ಲೈಂಗಿಕ ದೌರ್ಜನ್ಯ; ಶ್ರೀಲಂಕಾ ಕ್ರಿಕೆಟಿಗ ದನುಷ್ಕಾ ಬಂಧನ

ಸಿಡ್ನಿ, ನ.೬- ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ-೨೦ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆ ಯುತ್ತಿರುವ ನಡುವೆಯೇ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಶ್ರೀಲಂಕಾದ ಆಟಗಾರ ದನುಷ್ಕಾ ಗುಣತಿಲಕ ಅವರನ್ನು ಸಿಡ್ನಿ ಪೊಲೀಸರು ಇಂದು ಬಂಧಿಸಿದ್ದಾರೆ.ಆಪಾದಿತ ಲೈಂಗಿಕ ದೌರ್ಜನ್ಯ ಘಟನೆಯ ನಂತರ ಸಿಡ್ನಿ ಪೊಲೀಸರು ಶ್ರೀಲಂಕಾ ಆಟಗಾರರು ಉಳಿದು ಕೊಂಡಿದ್ದ ಸಿಡ್ನಿಯ ಟೀಮ್ ಹೋಟೆಲ್‌ನಿಂದ ಬೆಳ್ಳಂಬೆಳಗ್ಗೆ ದನುಷ್ಕಾ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.ರೋಸ್ ಬೇಯಲ್ಲಿರುವ ನಿವಾಸದಲ್ಲಿ ನಾಲ್ಕು ಬಾರಿ ಒಪ್ಪಿಗೆ ಇಲ್ಲದೆ ಸಂಭೋಗ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದ ಹಿನ್ನೆಲೆಯಲ್ಲಿ ಸಿಡ್ನಿಯ ಸಸೆಕ್ಸ್ ಸ್ಟ್ರೀಟ್‌ನಲ್ಲಿರುವ ಹೋಟೆಲ್‌ನಲ್ಲಿ ೩೧ ವರ್ಷದ ಗುಣತಿಲಕ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್ ಮೂಲಕ ಹಲವಾರು ದಿನಗಳವರೆಗೆ ಸಂವಹನ ನಡೆಸಿದ ನಂತರ ಮಹಿಳೆ ಕ್ರಿಕೆಟಿಗ ಧನುಷ್ಕಾ ಗುಣತಿಲಕ ಅವರನ್ನು ಭೇಟಿಯಾಗಿದ್ದರು ನವೆಂಬರ್ ೨ ರಂದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ದೂರು ನೀಡಿದ್ದರು.ದೂರು ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಭಾಗವಾಗಿ, ನಿನ್ನೆ ರೋಸ್ ಬೇಯಲ್ಲಿರುವ ವಿಳಾಸದಲ್ಲಿ ಪೊಲೀಸರು ಅಪರಾಧದ ದೃಶ್ಯ ಪರೀಕ್ಷೆ ನಡೆಸಿ ಇಂದು ಬೆಳ್ಳಬೆಳಿಗ್ಗೆ ಹೋಟೆಲ್‌ನಲ್ಲಿ ಬಂಧಿಸಲಾಗಿದೆ ”ಎಂದು ನ್ಯೂ ಸೌತ್ ವೇಲ್ಸ್ ಪೊಲೀಸ್ ಹೇಳಿಕೆ ತಿಳಿಸಿದೆ.
ಸೂಪರ್ ೧೨ ಹಂತದಲ್ಲಿ ಶ್ರೀಲಂಕಾದ ವಿಶ್ವಕಪ್ ಅಭಿಯಾನದಲ್ಲಿ ಗುಣತಿಲಕ ಯಾವುದೇ ಪಾತ್ರವನ್ನು ವಹಿಸಲಿಲ್ಲ ಸ್ಟಾರ್ ಬ್ಯಾಟರ್ ಮೊದಲ ಸುತ್ತಿನಲ್ಲಿ ಪಂದ್ಯದ ಸಮಯದಲ್ಲಿ ಅಸ್ತಿ ಮಜ್ಜೆ ಗಾಯದಿಂದಾಗಿ ಶ್ರೀಲಂಕಾ ಬ್ಯಾಟರ್ ಟಿ೨೦ ವಿಶ್ವಕಪ್‌ನ ಆಟದಿಂದ ಹೊರಗುಳಿದಿದ್ದರು.ಗುಣತಿಲಕ ಅವರ ಬದಲಿಗೆ ಬೇರೆ ಆಟಗಾರರನ್ನು ನಿಯೋಜಿಸಲಾಗಿತ್ತು ಗಾಯಗೊಂಡ ಬ್ಯಾಟರ್ ಆಸ್ಟ್ರೇಲಿಯಾದಲ್ಲಿ ತಂಡದಲ್ಲಿ ಉಳಿದಿದ್ದಾರೆ.

ಜಾಮೀನು ನಿರಾಕರಣೆ

ವಿಡಿಯೋ ಕಾನ್ಪರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಶ್ರೀಲಂಕಾದ ಆಟಗಾರ ದನುಷ್ಕಾ ಗುಣತಿಲಕ ಅವರಿಗೆ ಜಾಮೀನು ನೀಡಲು ನಿರಾಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಗುಣತಿಲಕ ೮ ಟೆಸ್ಟ್‌ಗಳು, ೪೭ ಏಕದಿನ ಅಂತರಾಷ್ಟ್ರೀಯ ಪಂದ್ಯಗಳು ಮತ್ತು ೪೬ ಟಿ-೨೦ ಪಂದ್ಯಗಳನ್ನು ಶ್ರೀಲಂಕಾ ಪರ ಆಡಿದ್ದಾರೆ ೨೦೧೫ ರಲ್ಲಿ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ೩೧ ವರ್ಷ ವಯಸ್ಸಿನ ಆಟಗಾರ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯದ ಮೂಲಕ ಪಾದಾರ್ಪಣೆ ಮಾಡಿದ್ದರು.ಮಾಜಿ ಚಾಂಪಿಯನ್ ಶ್ರೀಲಂಕಾ ಟಿ-೨೦ ಸೈಮಿಫೈನಲ್ಸ್ ತಲುಪುವ ಹಾದಿಯಿಂದ ಈಗಾಗಲೇ ಹೊರಬಿದ್ದಿದೆ.