ಲೈಂಗಿಕ ಕಿರುಕುಳದ ವಿರುದ್ದ ಕ್ರಮ ಜರುಗಿಸಲು ಮನವಿ


ಸಂಡೂರು :ಮೇ:19 ಓಲಂಪಿಕ್ ಪದಕ ವಿಜೇತರರು ವಿಶ್ವ ಚಾಂಪಿಯನ್ ಕುಸ್ತಿ ಪಟುಗಳು ಸೇರಿದಂತೆ ದೇಶದ ಹೆಮ್ಮೆಯ ಕುಸ್ತಿ ಕ್ರೀಡಪಟುಗಳು 2023 ಏಪ್ರಿಲ್ 2024ರಿಂದ ನವದೆಹಲಿಯ ಜಂತರ್ ಮಂತರ್‍ನಲ್ಲಿ ಅನಿರ್ದಿಷ್ಟ ಅವಧಿ ಪ್ರತಿಭಟನೆ ನಡೆಸುತ್ತಿರುವುದು ಗೊತ್ತಿರುವ ವಿಚಾರವಾಗಿದೆ. ಈ ವಿಚಾರವಾಗಿ ಪೊಲೀಸ್ ದೂರು ನೀಡಿದರೂ ಎಫ್.ಐ.ಆರ್. ದಾಖಲು ಆಗಿರಲಿಲ್ಲ. ಸುಪ್ರಿಂ ಕೋರ್ಟ್ ಮಧ್ಯ ಪ್ರವೇಶಿಸಿದ ನಂತರವೇ ಎಫ್.ಐ.ಆರ್. ದಾಖಲಾಗಿದೆ. ಈ ಪ್ರತಿಭಟನಾ ಕುಸ್ತಿಪಟುಗಳು ತಮ್ಮ ಮೆಲಾಗಿರುವ ಲೈಂಗಿಕ ಕಿರುಕುಳ ಹಾಗೂ ಹಿಂಸೆ ಸಂಬಂಧಪಟ್ಟ ನಿಸ್ಪಕ್ಷಪಾಥ ತನಿಖೆ ನಡೆಯೊಬೇಕೆಂದು ಕೇಳೀಕೊಳ್ಳುತ್ತಿದ್ದಾರೆ. ಕುಸ್ತಿಪಟುಗಳು ಆರೋಪದ ಹಿನ್ನೆಲೆಯಲ್ಲಿ ರಚಿಸಲಾದ ವಿಚಾರಣಾ ಸಮಿತಿಯ ವರದಿಯನ್ನು ಸಾರ್ವಜನಿಕರ ಅಗಾಹನೆ ತರಬೇಕೆಂದು ಸಿ.ಐ.ಟಿ.ಯು ಮುಖಂಡ ಜೆ.ಎಂ. ಚೆನ್ನಬಸಯ್ಯನವರು ಒತ್ತಾಯಿಸಿದರು.
ಅವರು ಸೆಂಟರ ಆಫ್ ಇಂಡಿಯಾ ಯೂನಿಯನ್ ಟ್ರೇಡ್ಸ್ (ಸಿ.ಐ.ಟಿ.ಯು) ಕರ್ನಾಟಕ ಪ್ರಾಂತ್ಯ ರೈತ ಸಂಘ, (ಕೆ.ಪಿ.ಆರ್.ಎಸ) ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ ಕರ್ನಟಕ ರಾಜ್ಯ ಮಸಣ ಕಾರ್ಮಿಕರ ಸಂಘ, ಸಂಡೂರು ತಆಲ್ಲೂಕು ಸಮಿತಿಯಿಂದ ಸಂಡೂರಿನ ತಹಶೀಲ್ದಾರ ಶಾಂತಲಾ ಚಂದನ್ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಅವರು ಮನವಿ ಪತ್ರದಲ್ಲಿ ಲೈಂಗಿಕ ಕಿರುಕುಳದ ಆರೋಪಿ ಬಿ.ಜೆ.ಪಿ. ಸಂಸದ ಬ್ರಿಜ್ ಭೂಷಣ ಸಿಂಗ ಹಾಗೂ ಬಿ.ಜೆ.ಪಿ. ಹರಿಯಾಣ ಮಂತ್ರಿ ಸಂದೀಪ್ ಸಿಂಗ್ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಭಾರತ ಕುಸ್ತಿ ಫೆಡರೇಶನ ಮುಖ್ಯಸ್ಥ ಹಾಗೂ ಇನ್ನಿತರ ಸಿಬ್ಬಂದಿಗಳು ಅಪ್ರಾಪ್ತ ಹೆಣ್ಣುಮಕ್ಕಳು ಸೇರಿದಂತೆ ಪ್ರಖ್ಯಾತ ಮಹಿಳಾ ಕುಸ್ತಿಪಟುಗಳನ್ನು ಲೈಂಗಿಕ ಕಿರುಕುಳ ಹಿಂಸೆಗೆ ಒಳಪಡಿಸಿರುವುದು ಅತ್ಯಂತ ಅಘಾತಕಾರಿಯಾಗಿದೆ. ಈ ಪ್ರಕರಣದಿಂದ ದೇಶವೇ ತಲೆ ತಗ್ಗಿಸುವಂತ ಘಟನೆಯಾಗಿದೆ. “ಬೇಟಿ ಬಚಾವೋ ಬೇಟಿ ಪಡಾವೋ” ಬಿ.ಜೆ.ಪಿ.ಯ ನೇತೃತ್ವದ ಒಕ್ಕೂಟ ಸರ್ಕಾರ ಹೀನ ಅಪರಾಧದ ಆರೋಪಿ ಬಿ.ಜೆ.ಪಿ. ಸಂಸದರನ್ನ ರಕ್ಷಿಸುತ್ತಿರುವುದು ನಾಚಿಕೆಗೇಡಿನ ವಿಚಾರವಾಗಿದೆ. ದೂರಿನ ಆಧಾರದ ಮೇಲೆ ಕಾನೂನು ಕ್ರಮ ಜರುಗಿಸಿ ನೊಂದ ಮಹಿಳಾ ಕ್ರೀಡಾಪಟುಗಳು ರಕ್ಷಣೆ ಒದಗಿಸಬೇಕಾಗಿದೆ. ಆಗಿದ್ದ ಬಿ.ಜೆ.ಪಿ. ನೇತೃತ್ವ ತನ್ನ ಪೊಲೀಸ್ ಬಳಸಿ ನ್ಯಾಯಕ್ಕಾಗಿ ಪ್ರತಿಭಟಿಸಿ ಕ್ರೀಡಾಪಟುಗಳ ಧಮನಕಾರಿ ಕ್ರಮಗಳನ್ನು ಅನುಸರಿಸುತ್ತಿದೆ. ದೆಹಲಿ ಪೊಲೀಸರು ಕುಡಿದು ಬಂದು ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಖಂಡನೀಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎ.ಎಱ್ರಿಸ್ವಾಮಿ ಎಚ್. ದುರುಗಮ್ಮ, ಖಲಂದರ್ ಭಾಷ ಕೇರಳಪ್ಪ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.