ಲೇವಾದೇವಿಗಾರರ ಸಂಘದ ಅಧ್ಯಕ್ಷರಾಗಿ ಸುಭಾಷ ಕಮಲಾಪೂರೆ ಪುನರಾಯ್ಕೆ

ಕಲಬುರಗಿ,ಆ.27-ಕಲಬುರಗಿ ಜಿಲ್ಲಾ ಲೇವಾದೇವಿಗಾರರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಆ.26 ರಂದು ನಗರದ ಹೋಟೆಲ್ ಪೂರ್ಣಾನಂದ ಪ್ಯಾರಾಡಾಯಿಸ್‍ನಲ್ಲಿ ಸಂಘದ ಅಧ್ಯಕ್ಷರಾದ ಸುಭಾಷ ಎನ್.ಕಮಲಾಪೂರೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ 2022-23ನೇ ಸಾಲಿನ ಲೆಕ್ಕಪತ್ರ ಮಂಡನೆ ಹಾಗೂ ಅನುಮೋದನೆ ನಡೆಯಿತು. 2023-2028ನೇ ಸಾಲಿಗೆ ಸಂಘದ ಆಡಳಿತ ಮಂಡಳಿ ಸರ್ವ ಸದಸ್ಯರ ಸಮ್ಮುಖದಲ್ಲಿ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ಸುಭಾಷ ಎನ್.ಕಮಲಾಪೂರೆ, ಉಪಾಧ್ಯಕ್ಷರಾಗಿ ಬಾಪೂರಾವ ಕೆ.ಪಾಗಾ, ಮಲ್ಲಿಕಾರ್ಜುನ ಮೇಳಕುಂದಿ, ವಿಜಯಕುಮಾರ ಮಾಲಿಪಾಟೀಲ, ಪ್ರಧಾನ ಕಾರ್ಯದರ್ಶಿಯಾಗಿ ಶಿವಾನಂದ ಕಶೆಟ್ಟಿ ಬಾಚನಾಳ, ಸಹ ಕಾರ್ಯದರ್ಶಿಯಾಗಿ ಬಸವರಾಜ ಜಗನ್ನಾಥ ಖಾನಾಪೂರ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಗಂಗಾಧರ ಶ್ರೀಗಿರಿ, ಗುರುನಂಜಯ್ಯ ಮಠಪತಿ ಹಾಗೂ ಕೋಶಾಧ್ಯಕ್ಷರಾಗಿ ಜಗನ್ನಾಥ ತಡಕಲ್ ಆಯ್ಕೆಯಾದರು ಎಂದು ಸಂಘದ ಸಹ ಕಾರ್ಯದರ್ಶಿ ಬಸವರಾಜ ಜೆ.ಖಾನಾಪೂರ ತಿಳಿಸಿದ್ದಾರೆ.