ಲೇಖಕಿಯರ ಏಳಿಗೆಯಲ್ಲಿ ಡಾ.ಯಶೋದಮ್ಮ ಸಿದಬಟ್ಟೆ ಕೊಡುಗೆ ಅಪಾರ: ಮಹಾಗಾಂವಕರ್

ಬೀದರ್:ಮಾ.28: ಜಿಲ್ಲೆಯಲ್ಲಿ ಲೇಕಕಕಿಯರ ಸಂಘ ಹುಟ್ಟು ಹಾಕಿ, ಹಲವಾರು ಲೇಖಕಿಯರು ಹಾಗೂ ಸಾಹಿತಿಗಳಿಗೆ ಪ್ರೇರಣೆ ಜೊತೆಗೆ ಅವರ ಏಳಿಗೆಗೆ ದಿ.ಡಾ.ಯಶೋದಮ್ಮ ಸಿದಬಟ್ಟೆ ಅವರ ಕೊಡುಗೆ ಅಪಾರವಾಗಿದೆ ಎಂದು ಕಲಬುರಗಿಯ ಸಾಹಿತಿ ಕಾವ್ಯಶ್ರೀ ಮಾಹಾಗಾಂವಕರ್ ಅಭಿಪ್ರಾಯ ಪಟ್ಟರು.

ಶನಿವಾರ ನಗರದ ಹೋಟಲ ಕೃಷ್ನಾ ರೆಸಿಡೆನ್ಸಿ ಅವರಣದಲ್ಲಿ ಕರ್ನಾಟಕ ಲೇಕಕಕಿಯರ ಸಂಘದ ಜಿಲ್ಲಾ ಘಟಕದಿಂದ ಜರುಗಿದ ಕವಿಗೋಷ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಡಿದರು.

2004ರಲ್ಲಿ ಜಿಲ್ಲೆಯಲ್ಲಿ ಲೇಖಕಿಯರ ಸಂಘ ಹುಟ್ಟು ಹಾಕಲು ಬೆಂಗಳೂರಿನ ಉಷಾ ಪಿ.ರೈ, ಡಾ.ಕೆ.ಸಂಧ್ಯಾ ರೆಡ್ಡಿ ಹಾಗೂ ನಾಗಮಣಿ ಎಸ್.ರಾವ್ ಅವರ ಮಾದರಿ ಅನುಸರಿಸಿದರು. ಆಗ 50 ಜನ ಹೆಣ್ಣು ಮಕ್ಕಳಿಗೆ ಸಾಹಿತ್ಯದ ರುಚಿ ಹಚ್ಚಿಸಿದರು. ಪುಸ್ತಕ ಬರೆಯಲು ಪ್ರೋತ್ಸಾಹಿಸಿದರು. ಅಂಥ ಸಂಘಟನೆಯನ್ನು ಲೀಲಾವತಿ ನಿಂಬೂರ, ನಂತರ ವಜ್ರಾ ಪಾಟೀಲ, ತದನಂತರ ಕಸ್ತುರಿ ಪಟಪಳ್ಳಿ ಆದ ಮೇಲೆ ಈಗ ಭಾರತಿ ವಸ್ತ್ರದ್ ಅವರು ನಡೆಸಿಕೊಂಡು ಹೋಗುತ್ತಿರುವುದು ಬಹಳ ಸಂತೋಷ ಎಂದರು.

‘ಡಾ.ಯಶೋದಮ್ಮ ಸಿದಬಟ್ಟೆ ಅವರ ಬದುಕು ಬರಹ’ಕುರಿತು ಶರಣಬಸವೇಶ್ವರ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಪಿ.ಹೆಚ್.ಡಿ ಅಧ್ಯಯನ ಮಾಡುತ್ತಿರುವ ವಿಷಯ ಹೇಳಲು ತುಂಬ ಹೆಮ್ಮೆ ಅನಿಸುತ್ತಿದೆ ಎಂದ ಅವರು, ಇಂದು 25 ಜನ ಕವಿಯತ್ರಿಯರು ತಮ್ಮ ಕವನ ವಾಚನ ಮಾಡಿ ಜಿಲ್ಲೆಯಲ್ಲಿ ಸಾಹಿತ್ಯದ ಕಂಪು ಹರಡಿಸಿರುವುದು ಬಹಳ ಅಭಿಮಾನದ ಸಂಗತಿ ಎಂದು ಕಾವ್ಯಶ್ರೀ ಬಣ್ಣಿಸಿದರು.

ಕರುನಾಡ ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಸಂಜುಕುಮಾರ ಅತಿವಾಳೆ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕಾವ್ಯ ಬರೆಯುವುದು ಮುಖ್ಯವಲ್ಲ, ಆದರೆ ಗುಣಮಟ್ಟದ ಕಾವ್ಯ ಬರೆಯುವುದು ಬಹಳ ಮುಖ್ಯ. ತಾನು ಒಂದು ಕವನ ಬರೆದಾಕ್ಷಣ ಜಂಬ ಕಚ್ಚಿಕೊಂಡರೆ ಅದು ತನ್ನ ಘನತೆ ಕಳೆದುಕೊಳ್ಲುತ್ತದೆ. ನುರಿತ ತರಬೇತಿ ಹಗೂ ಪ್ರೋತ್ಸಾಹದಿಂದ ಕಾವ್ಯಕ್ಕೆ ಗಟ್ಟಿತನ ಬರುತ್ತದೆ. ಕರುನಾಡು ಸಾಹಿತ್ಯಿಕ ಹಾಗೂ ಸಾಂಸ್ಕøತಿಕ ವೇದಿಕೆ ಈ ನಿಟ್ಟಿನಲ್ಲಿ ಕಮ್ಮಟಗಳು ಎರ್ಪಡಿಸಿ ಯುವ ಬರಹಗಾರರಿಗೆ ತರಬೇತಿ ನೀಡಲಾಗುವುದೆಂದರು.

ಆಶೆಯ ನುಡಿ ನುಡಿದ ಲೇಖಕಿಯರ ಸಂಘದ ಕಾರ್ಯದರ್ಶಿ ಪಾರ್ವತಿ ಸೋನಾರೆ, ರಸ್ತೆ ಮೇಲೆ ಡಾಂಬರ್ ಹಾಕುವ, ಹೊಲದಲ್ಲಿ ಕಳೆ ಕೀಳಯವ ಹಾಗೂ ದೂರದಿಂದ ತಲೆ ಮೇಲೆ ನೀರು ಹೊತ್ತು ತರುವ ಕಾರ್ಮಿಕರ ಧ್ವನಿಯಾಗಿ ಕಾವ್ಯ ಹೊರ ಬರಬೇಕು. ಒಟ್ಟಾರೆ ಪ್ರಸ್ತುತ ವಿದ್ಯಮಾನಗಳ ಮೇಲೆ ಬೆಳಕು ಚಲ್ಲುವ ಕಾವ್ಯ ಮೂಡಿ ಬರಬೇಕೆಂದು ಕರೆ ನೀಡಿದರು..

ಈ ಸಂದರ್ಭದಲ್ಲಿ ವೀರೇಶ್ವರಿ ಮೂಲಗೆ, ಶಿಲ್ಪಾ ಮಜಗೆ, ಸುಜಾತಾ ಹೊಸಮನಿ, ಈಶ್ವರಮ್ಮ ಪಾಟೀಲ, ಸುನೀತಾ ದಾಡಗಿ, ಚನ್ನಮ್ಮ ವಲ್ಲೆಪೂರೆ, ಡಾ. ಸುನೀತಾ ಕೂಡ್ಲಿಕರ್, ವೇದಾವತಿ ಮಠಪತಿ, ಕುಸುಮಾ ಹತ್ಯಾಳ, ಡಾ.ಶಿವಲೀಲಾ ಮಠಪತಿ, ಮಹನಂದಾ ಎಸ್.ಪಾಟೀಲ, ಮಲ್ಲೇಶ್ವರಿ ಉದಯಗಿರಿ, ಬುದ್ಧದೇವಿ ಸಂಗಮ, ಕೀರ್ತಿಲತಾ ಹೊಸಳ್ಳಿ, ಡಾ. ಶ್ರೀದೇವಿ ಕಟ್ಟಿಮನಿ, ರಾಜಮ್ಮ ಚಿಕ್ಕಪೇಟೆ, ಡಾ. ಜಗದೇವಿ ತಿಬಶೆಟ್ಟಿ, ಪುಷ್ಪಾ ಕನಕ, ಸಿದ್ದಮ್ಮ ಬಶೆಣ್ಣೆ, ಸೀಮಾ ಮೇತ್ರೆ, ಗೀತಾಂಜಲಿ ಪಾಟೀಲ್, ಧನಲಕ್ಷ್ಮಿ ಪಾಟೀಲ್, ಮಾಣಿಕ್ ದೇವಿ ಪಾಟೀಲ್, ಸಿದ್ದಮ್ಮ ಹಳಕಾಯಿ, ಆಶಾ ಮೇತ್ರಿ, ಮಾಧುರಿ ಕುಲಕರ್ಣಿ ಸೇರಿದಂತೆ 25ಕ್ಕೂ ಅಧಿಕ ಕವಿಗಳು ಕವನ ವಾಚನ ಮಾಡಿದರು.

ಇದೇ ವೇಳೆ ಭಾಗ್ಯವತಿ ಸಜ್ಯನಶೆಟ್ಟಿ, ಗೀತಾ ಮೂಲಗೆ, ರೇಣುಕಾ ಹಾಗೂ ಬಿ.ಎಂ ಶಶೀಕಲಾ ಅವರನ್ನು ಸನ್ಮಾನಿಸಲಾಯಿತು.

ಲೇಖಕಿಯರ ಸಂಘದ ಸದಸ್ಯರಾದ ಜಗದೇವಿ ದುಬುಲಗುಂಡೆ, ಕಸ್ತುರಿ ಪಟಪಳ್ಳಿ, ರೂಪಾ ಸಂಗಮಕರ್, ಭಾಗಿರಥಿ ಕೊಂಡಾ, ಮಂಗಲಾ ಭಾಗವತ ಹಾಗೂ ಇತರರು ವೇದಿಕೆಯಲ್ಲಿದ್ದರು.

ಆರಂಭದಲ್ಲಿ ಸ್ವರೂಪರಾಣಿ ಸ್ವಾಗತಿಸಿ, ಶ್ರಯಾ ಮಹೇಂದರಕರ್ ಕಾರ್ಯಕ್ರಮ ನಿರೂಪಿಸಿ, ಶ್ರೀದೇವಿ ಪಾಟೀಲ ವಂದಿಸಿದರು.