ಲೈಂಗಿಕ ಕಿರುಕುಳ ತಂದೆ ಕೊಲ್ಲಿಸಿದ ಪುತ್ರಿ ನಾಲ್ವರು ಸ್ನೇಹಿತರು ಪೊಲೀಸ್ ವಶ

ಬೆಂಗಳೂರು.೨೪-ಲೈಂಗಿಕ ಕಿರುಕುಳ ನೀಡುತ್ತಿದ್ದ ತಂದೆಯನ್ನು ರೊಚ್ಚಿಗೆದ್ದ ಪಿಯುಸಿ ಓದುತ್ತಿದ್ದ ಪುತ್ರಿ ತನ್ನ ಸ್ನೇಹಿತರಿಂದಲೇ ಕೊಲೆ ಮಾಡಿಸಿದ್ದ ಪ್ರಕರಣವನ್ನು ಬೇಧಿಸಿರುವ ಯಲಹಂಕದ ಉಪನಗರ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಜಿಕೆವಿಕೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ದೀಪಕ್ ಕುಮಾರ್ ಸಿಂಗ್ (೪೬) ಅವರ ಕೊಲೆಮಾಡಿಸಿದ್ದ ಪುತ್ರಿ ಕೃತ್ಯವೆಸಗಿದ್ದ ಆಕೆಯ ನಾಲ್ವರು ಅಪ್ರಾಪ್ತ ಸ್ನೇಹಿತರನ್ನು ವಶಕ್ಕೆ ಪಡೆದುಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ.
ಕೃತ್ಯ ನಡೆಸಿದ ಅಲ್ಲರೂ ಯಲಹಂಕ ಸರ್ಕಾರಿ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಾಗಿದ್ದು ಎಲ್ಲರೂ ಅಪ್ರಾಪ್ತರಾಗಿದ್ದು ಮತ್ತೊಬ್ಬನ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಸಿಕೆ ಬಾಬಾ ತಿಳಿಸಿದ್ದಾರೆ.
ಯಲಹಂಕದ ಉಪನಗರದ ವೀರ್ ಸಾಗರ್ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಿದ್ದ ದೀಪಕ್ ಕುಮಾರ್ ಸಿಂಗ್ ರನ್ನು ಕಳೆದ ನ.೨೦ರ ರಾತ್ರಿ ೧.೩೦ರ ವೇಳೆ ನಾಲ್ವರು ಮಚ್ಚು ಇನ್ನಿತರ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದರು.
ಪಿಯುಸಿ ಓದುತ್ತಿದ್ದ ಹಾಗೂ ೧೦ವರ್ಷದ ಹೆಣ್ಣು ಮಕ್ಕಳ ಮುಂದೆಯೇ ದೀಪಕ್ ಕುಮಾರ್ ಸಿಂಗ್ ಕೊಲೆ ನಡೆದಿತ್ತು.
ಕೃತ್ಯವೆಸಗಿದವರು ಮನೆಯಲ್ಲಿನ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ದೋಚಿರಲಿಲ್ಲ ಅಲ್ಲದೇ ಯಾವುದೇ ವಯಕ್ತಿಕ ಹಿನ್ನಲೆಯು ಕೊಲೆಯ ಹಿಂದೆ ಕಂಡುಬಂದಿರಲಿಲ್ಲ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಯಲಹಂಕದ ಉಪನಗರದ ಪೊಲೀಸರು ಪರಿಶೀಲನೆ ನಡೆಸಿ ಅನುಮಾನದ ಮೇಲಡ ಹಿರಿಯ ಪುತ್ರಿಯನ್ನು ತಮ್ಮದೇ ಧಾಟಿಯಲ್ಲಿ ವಿಚಾರಿಸಿದಾಗ ಕೃತ್ಯವನ್ನು ಬಾಯ್ಬಿಟ್ಟಿದ್ದಳು
ತಾಯಿಯು ಇತ್ತೀಚೆಗಷ್ಟೇ ಬಿಹಾರದ ತವರು ಮನೆಗೆ ಹೋಗಿದ್ದರಿಂದ ತಂದೆಯ ಜೊತೆಗೆ ಇಬ್ಬರು ಹೆಣ್ಣು ಮಕ್ಕಳು ವಾಸಿಸುತ್ತಿದ್ದು ೧೭ವರ್ಷದ ಪಿಯುಸಿ ಓದುತ್ತಿದ್ದ ಹಿರಿಯ ಪುತ್ರಿಗೆ ತಂದೆ ದೀಪಕ್ ಕುಮಾರ್ ಸಿಂಗ್ ಲೈಂಗಿಕ ಕಿರುಕುಳ ನೀಡುತ್ತಿದ್ದ.
ಅಲ್ಲದೇ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದು ಸಾಕಷ್ಟು ಬಾರಿ ವಿರೋಧ ವ್ಯಕ್ತಪಡಿಸಿದರೂ ತಂದೆಯ ನಡವಳಿಕೆ ಸರಿಹೋಗಿರಲಿಲ್ಲ ಇದರಿಂದ ಆಕ್ರೋಶಗೊಂಡ ಆಕೆಯು ತನ್ನ ಇಬ್ಬರೂ ಸ್ನೇಹಿತರ ಬಳಿ ನೋವು ತೋಡಿಕೊಂಡು ಕೊಲೆ ಮಾಡುವಂತೆ ವಿನಂತಿಸಿದ್ದರು.
ಅದರಂತೆ ಇಬ್ಬರು ಸ್ನೇಹಿತರು ಸೇರಿ ಐವರು ಮದ್ಯರಾತ್ರಿ ಮನೆಗೆ ನುಗ್ಗಿ ದೀಪಕ್ ಕುಮಾರ್ ಸಿಂಗ್ ಗೆ ಮಚ್ಚು ಇನ್ನಿತರ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದು ಖಚಿತವಾದ ಮಾಹಿತಿಯನ್ನು ಆಧರಿಸಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.