ಲೆಕ್ಕ ಪರಿಶೋಧಕರ ಸಂಘದಲ್ಲಿ ಸ್ವಾತಂತ್ರ್ಯೋತ್ಸವ

ಬಳ್ಳಾರಿ, ಆ.15: ದಿ. ಇನ್ಸ್ ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತಿಯ ಪರಿಷತ್ತಿನ ಬಳ್ಳಾರಿ ಶಾಕೆಯಲ್ಲಿ ಇಂದು 77ನೇ ಸ್ವಾತಂತ್ರ್ಯ ದಿನೋತ್ಸವವನ್ನು ಐಸಿಎಐ ಭವನದಲ್ಲಿ ರಾಷ್ಟ್ರ ಧ್ವಜಾರೋಹಣದ ಮೂಲಕ ಆಚರಿಸಲಾಯಿತು.ಧ್ವಜಾರೋಹದ ನಂತರ ಸಭೆಯನ್ನು ಉದ್ದೇಶಿಸಿ ಅಧ್ಯಕ್ಷರು ಸಿಎ ನಾಗನಗೌಡ ಕೆ ಅವರು ಸ್ವತಂತ್ರ ಹಗೂ ಸ್ವೇಚ್ಛೆಯ ಬಗ್ಗೆ ವ್ಯತ್ಯಾಸಗಳನ್ನು ಹೇಳಿ ಪ್ರತಿಯೊಬ್ಬರು ದೇಶ ಉನ್ನತಿಗಾಗಿ ಶ್ರಮಿಸಬೇಕೆಂದು ಹೇಳಿದರು.ವರಮಾನ ತೆರಿಗೆ ಅಧಿಕಾರಿಗಳಾದ ನಿಶಾಂತ ಅಗರವಾಲ್, ಮಲ್ಲಿಕಾರ್ಜುನ, ಪಾಂಡುರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಬಳ್ಳಾರಿ ಶಾಖೆಯ ಅಧ್ಯಕ್ಷರು ಸಿಎ ನಾಗನಗೌಡ ಕೆ. ಉಪಾಧ್ಯಕ್ಷರು ಸಿಎ ವೆಂಕಟನಾರಾಯಣ ಚಲುವಾದ್, ಕಾರ್ಯದರ್ಶಿ ಸಿಎ ಪುರುಷೋತ್ತಮ ರೆಡ್ಡಿ ಸದಸ್ಯರು ಸಿಎ ಗಜರಾಜ್ ಡಿ. ಸಿಎ ವಿಶ್ವನಾಥ ಆಚಾರಿ ಹಾಗೂ ಇತರ ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.