ಲೆಕ್ಕ ಪರಿಶೋಧಕರಿಗೆ ಕಾರ್ಯಾಗಾರ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.26: 31 ಮಾರ್ಚ್ 2023ಕ್ಕೆ ಕೊನೆಗೊಳ್ಳುವ 2022-23ನೇ ಸಾಲಿನ ಬ್ಯಾಂಕ್ ಶಾಖೆಗಳ ಲೆಕ್ಕಪರಿಶೋದನೆ ಕಾರ್ಯವು ಬರುವ ಎಪ್ರೆಲ್ ತಿಂಗಳಲ್ಲಿ ನಡೆಯಲಿದೆ. ಲೆಕ್ಕ ಪರಿಶೋದನೆಯಯನ್ನು ಚಾರ್ಟರ್ಡ್ ಅಕೌಂಟೆಂಟ್ ಗಳು ನೆರವೇರಿಸಲಿದ್ದಾರೆ. ಈ ಕುರಿತು ಸದಸ್ಯರಿಗೆ (ಚಾರ್ಟರ್ಡ್ ಅಕೌಂಟೆಂಟ್) ಹೆಚ್ಚಿನ ಮಾಹಿತಿ ಒದಗಿಸಲು ಒಂದು ದಿನದ ಕಾರ್ಯಗಾರವನ್ನು ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯ ಬಳ್ಳಾರಿ ಶಾಖೆಯ ಐಸಿಎಐ ಭವನದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರವನ್ನು ಡಿ. ಮೋಹನ್ ಕುಮಾರ್, ಎಜಿಎಮ್, ರೀಜಿನಲ್ ಹೆಡ್, ಕೆನರಾ ಬ್ಯಾಂಕ್, ಬಳ್ಳಾರಿ ಹಾಗೂ ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ  ಅಧ್ಯಕ್ಷರಾದ ಸಿಎ ಪನ್ನರಾಜ್  ಇವರು ಉದ್ಘಾಟಿಸಿದರು.
ಡಿ. ಮೋಹನ್ ಕುಮಾರ್ ಅವರು ಮಾತನಾಡಿ ಬ್ಯಾಂಕ್ ಶಾಖೆಗಳ ಲೆಕ್ಕಪರಿಶೋದನೆಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಗಳ ಪಾತ್ರದ ಮಹತ್ವದ ಬಗ್ಗೆ ವಿಶ್ಲೇಶಿಸಿ ಅಭಿನಂದದಿಸಿದರು ಹಾಗೂ ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರು ಒತ್ತಡದ ನಡುವೆಯು ಲೆಕ್ಕ ಪರಿಶೋದನೆಗೆ ಸಂಪೂರ್ಣ ಸಹಕಾರ ನೀಡುವರು ಎಂದರು.
ಸಿಎ ಪನ್ನರಾಜ್ ಅವರು ಮಾತನಾಡಿ ಪ್ರಾಂತೀಯ ಕಚೇರಿಯಲ್ಲಿ ಶಾಖೆಯ ಕಾರ್ಯಚಟುವಟಿಕೆಗಳ ಬಗ್ಗೆ ಕಾರ್ಯಯೋಜನೆಗಳನ್ನು ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಸಿಎ. ಎ.ವಿ.ಪಾಲ್, ಸಿಎ. ವೀರಬಸನ್ನ ಗೌಡ .ಎಸ್, ಅವರು ಮಾತನಾಡಿದರು.
ಶಾಖೆಯ ಅಧ್ಯಕ್ಷರು ಅಂ ನಾಗನಗೌಡ .ಕೆ ಸ್ವಾಗತಿಸಿದರು ಹಾಗೂ ಕಾರ್ಯದರ್ಶಿ ಅಂ ಪುರುಷೋತ್ತಮ ರೆಡ್ಡಿ ಕೆ ಅವರು ನಿರೂಪಣೆ ಹಾಗು ವಂದನಾರ್ಪಣೆ ಮಾಡಿದರು.
ಈ ಕಾರ್ಯಕ್ರಮಕ್ಕೆ ಉಪಾಧ್ಯಕ್ಷರು ಅಂ ಕೆ. ವೆಂಕಟನಾರಾಯಣ ಚಲುವಾದ್ ಖಜಾಂಚಿ ಅಂ ಕೆ.ವಿ. ಸ್ವಪ್ನ ಪ್ರಿಯ, ಅಂ ಗಜರಾಜ್ .ಡಿ ಮತ್ತು ಶಾಖೆಯ ಸದಸ್ಯರು ಅಂ ಕೊಮಲ್ ಜೈನ್ ಹಾಗೂ ಇತರ ಸದಸ್ಯರು ಪಾಲ್ಗೊಂಡಿದರು.