ಲೆಕ್ಕಿಹಾಳ ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹ

ಲಿಂಗಸೂಗೂರು,ಜು.೨೫- ತಾಲೂಕಿನ ಲೆಕ್ಕಿಹಾಳ ಗ್ರಾಮಕ್ಕೆ ಕಾಲೇಜು ಸಮಯಕ್ಕೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ಲೆಕ್ಕಿಹಾಳ ಗ್ರಾಮದ ವಿದ್ಯಾರ್ಥಿಗಳು ಬಸ್ ಡಿಪೋ ವ್ಯವಸ್ಥಾಕ ವೈ ಎನ್ ಹೊನಸೂರೆ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ದಿನನಿತ್ಯ ೬ ಕೀ. ಮೀ ಗ್ರಾಮದಿಂದ ನಡೆದುಕೊಂಡು ಬಂದು ಬಸ್ ಹಿಡಿಯಬೇಕು. ಇದರಿಂದ ಕಾಲೇಜು ಹೋಗಲು ಆಗುತ್ತಿಲ್ಲ. ಡಿಪೋ ಅಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದರೂ ಸ್ಪಂದನೆ ಸಿಕ್ಕಿಲ್ಲ. ಬೆಳಗ್ಗೆ ೯ ಗಂಟೆಗೆ ಲೆಕ್ಕಿಹಾಳ ಗ್ರಾಮದಿಂದ ಲಿಂಗಸ್ಗೂರು ಹಾಗೂ ಸಾಯಂಕಾಲ ಲಿಂಗಸ್ಗೂರುನಿಂದ ಲೆಕ್ಕಿಹಾಳಕ್ಕೆ ೪:೩೦ ಕ್ಕೆ ಬಸ್ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ತಾಲೂಕು ಮುಖಂಡರಾದ ವಿಶ್ವ ಅಂಗಡಿ, ಮಲ್ಲಿಕಾರ್ಜುನ್, ಮಂಜುನಾಥ ವಡ್ಡರ, ಸಿದ್ದಪ್ಪ, ವೀರೇಶ್, ಭಾಗ್ಯ, ಕಾವೇರಿ, ಅನಿತಾ, ಸಂಗೀತಾ, ದುರುಗಮ್ಮ, ಅಕ್ಷತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.