ನವದೆಹಲಿ,ಜೂ.೮- ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಬ್ ಭೂಷಣ್ ಸಿಂಗ್ ವಿರುದ್ದ ಕೇಳಿ ಬಂದಿರುವ ಆರೋಪಗಳ ತನಿಖೆಯನ್ನು ಇದೇ ತಿಂಗಳ ೧೫ರೊಳಗೆ ಪೂರ್ಣಗೊಳಿಸುವ ಜೊತೆಗೆ ಜೂನ್ ೩೦ರ ಒಳಗೆ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುವುದಾಗಿ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಮಹಿಳಾ ಕ್ರೀಡಾಪಟುಗಳಿಗೆ ಭರವಸೆ ನೀಡಿದ್ಧಾರೆ.
ಪ್ರತಿಭಟನಾ ನಿರತ ಕುಸ್ತಿಪಟುಗಳು ಹಾಗೂ ಸರಕಾರಿ ಪ್ರತಿನಿಧಿಗಳ ನಡುವೆ ನಡೆದ ಎರಡನೇ ಸಭೆಯಲ್ಲಿ ಈ ಭರವಸೆ ನೀಡಿರುವ ಅವರು ಇದಾಗಿದೆ.ಜೂನ್ ೧೫ ರೊಳಗೆ ತನಿಖೆ ಪೂರ್ಣಗೊಳಿಸಲಾಗುವುದು ಮತ್ತು ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ಕ್ರೀಡಾಪಟುಗಳಿಗೆ ಭರವಸೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಕುಸ್ತಿಪಟುಗಳೊಂದಿಗೆ ಸುದೀರ್ಘ ೬ ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ. ಕುಸ್ತಿಪಟುಗಳಿಗೆ ಜೂನ್ ೩೦ ರೊಳಗೆ ಡಬ್ಲ್ಯುಎಫ್‌ಐ ಚುನಾವಣೆ ನಡೆಯಲಿದೆ” ತಿಳಿಸಿದ್ದೇವೆ ಎಂದಿದ್ಧಾರೆ.
ಇದಕ್ಕೂ ಮೊದಲು, ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನಾ ನಿರತ ಕುಸ್ತಿಪಟುಗಳು ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಸೇರಿದಂತೆ ಇನ್ನಿತರೆ ಕ್ರೀಡಾಪುಗಳೊಂದಿಗೆ ಅನುರಾಗ್ ಸಿಂಗ್ ಠಾಕೂರ್ ಸುಧೀರ್ಘ ಮಾತುಕತೆ ನಡೆಸಿದರು.
ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಸಿಂಗ್ ಅವರನ್ನು ಬಂಧಿಸುವವರೆಗೂ ಕುಸ್ತಿಪಟುಗಳು ತಮ್ಮ ಆಂದೋಲನವನ್ನು ಮುಂದುವರೆಸಲು ಅಚಲವಾಗಿರುವುದರಿಂದ ಠಾಕೂರ್ ಈ ಸಭೆ ನಡೆಸಿದರು.
ಪ್ರತಿಭಟನೆಯ ಪ್ರಮುಖ ಮುಖವಾದ ವಿನೇಶ್ ಫೊ?ಗಟ್ ಅವರು ಪೂರ್ವ ನಿಗದಿತ ’ಪಂಚಾಯತ್’ ನಲ್ಲಿ ಪಾಲ್ಗೊಳ್ಳಲು ಹರಿಯಾಣದ ಬಲಾಲಿ ಗ್ರಾಮದಲ್ಲಿದ್ದ ಕಾರಣ ಸಭೆಗೆ ಹಾಜರಾಗಲಿಲ್ಲ.