ಲೇಖಕಿ ಡಾ. ಸರೋಜಿನಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಧಾರವಾಡ ಮೇ.4–:ಭಾರತ ಸರಕಾರದ ಎಂ.ಎಸ್.ಎಂ.ಇ. ಸಚಿವಾಲಯದ ಅಡಿ ನೋಂದಾಯಿತವಾಗಿರುವ ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಯು ಕೊಡಮಾಡುವ ಜೀವಮಾನ ಸಾಧನೆಯ ಅಂತಾರಾಷ್ಟ್ರೀಯ ಪ್ರಶಸ್ತಿ ಹಿರಿಯ ಲೇಖಕಿ ಡಾ.ಸರೋಜಿನಿ ಮೋಹನ ಭದ್ರಾಪೂರ ಅವರಿಗೆ ಲಭಿಸಿದೆ.
ಕನ್ನಡ ಮತ್ತು ಹಿಂದಿ ಭಾಷೆಯ ಸುಮಾರು10ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿರುವಇವರು ಹಲವಾರು ಮಹತ್ವದಕವಿ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ. ಕರ್ನಾಟಕಅಚೀವರ್ಸ ಬುಕ್‍ಆಫ್‍ರೆಕಾರ್ಡ, ಜನಮನ ಫೌಂಡೇಷನ್, ಹಿಂದಿ ಕಾಶ್ಮೀರಿ ಸಂಗಮ ಸೇರಿದಂತೆಹಲವಾರು ಮಹತ್ವದ ಸಾಹಿತ್ಯಿಕ, ಸಾಂಸ್ಕøತಿಕ ಮತ್ತು ಸಾಮಾಜಿಕಚಿಂತನೆಯ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಸಿಂಗಾಪೂರ, ಮಲೇಷಿಯಾ, ಈಜಿಪ್ತ, ಹಾಂಗ್‍ಕಾಂಗ್, ಚೀನಾ, ರಶಿಯಾ, ಪೋರ್ಟಬ್ಲೇರ್,ಮಾರಿಸಿಸ್ ಸೇರಿದಂತೆ ಹ¯ವಾರು ವಿದೇಶಗಳಲ್ಲಿಯ ವಿಭಿನ್ನ ಸಂಘಟನೆಗಳ ವೇದಿಕೆಗಳಲ್ಲಿ ತಮ್ಮ ವಿಚಾರಗಳನ್ನು ಭದ್ರಾಪೂರ ಹಂಚಿಕೊಂಡಿದ್ದಾರೆ. ಲಲ್ಲೇಶ್ವರಿ ಶಾರದಾ ಸಮ್ಮಾನ ಪುರಸ್ಕಾರ, ಸಂತನಂದಬಬ ಸ್ಮøತಿ ಸಾಹಿತ್ಯ ಪುರಸ್ಕಾರ, ತಕ್ಷಶಿಲಾ ವಿದ್ಯಾಪೀಠ ಕೊಡಮಾಡುವ ವಿದ್ಯಾವಾಚಸ್ಪತಿ ಪುರಸ್ಕಾರ, ರಾಷ್ಟ್ರೀಯ ಬಸವರತ್ನ ಪ್ರಶಸ್ತಿ, ಕಾಯಕ ವಿಭೂಷಣ ಪ್ರಶಸ್ತಿ, ಶರಣರತ್ನ ಪ್ರಶಸ್ತಿ ಸೇರಿದಂತೆ ಸರೋಜಿನಿ ಭದ್ರಾಪೂರ ಅವರಿಗೆ ಈ ತನಕರಾಷ್ಟ್ರೀಯ ಹಾಗೂ ಅಂತಾಷ್ಟ್ರೀಯ ಮಟ್ಟದಸುಮಾರು 30ಕ್ಕೂ ಹೆಚ್ಚು ಉನ್ನತ ಪ್ರಶಸ್ತಿ-ಪುರಸ್ಕಾರಗಳು ಲಭಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ತಮಿಳುನಾಡಿನ ಸಿದ್ಧಾರ್ಥ ಆ್ಯಂಡ್‍ರಿಸರ್ಚ ಫೌಂಡೇಷನ್ ಏರ್ಪಡಿಸಿದ್ದ ಇಂಡೋ ಅಮೇರಿಕನ್ ಸಮಾವೇಶದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಈ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿದೆ.