ಲೈಂಗಿಕ ಶಕ್ತಿಗೆ ಮನೆಮದ್ದು

೧. ನುಗ್ಗೆಮರದ ಹೂವನ್ನು ಹಾಲಿನಲ್ಲಿ ಬೇಯಿಸಿ, ಶೋಧಿಸಿ ಹಾಲು ಮಾತ್ರ ಕುಡಿಯುತ್ತಾ ಬಂದರೆ ಲೈಂಗಿಕ ಶಕ್ತಿ ಉತ್ತಮವಾಗುತ್ತದೆ.
೨. ಅಮೃತಬಳ್ಳಿ, ಬೆಟ್ಟದನೆಲ್ಲಿ ಚೆಟ್ಟು, ತುಪ್ಪ, ಸ್ವಲ್ಪ ಕಲ್ಲುಸಕ್ಕರೆ ಎಲ್ಲವನ್ನೂ ನುಣ್ಣಗೆ ಪುಡಿಮಾಡಿ ಬೆರೆಸಿಟ್ಟುಕೊಳ್ಳಿ. ರಾತ್ರಿ ೧ ಚಮಚ ತಿಂದು ಹಾಲು ಕುಡಿಯಿರಿ. ಇದರಿಂದ ಲೈಂಗಿಕ ಶಕ್ತಿ ಜಾಸ್ತಿ ಆಗುತ್ತದೆ.
೩. ಈರುಳ್ಳಿಯನ್ನು ಸಣ್ಣದಾಗಿ ಹೆಚ್ಚಿ ಬೆಲ್ಲದೊಡನೆ ಸೇವಿಸುತ್ತಾ ಬಂದರೆ, ಶಕ್ತಿ ವೃದ್ಧಿಯಾಗುತ್ತದೆ.
೪. ತಾಜಾ ಕಬ್ಬಿನ ಹಾಲಿಗೆ ಶುಂಠಿ ರಸ ಸೇರಿಸಿ ಸೇವಿಸುತ್ತಾ ಬಂದರೆ ಲೈಂಗಿಕ ಶಕ್ತಿ ಉತ್ತಮಗೊಳ್ಳುತ್ತದೆ.
೫. ಗೋಡಂಬಿ ಹಾಗೂ ಬಾದಾಮಿಗಳನ್ನು ಪ್ರತಿನಿತ್ಯ ಸೇವಿಸುತ್ತಾ ಬಂದರೆ, ಅನುಕೂಲವಾಗುತ್ತದೆ.
೬. ನೆಲಗುಂಬಳ ಗೆಡ್ಡೆಯ ಚೂರ್ಣವನ್ನು ಪ್ರತಿನಿತ್ಯ ಹಾಲಿನ ಜೊತೆ ಸೇವಿಸುವುದರಿಂದ ಲೈಂಗಿಕ ಶಕ್ತಿ ಉತ್ತಮವಾಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧