಭ್ಯರ್ಥಿಯಾದ ಜಿ.ಕುಮಾರ್ ನಾಯಕ್ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಎನ್.ಎಸ್.ಬೋಸರಾಜು ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹಂಪಯ್ಯ ನಾಯಕ ಅವರು ಭೇಟಿ ನೀಡಿ, ಸೌಹಾರ್ದಯುತವಾಗಿ ಭೇಟಿ ನೀಡಿದರು.ಶಿಕ್ಷಣ ಸಂಸ್ಥೆಯ ಫಾದರ್‌ರವರು ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ ನಾಯಕ, ಸಚಿವ ಬೋಸರಾಜು, ಹಂಪಯ್ಯ ನಾಯಕ ಅವರಿಗೆ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಕೆ.ಶಾಂತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗಪೂರ್ ಸಾಬ್, ಜಿ.ಶಿವಮೂರ್ತಿ, ರುದ್ರಪ್ಪ ಅಂಗಡಿ, ವಸಂತ್ ನಾಯಕ್, ಬಿ.ಕೆ.ಅಮರೇಶಪ್ಪ, ಖಾಲೀದ್ ಗುರು, ಬಾಲಸ್ವಾಮಿ ಕೊಡ್ಲಿ, ಸಣ್ಣ ಬಸನಗೌಡ ಬ್ಯಾಗವಾಟ, ರೌಡೂರು ಮಹಾಂತೇಶ ಸ್ವಾಮಿ ಸೇರಿದಂತೆ ಅನೇಕರು ಇದ್ದರು.