ಲೆಕ್ಕ ಪರಿಶೋಧಕರ ವೃತ್ತಿಯಲ್ಲಿ ಅಧ್ಯಯನ ಮಾಡಲು ಮುಂದಾಗಬೇಕು :ಸಾಗರ ಈಶ್ವರ ಖಂಡ್ರೆ

ಭಾಲ್ಕಿ:ಜ.11: ಗಡಿ ಭಾಗದ ಬೀದರ ಜಿಲ್ಲೆಯ ಬಡ ವಿದ್ಯಾರ್ಥಿಗಳು ಲೆಕ್ಕ ಪರಿಶೋಧಕ ವಿಷಯದಲ್ಲಿ ಅಧ್ಯಯನ ಮಾಡಿ ಜಿಲ್ಲೆಗೆ ಒಳ್ಳೆಯ ಹೆಸರು ತರಲು ಮುಂದಾಗಬೇಕೆಂದು ಶಾಂತಿವರ್ಧಕ ಸಂಸ್ಥೆಯ ಕಾರ್ಯದರ್ಶಿಗಳಾದ ಸಾಗರ ಈಶ್ವರ ಖಂಡ್ರೆ ನುಡಿದರು. ಅವರು ಭಾಲ್ಕಿ ಪಟ್ಟಣದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ನಡೆಯುತ್ತಿರುವ ಶ್ರೀ ಚೆನ್ನಬಸವೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಲೆಕ್ಕ ಪರಿಶೋಧಕರ ವೃತ್ತಿಯ ತರಗತಿಗಳ ಉದ್ಘಾಟನೆಯನ್ನು ನೆರವೆರಿಸಿ ಮಾತ ನಾಡಿದ ಅವರು ಕಠಿಣ ಪರಿಶ್ರಮ ಹಾಗೂ ಸತತ ಪ್ರಯತ್ನದ ಮೂಲಕ ತಾವು ಲೆಕ್ಕ ಪರಿಶೋಧಕರಾಗಬಹುದು ಎಂದು ತಿಳಿಸಿ, ಬಡತನವು ಶಿಕ್ಷಣಕ್ಕೆ ಎಂದು ಅಡ್ಡಿಯಾಗದು, ಹಾಗೂ ವಿಶೇಷವಾಗಿ ಮಹಿಳೆಯರಿಗೆ ಈ ಯುಗದಲ್ಲಿ ಸಾಧನೆ ಮಾಡಲಿಕ್ಕೆ ಯಾವುದೆ ಅಡ್ಡಿ ಆತಂಕಗಳು ಇಲ್ಲ ಎಂದು ತಿಳಿಸಿ ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಅನೀಲಕುಮಾರ ಡಿಗ್ಗೆ ಅವರು ಲೆಕ್ಕ ಪರಿಶೋಧಕರ ತರಬೇತಿಗಾಗಿ ತರಗತಿಗಳ ವಿಷಯದ ಬಗ್ಗೆ ಪರಿಪೂರ್ಣ ಮಾಹಿತಿ ನೀಡಿದರು.

 ವಿದ್ಯಾರ್ಥಿಗಳಾದ ಶ್ರಧ್ಧಾ, ವೈಷ್ಣವಿ, ಜೈಶ್ರೀ  ಇವರೆಲ್ಲರು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯು ನಮಗೆಲ್ಲ ಲೆಕ್ಕ ಪರಿಶೋಧಕ ವೃತ್ತಿಯ ವಿಶೇಷ ತರಬೇತಿಯನ್ನು ಉಚಿತವಾಗಿ ಅನುವು ಮಾಡಿಕೊಟ್ಟಿದ್ದು, ನಮ್ಮ ಬಡ ಮಕ್ಕಳಿಗೆ ಹೆಮ್ಮಯಾಗಿದೆ. ಈ ಶಿಕ್ಷಣ ಸಂಸ್ಥೆಯವರು ನಿರ್ವಹಿಸಲಾದ ಚಾರ್ಟೆಡ ಅಕೌಂಟೆಂಟ ನಮ್ಮ ಕನಸು ನೆನಸಾಗುವ ಕಾಲ ಬಂದಿದೆ ಎಂದು ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಚೆನ್ನಬಸವೇಶ್ವರ ಪದವಿ ಮಹಾವಿದ್ಯಾಲಯ ಪ್ರಾಂಶುಪಾಲರಾದ ಶ್ರೀ ಸತ್ಯವಾನ ವೈರಾಗೆ ಅವರು ಸಂಸ್ಥೆಯು ನೀಡಿದ ಅವಕಾಶÀವನ್ನು ವಿದ್ಯಾರ್ಥಿಗಳು ಸುದುಪಯೋಗ ಪಡಿಸಿಕೊಳ್ಳಲು ಸಲಹೆ ನೀಡಿದರು. ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀ ಗುರು ಕುಡ್ತೆಯವರು ಕಾಂiÀರ್iಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದರು. ಸಮಾರಂಭದಲ್ಲಿ ಪ್ರೋ ರಾಬರ್ಟ, ಡಾ:ಶಿವಕುಮಾರ, ಪರಮೇಶ್ವರ ಪಾಟೀಲ, ವಿಜಯಕುಮಾರ ವಾರದ, ಅಂಜಲಿ ಕೋಟೆ ಭಾಗವಹಿಸಿದರು. ಕು: ವಾಸಂತಿ ಸ್ವಾಗತ ಗೀತೆ ಹಾಡಿದರು, ಕು: ವಸುಂಧರಾ ಪಾಟೀಲ ನಿರೂಪಿಸಿದರು. ಅಕ್ಕಮಹಾದೇವಿ ಕಾಲೇಜಿನ ಪ್ರಾಂಶುಪಾಲರಾದ ಅಂಕುಶ ಢೋಲೆ ಎಲ್ಲರನ್ನು ಸ್ವಾಗತಿಸಿದರು. ಮತ್ತು ಸಿ. ಬಿ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೋಹನ ರಡ್ಡಿ ವಂದಿಸಿದರು.