ಲೈಂಗಿಕ ಕಿರುಕುಳ :ಸೂಕ್ತ ತನಿಖೆಗೆ ಆಗ್ರಹ

ಚಿಂಚೋಳಿ ಸೆ 18: ತಾಲ್ಲೂಕಿನ ಕುಂಚಾವರಂ ಗ್ರಾಮದ ವಸತಿ ಶಾಲೆಯಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನಿಷ್ಪಾಕ್ಷಪಾತವಾಗಿ ಸೂಕ್ತ ತನಿಖೆ ನಡೆಸಿ ಪೆÇೀಕ್ರೋಕಾಯಿದೆ 2012ರ ಪ್ರಕಾರ ಅಪಾದಿತರಿಗೆ ಕಾನೂನುಅಡಿಯಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಮಕ್ಕಳ ಹಕ್ಕು ಗುಂಪುಗಳ ಒಕ್ಕೂಟದ ಪ್ರತಿನಿಧಿಗಳು ಹಾಗೂಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ಜಿಲ್ಲಾ ಯೋಜನ ಸಂಯೋಜಕ ಸಂಪತ್ ಕಟ್ಟಿ ಆಗ್ರಹಿಸಿದರು
ಪೆÇೀಲಕಪಳ್ಳಿ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭಾರತ ಸಂವಿಧಾನ ಪರಿಚ್ಛೇದ 21-ಲೈಂಗಿಕ ಕಿರುಕುಳ ಮಾನವನ ಮೂಲಭೂತ ಹಕ್ಕು ಉಲ್ಲಂಘನೆಯಾಗಿದೆ.ಸರ್ಕಾರಇಂಥ ಪ್ರಕರಣಗಳು ಗಂಭೀರವಾಗಿಪರಿಗಣಿಸಬೇಕು ಸರ್ಕಾರ ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತು ಕಾಲಕಾಲಕ್ಕೆ ಮೇಲ್ವಿಚಾರಣೆ ಹಾಗೂ ಪರಿಶೀಲನೆಗಳು ಮಕ್ಕಳ ಹಿತದೃಷ್ಟಿಯಿಂದ ನಡೆಸಬೇಕು ವಸತಿ ನಿಲಯಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿ ಸಬೇಕು ಕಾವಲುಗಾರರು ನೇಮಿಸಬೇಕು ಸಾಯಂಕಾಲ 6 ಗಂಟೆ ನಂತರ ಪುರುಷರಿಗೆ ಒಳಗೆಪ್ರವೇಶ ರದ್ದುಪಡಿಸಬೇಕು ಎಂದು ಅವರು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ಜಿಲ್ಲಾ ಸಂಯೋಜಕ ಸನೋಬಾಯಿ ದೋಡ್ಡಿ ಸಮೂದಾಯ ಸಂಘಟಕಚಂದ್ರಕಾಂತ, ಗ್ರಾಮ ಶಿಕ್ಷಕಿ ಐಶ್ವರ್ಯಾ, ಮಕ್ಕಳ ಹಕ್ಕು ಗುಂಪುಗಳ ಪ್ರತಿನಿಧಿಗಳಾದ ನಾಗಮ್ಮಾ ಭೀಮ, ಗೌತಮ್, ಭಾಗ್ಯಶ್ರೀ, ಪ್ರೀತಿರಾಣಿ, ಸಂತೋಷಿ, ಗೀತಾ, ಸುಮ್ಮಾಯ್ಯ ಫಾತೀಮಾ, ರಾಧಿಕಾ, ನಟರಾಜ್, ಪತ್ರಿಕಾಗೋಷ್ಠಿಯಲ್ಲಿ ಇದ್ದರು