
ನವದೆಹಲಿ,ಮಾ.೯- ದೇಶದಲ್ಲಿ ಕ್ರಿಪ್ಟೋ ಕರೆನ್ಸಿ ಮತ್ತು ಡಿಜಿಟಲ್ ಸ್ವತ್ತುಗಳ ವಹಿವಾಟನ್ನು ಹಣ ಲೇವಾದೇವಿ ಕಾಯ್ದೆಯಡಿ ಕೇಂದ್ರ ಸರ್ಕಾರ ತಂದಿದೆ. ಇದರಿಂದ ಅವ್ಯವಹಾರಕ್ಕೆ ಕಡಿವಾಣ ಹಾಕಲು ನಿರ್ಧರಿಸಿದೆ.
ಡಿಜಿಟಲ್ ಕರೆನ್ಸಿ ಮತ್ತು ಸ್ವತ್ತುಗಳ ಮೇಲ್ವಿಚಾರಣೆ ಬಿಗಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಕ್ರಿಪ್ಟೋ ಟ್ರೇಡಿಂಗ್, ಸೇಫ್ ಕೀಪಿಂಗ್ ಮತ್ತು ಸಂಬಂಧಿತ ಹಣಕಾಸು ಸೇವೆಗಳನ್ನು ಮನಿ ಲಾಂಡರಿಂಗ್ ತಡೆ ಕಾಯಿದೆಯ ವ್ಯಾಪ್ತಿಯಲ್ಲಿ ತಂದಿದ್ದು ಕೇಂದ್ರ ಹಣಕಾಸು ಸಚಿವಾಲಯ ಈ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಡಿಜಿಟಲ್ ಸ್ವತ್ತುಗಳೊಂದಿಗೆ ವ್ಯವಹರಿಸುವ ಕ್ರಿಪ್ಟೋ ವಿನಿಮಯ ಕೇಂದ್ರಗಳು ಮತ್ತು ಮಧ್ಯವರ್ತಿಗಳು ಈಗ ತಮ್ಮ ಕ್ಲೈಂಟ್ ಗಳು ಮತ್ತು ಪ್ಲಾಟ್‌ಫಾರ್ಮ್‌ನ ಬಳಕೆದಾರರ ಸಂಪೂರ್ಣ ಮಾಹಿತಿ ನೀಡುವುದು ಕಡ್ಡಾಯವಾಗಿದೆ.
ವಿನಿಮಯ ಕೇಂದ್ರಗಲ್ಲಿ ಕ್ರಿಪ್ಟೊ ಕರೆನ್ಸಿ ಮತ್ತು ಡಿಜಿಟಲ್ ಸ್ವತ್ತಿನ ವಹಿವಾಟಿನಲ್ಲಿ ಅನುಮಾನಾಸ್ಪದ ಚಟುವಟಿಕೆ ಕಂಡು ಬಂದರೆ ಹಣಕಾಸು ಗುಪ್ತಚರ ಘಟಕ ವರದಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಮುಕ್ತ ಆಪ್‌ಗಳ ಮೂಲಕ ವ್ಯವಹರಿಸುವ ಘಟಕಗಳನ್ನು ಹಣ ಲೇಚಾದೇವಿ ಕಾಯ್ದೆಯಡಿ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು, ರಿಯಲ್ ಎಸ್ಟೇಟ್ ಮತ್ತು ಆಭರಣ ಕ್ಷೇತ್ರಗಳಲ್ಲಿ ತೊಡಗಿರುವ ಘಟಕಗಳು ಮತ್ತು ಕ್ಯಾಸಿನೊಗಳು ಈಗ ‘ವರದಿ ಮಾಡುವ ಘಟಕಗಳು’ ಅಡಿಯಲ್ಲಿ ತರಲಾಗಿದೆ.
ನಿಯಮ ಉಲ್ಲಂಘಿಸಿದರೆ ಈ ಕಾನೂನಿನ ಅಡಿಯಲ್ಲಿ, ಪ್ರತಿ ವರದಿ ಮಾಡುವಂತೆ ಎಲ್ಲಾ ವಹಿವಾಟು ಘಟಕಗಳಿಗೆ ಸೂಚನೆ ನೀಡಿದೆ.
ಕ್ರಿಪ್ಟೋಕರೆನ್ಸಿ ವಲಯವನ್ನು ಹಣ ಲೇವಾದೇವಿ ವ್ಯಾಪ್ತಿಯಡಿಯಲ್ಲಿ ತಂದಿರುವ ಕೇಂದ್ರದ ಕ್ರಮ, ಬ್ಯಾಂಕ್‌ಗಳು ಅಥವಾ ಸ್ಟಾಕ್ ಬ್ರೋಕರ್‌ಗಳಂತಹ ಇತರ ನಿಯಂತ್ರಿತ ಘಟಕಗಳು ಅನುಸರಿಸುವ ರೀತಿಯ ಮನಿ ಲಾಂಡರಿಂಗ್ ವಿರೋಧಿ ಮಾನದಂಡ ಬಿಗಿ ಗೊಳಸಿಸಲು ನೆರವಾಗಿದೆ.
ಡಿಜಿಟಲ್ ಸ್ವತ್ತುಗಳು ಮತ್ತು ಫಿಯೆಟ್ ಕರೆನ್ಸಿಗಳ ನಡುವೆ ವಿನಿಮಯ, ಒಂದು ಅಥವಾ ಹೆಚ್ಚಿನ ರೀತಿಯ ಡಿಜಿಟಲ್ ಸ್ವತ್ತುಗಳ ನಡುವೆ ವಿನಿಮಯ, ಡಿಜಿಟಲ್ ಸ್ವತ್ತುಗಳ ವರ್ಗಾವಣೆ, ವರ್ಚುವಲ್ ಡಿಜಿಟಲ್ ಸ್ವತ್ತುಗಳು ಅಥವಾ ಉಪಕರಣಗಳ ಸುರಕ್ಷತೆ ಅಥವಾ ನಿರ್ವಹಣೆ ವರ್ಚುವಲ್ ಡಿಜಿಟಲ್ ಆಸ್ತಿಗಳ ಮೇಲೆ ನಿಯಂತ್ರಣ ಸಕ್ರಿಯಗೊಳಿಸುತ್ತದೆ ಎಂದು ಗೆಜೆಟ್ ಅಧಿಸೂಚೆಯಲ್ಲಿ ಈ ವಿಷಯ ತಿಳಿಸಿದೆ.
ಈ ಕಾನೂನಿನ ಅಡಿಯಲ್ಲಿ, ಪ್ರತಿ ವರದಿ ಮಾಡುವ ಘಟಕ ಕನಿಷ್ಠ ಐದು ವರ್ಷಗಳವರೆಗೆ ೧೦ ಲಕ್ಷ ರೂ.ಗಿಂತ ಹೆಚ್ಚಿನ ಎಲ್ಲಾ ನಗದು ವಹಿವಾಟುಗಳ ದಾಖಲೆ ಸೇರಿದಂತೆ ಎಲ್ಲಾ ವಹಿವಾಟುಗಳ ದಾಖಲೆ ನಿರ್ವಹಿಸಬೇಕಾಗುತ್ತದೆ. ಒಂದು ತಿಂಗಳೊಳಗೆ ಅಂತಹ ಸರಣಿಯ ವಹಿವಾಟುಗಳು ನಡೆದಿರುವ ಮತ್ತು ಮಾಸಿಕ ಒಟ್ಟು ಮೊತ್ತ ರೂ. ೧೦ ಲಕ್ಷಕ್ಕಿಂತ ಹೆಚ್ಚಿರುವ ರೂ. ೧೦ ಲಕ್ಷಕ್ಕಿಂತ ಕಡಿಮೆ ಮೌಲ್ಯದ ವೈಯಕ್ತಿಕವಾಗಿ ಪರಸ್ಪರ ಸಂಪರ್ಕಗೊಂಡಿರುವ ಎಲ್ಲಾ ನಗದು ವಹಿವಾಟುಗಳ ದಾಖಲೆ ಒದಗಿಸುವಂತೆ ಸೂಚಿಸಲಾಗಿದೆ.