ಲೇಬಲ್ ನಂಬರ್ ನಮೂದಿಸದೆ ಪ್ರಕರಣ ದಾಖಲು: ಡಿಸಿಗೆ ದೂರು

ಮಾನ್ವಿ.ಏ.೩೦-ಪಟ್ಟಣದಲ್ಲಿ ಏ ೨೮ ರಂದು ಕೆಲ ಖಾಸಗಿ ಕಟ್ಟಡಗಳಲ್ಲಿ ಮದ್ಯದ ಬಾಟಲುಗಳು ಮತ್ತು ಬಾಕ್ಸ್‌ಗಳು ಅಕ್ರಮವಾಗಿ ಶೇಖರಣೆ ಮಾಡಿರುವುದನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ ಮಾಲ್‌ಗಳ ಮೇಲೆ ಲೇಬಲ್ ನಂಬರ್ ನಮೂದಿಸದೆ ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ವಸಂತ ಕೊಡ್ಲಿ ಡಿಎಸ್‌ಎಸ್ ದೂರು ನೀಡಿದ್ದಾರೆ.
ಮಾನ್ವಿ ಪಟ್ಟಣದ ಎರಡನೇ ಲಾಕ್‌ಡೌನಲ್ಲಿ ಎವಿ ಉದ್ ಕಾರ್ಮಿಂಗ್ ಎಂಬ ಕಾರಪೆಂಟರ್‌ನ ಅಂಗಡಿಯ ಪಕ್ಕದ ಖಾಲಿ ಕಟ್ಟಡದಲ್ಲಿ ೩೨ ರಟ್ಟಿನ ಪೆಟ್ಟಿಗೆಯ ೧೫೩೬ ಒರಿಜಿನಲ್ ಚಾಯ್ಸ್ ವಿಸ್ಕಿ ಮತ್ತು ೭೮ ರಟ್ಟಿನ ಪೆಟ್ಟಿಗೆಯಲ್ಲಿ ೭೪೮೮ ಹೈವಾಡ್ಸ್ ವಿಸ್ಕಿ ಪತ್ತೆಯಾಗಿದೆ.
ಈಮಾಲ್‌ಗಳು ಯಾರಿಗೆ ಸೇರಿದ್ದು ಕಟ್ಟಡ ಯಾರದು ಎಂಬುದನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು.
ಆದರೆ ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ ಮಾಲ್‌ಗಳ ಮೇಲೆ ಲೇಬಲ್ ನಂಬರ್ ಮತ್ತು ಕ್ರಮ ಸಂಖ್ಯೆ ನಮೂದಿಸಿಲ್ಲ. ಮಾಲ್ ಕಟ್ಟಡದ ಮಾಲೀಕನ ಹೆಸರು ಕೂಡ ನಮೂದಿಸಿಲ್ಲ. ಖರ್ಚು ಮಾಡಲು ಇದನ್ನು ನೋಡಿದರೆ ಅಬಕಾರಿ ಅಧಿಕಾರಿಗಳು ಅಕ್ರಮ ದಂಧೆಕೋರರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ ಎಂಬ ಅನುಮಾನಗಳು ಕಂಡು ಬಂದಿರುತ್ತವೆ.
ಈ ಮನವಿಯನ್ನು ಕೂಲಂಕುಷವಾಗಿ ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅನಿಲ್ ಕುಮಾರ್ ಕೋನಾಪುರಪೇಟೆ ಡಿಎಸ್‌ಎಸ್ ಮಾನ್ವಿ ಉಪಸ್ಥಿತರಿದ್ದರು.