’ಲೂಥರ್’ ನ ರಿಮೇಕ್ ಮೂಲಕ ಅಜಯ್ ದೇವಗಣ್ ಕೂಡಾ ಓಟಿಟಿ ಪ್ಲ್ಯಾಟ್ ಫಾರ್ಮ್ ಗೆ ಬರುತ್ತಿದ್ದಾರೆ

ಅಜಯ್ ದೇವಗಣ್ ಇತ್ತೀಚೆಗೆ ತನ್ನ ಅಪ್ ಕಮಿಂಗ್ ಫಿಲ್ಮ್ ’ಗೋಬರ್’ ಇದರ ಘೋಷಣೆಯನ್ನು ಮಾಡಿದ್ದರು . ಈ ನಡುವೆ ಅವರು ತನ್ನ ಮುಂದಿನ ಪ್ರಾಜೆಕ್ಟ್ ಕುರಿತು ತಯಾರಿ ನಡೆಸುತ್ತಿದ್ದಾರೆ .ಶೀಘ್ರವೇ ಅವರು ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಎಂಟ್ರಿ ನೀಡಲಿದ್ದಾರೆ .
ಬಾಲಿವುಡ್ ವರದಿಯ ಪ್ರಕಾರ ಅಜಯ್ ದೇವಗಣ್ ಬ್ರಿಟಿಷ ಶೋ ’ಲೂಥರ್’ ಇದರ ರಿಮೇಕ್ ನಲ್ಲಿ ಅಭಿನಯಿಸಲಿದ್ದಾರೆ. ಲೂಥರ್ ರೀಮೇಕನ್ನು ವೆಬ್ ಸೀರಿಸ್ ನಲ್ಲಿ ವರ್ಗಾಯಿಸಲು ಸಿದ್ದತೆ ನಡೆದಿದೆ.
ಲೂಥರ್ ನ ರೀಮೇಕ್ ಮೂಲಕ ಅಜಯ್ ದೇವಗಣ್ ಓಟಿಟಿ ಪ್ಲಾಟ್ಫಾರ್ಮ್ ಗೆ ತನ್ನ ಎಂಟ್ರಿಯನ್ನು ನೀಡಲಿದ್ದಾರೆ. ಮುಂದಿನ ವಾರದೊಳಗೆ ಮೇಕರ್ಸ್ ತಂಡ ವೆಬ್ ಸೀರಿಸ್ ನ ಘೋಷಣೆಯನ್ನು ಮಾಡಲಿದ್ದಾರೆ.
ಮಾರ್ಚ್ ತಿಂಗಳಲ್ಲಿ ಅಜಯ್ ದೇವಗಣ್ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಮೂಲಕ ಈ ಬಗ್ಗೆ ಒಂದು ಚಿಕ್ಕ ಸೂಚನೆಯನ್ನು ನೀಡಿದ್ದರು.ಲೂಥರ್ ಒಂದು ಸೈಕಾಲಾಜಿಕಲ್ ಕ್ರೈಂ ತ್ರಿಲ್ಲರ್ ಬ್ರಿಟಿಷ್ ಶೋ ಆಗಿದೆ. ಈ ವೆಬ್ ಸೀರೀಸನ್ನು ಬಿಬಿಸಿ ಇಂಡಿಯಾ ಮತ್ತು ಎಪ್ಲಾಜ್ ಎಂಟರ್ಟೈನ್ ಮೆಂಟ್ ಪ್ರೊಡ್ಯೂಸ್ ಮಾಡಲಿದ್ದಾರೆ.ಶೂಟಿಂಗ್ ಸಮಾಪ್ತಿಯ ನಂತರ ಈ ವೆಬ್ ಸೀರೀಸ್ ನ್ನು ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ರಿಲೀಸ್ ಮಾಡಲಾಗುವುದು.

ಬಾಲಿವುಡ್ ನಟ ನಟಿಯರ ನಾನಾ ಕಾರಣಗಳಿಗೆ ಕೈ ತಪ್ಪಿದ ಫಿಲ್ಮ್ ಗಳು

’ಪ್ಯಾರ್ ಕಾ ಪಂಚನಾಮ’ ನಟ ಕಾರ್ತಿಕ್ ಆರ್ಯನ್ ರನ್ನು ಇತ್ತೀಚೆಗೆ ಧರ್ಮಾ ಪ್ರೋಡಕ್ಷನ್ ಫಿಲ್ಮ್ ’ದೋಸ್ತಾನಾ ೨’ ಇದರಿಂದ ಹೊರಗಿಡಲಾಗಿದೆ. ಕಾರ್ತಿಕ್ ರನ್ನು ಈ ಫಿಲ್ಮ್ ನಿಂದ ಹೊರಗಿಡಲು ಕಾರಣವೇನೆಂದರೆ ಅವರ ಅನ್ ಪ್ರೊಫೆಷನಲ್ ವರ್ತನೆಗಳು.
ಬಾಲಿವುಡ್ ಮೂಲಗಳು ತಿಳಿಸಿದಂತೆ ಕಾರ್ತಿಕ್ ಸ್ಕ್ರಿಪ್ಟ್ ನಲ್ಲಿಯೂ ಖುಷಿಯಾಗಿಲ್ಲವಂತೆ. ಹಾಗಾಗಿ ಮತ್ತೆ ಮತ್ತೆ ನಿರ್ದೇಶಕ ಕೊಲಿನ್ ಅವರ ಬಳಿ ಈ ಬಗ್ಗೆ ನಿರಂತರ ಚರ್ಚೆ ಮಾಡುತ್ತಲೇ ಇದ್ದರಂತೆ. ಇದಲ್ಲದೆ ಈ ನಟ ಸರಿಯಾದ ತಾರೀಖನ್ನೂ ನೀಡುತ್ತಿಲ್ಲವಂತೆ. ಇದರಿಂದ ಫಿಲ್ಮ್ ಶೂಟಿಂಗ್ ನಿಂತುಬಿಟ್ಟಿತ್ತು. ಕೊನೆಗೆ ಮೇಕರ್ಸ್ ಕಾರ್ತಿಕ್ ರನ್ನು ಹೊರಗಿಡಲು ನಿಶ್ಚಯಿಸಿದರು ಹಾಗೂ ಬೇರೆ ನಟರ ಜೊತೆ ಶೂಟಿಂಗ್ ಮುಂದುವರಿಸಲು ನಿರ್ಧರಿಸಿದರು.
ಕಾರ್ತಿಕ್ ಆರ್ಯನ್ ಅವರಿಗಿಂತ ಮೊದಲೂ ಕೂಡ ಅನೇಕ ನಟ-ನಟಿಯರನ್ನು ಅವರವರ ಅನ್ ಪ್ರೊಫೆಷನಲ್ ವ್ಯವಹಾರದಿಂದ ದೊಡ್ಡ ದೊಡ್ಡ ಫಿಲ್ಮ್ ಗಳಿಂದ ಅವರೆಲ್ಲರನ್ನು ಹೊರಗಿಟ್ಟ ಪ್ರಸಂಗಗಳು ಹಿಂದೆಯೂ ನಡೆದಿವೆ.
ಇವರಲ್ಲಿ ಕೆಲವು ಮುಖ್ಯ ನಟ-ನಟಿಯರು ಯಾರು? ಎಂದು ತಿಳಿಯೋಣ.

ಅಭಿಷೇಕ್ ಬಚ್ಚನ್: ಕಭೀ ಖುಷಿ ಕಭೀ ಗಮ್:

ಮಲ್ಟಿಸ್ಟಾರರ್ ಬ್ಲಾಕ್ಬಸ್ಟರ್ ಹಿಟ್ ಫಿಲ್ಮ್ ಕಭೀ ಖುಷಿ ಕಭೀ ಗಮ್ ಇದರಲ್ಲಿ ಹೃತಿಕ್ ರೋಷನ್ ರು ರೋಹನ್ ಪಾತ್ರವನ್ನು ನಿರ್ವಹಿಸಿದ್ದರು. ಅತ್ತ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರು ಈ ಪಾತ್ರವನ್ನು ಅಭಿಷೇಕ್ ಮಾಡಬೇಕೆಂದು ಇಚ್ಚಿಸಿದ್ದರು. ಆದರೆ ಕಹೋ ನಾ ಪ್ಯಾರ್ ಹೈ ಫಿಲ್ಮ್ ನ ಪ್ರಸಿದ್ಧಿಯ ನಂತರ ಕರಣ್ ಜೋಹರ್ ಅವರು ಹೃತಿಕ್ ರನ್ನು ಮೊದಲೇ ಫೈನಲ್ ಮಾಡಿದ್ದರು. ಹೀಗಾಗಿ ಅಭಿಷೇಕ್ ಬಚ್ಚನ್ ಅವರಿಗೆ ಈ ಫಿಲ್ಮ್ ನಲ್ಲಿ ಅವಕಾಶ ಸಿಗಲಿಲ್ಲ ಈ ಫಿಲ್ಮ್ ನಲ್ಲಿ ಅಭಿಷೇಕ್ ರ ಒಂದು ದೃಶ್ಯವೂ ಇತ್ತು. ನಂತರ ಅದನ್ನೂ ಡಿಲೀಟ್ ಮಾಡಲಾಯಿತು.

ಟ್ವಿಂಕಲ್ ಖನ್ನಾ- ಕುಛ್ ಕುಛ್ ಹೋತಾ ಹೈ:

ಪಾಪುಲರ್ ಚಾಟ್ ಶೋ ಕಾಫಿ ವಿದ್ ಕರಣ್ ಇದರಲ್ಲಿ ಟ್ವಿಂಕಲ್ ಖನ್ನಾ ಹೇಳಿದಂತೆ ಕರಣ್ ಜೋಹರ್ ಆ ಫಿಲ್ಮ್ ನಲ್ಲಿ ಟೀನಾ ಪಾತ್ರವನ್ನು ತನ್ನನ್ನೇ ದೃಷ್ಟಿಯಲ್ಲಿರಿಸಿಯೇ ಬರೆದಿದ್ದರು. ಆದರೆ ಸ್ಕ್ರಿಪ್ಟ್ ತಯಾರು ಆದನಂತರ ಟ್ವಿಂಕಲ್ ಗೆ ಈ ಪಾತ್ರ ಇಷ್ಟವಾಗಲಿಲ್ಲವಂತೆ. ಮತ್ತು ಫಿಲ್ಮನ್ನು ತ್ಯಜಿಸಲು ನಿರ್ಧರಿಸಿದರು.
ಅನಂತರ ಈ ಫಿಲ್ಮ್ ನಲ್ಲಿ ಆ ಪಾತ್ರವನ್ನು ರಾಣಿ ಮುಖರ್ಜಿ ಅವರಿಗೆ ನೀಡಲಾಯಿತು. ವಿಶೇಷ ಅಂದರೆ ಈ ಫಿಲ್ಮ್ ನಲ್ಲಿ ಮೊದಲ ಬಾರಿಗೆ ರಾಣಿ ಮುಖರ್ಜಿ ಅವರ ನಿಜವಾದ ಧ್ವನಿಯನ್ನು ಬಳಸಲಾಗಿದೆ.

ಕಂಗನಾ ರನಾವತ್- ದ ಡರ್ಟಿ ಪಿಕ್ಚರ್:

ವಿದ್ಯಾಬಾಲನ್ ಅಭಿನಯದ ದ ಡರ್ಟಿಪಿಕ್ಚರ್ ಸಿಲ್ಕ್ ಸ್ಮಿತಾ ಅವರ ಬದುಕಿನ ಆಧಾರಿತವಾಗಿದ್ದು ಈ ಪಾತ್ರಕ್ಕೆ ಮೊದಲು ಆಫರ್ ನೀಡಿದ್ದು ಕಂಗನಾ ರನಾವತ್ ಅವರಿಗೆ. ಆದರೆ ಕಂಗನಾ ರನಾವತ್ ಇದನ್ನು ನಿರಾಕರಿಸಿದರು. ಆನಂತರ ವಿದ್ಯಾಬಾಲನ್ ರನ್ನು ಕೇಳಲಾಯಿತು .ಫಿಲ್ಮ್ ನಲ್ಲಿ ವಿದ್ಯಾಬಾಲನ್ ತನ್ನ ಜಾದೂ ಕಾಣಿಸಿದ್ದರು. ಕಂಗಾನ ಅನಂತರ ಈ ಫಿಲ್ಮ್ ನ ವಿದ್ಯಾಬಾಲನ್ ರ ಪಾತ್ರಕ್ಕೆ ಮೆಚ್ಚುಗೆ ಕೂಡ ಸೂಚಿಸಿದ್ದರು.

ಕರೀನಾ ಕಪೂರ್- ಕಹೋ ನಾ ಪ್ಯಾರ್ ಹೈ:

ರಿಫ್ಯೂಜಿ ಫಿಲ್ಮ್ ಗಿಂತ ಮೊದಲು ಕರೀನಾ ಕಪೂರ್ ಖಾನ್ ೨೦೦೦ದಲ್ಲಿ ಫಿಲ್ಮ್ ಕಹೋ ನ ಪ್ಯಾರ್ ಹೈ ನಿಂದ ಬಾಲಿವುಡ್ ಗೆ ಎಂಟ್ರಿ ಆಗುವವರಿದ್ದರು. ಕರೀನಾ ಫಿಲ್ಮ್ ನ ಶೂಟಿಂಗ್ ಕೂಡಾ ಆರಂಭಿಸಿದ್ದರು. ಆದರೆ ಅಲ್ಲಿ ಹೃತಿಕ್ ರೋಷನ್ ಪಾತ್ರ ವಿಜ್ರಂಭಿಸುವ ಕಾರಣ ಭಯದಲ್ಲಿ ಕರೀನಾ ನಂತರ ಫಿಲ್ಮನ್ನು ತ್ಯಜಿಸಿದರು. ಕರೀನಾ ಅವರ ಒಂದು ದೃಶ್ಯ ಫಿಲ್ಮ್ನಲ್ಲಿ ಈಗಲೂ ಇದೆ. ತನ್ನ ಕ್ಯಾರಿಯರ್ ನ ಮೊದಲ ಶಾಟ್ ಈ ಈ ಫಿಲ್ಮ್ ನಲ್ಲಿ ನೀಡಿದ್ದಾಗಿ ಕರೀನಾ ಹೇಳಿದ್ದಾರೆ .ಕರೀನಾ ಈ ಫಿಲ್ಮನ್ನು ರಿಜೆಕ್ಟ್ ಮಾಡಿದ ನಂತರ ಅಮೀಷಾ ಪಟೇಲ್ ಗೆ ಈ ಪಾತ್ರ ಸಿಕ್ಕಿತ್ತು.

ಕರೀನಾ ಕಪೂರ್- ಬ್ಲ್ಯಾಕ್:

೨೦೦೫ರಲ್ಲಿ ಬಿಡುಗಡೆಯಾದ ಬ್ಲ್ಯಾಕ್ ಫಿಲ್ಮ್ ನಲ್ಲಿಯೂ ಕರೀನಾ ಕಪೂರ್ ಅಮಿತಾಭ್ ಬಚ್ಚನ್ ಅವರ ಜೊತೆಗೆ ಕಾಣಿಸುವವರಿದ್ದರು. ಕರೀನಾ ಸಂಜಯಲೀಲಾ ಬನ್ಸಾಲಿ ಅವರ ಮೊದಲ ಇಷ್ಟದ ನಟಿ ಆಗಿದ್ದರು. ಆದರೆ ಅಮಿತಾಭ್ ಅವರಿಗೆ ಈ ವಿಷಯ ತಿಳಿಯುತ್ತಲೇ ಅವರು ಈ ಫಿಲ್ಮನ್ನು ನಿರಾಕರಿಸಿದರು.
ನಂತರ ಬನ್ಸಾಲಿ ಯವರು ಕರೀನಾ ಕಪೂರ್ ಜಾಗದಲ್ಲಿ ರಾಣಿ ಮುಖರ್ಜಿ ಅವರ ಸಹಿ ಮಾಡಿಸಿದರು. ಕರಿಷ್ಮಾ ಕಪೂರ್ ಮತ್ತು ಅಭಿಷೇಕ್ ಬಚ್ಚನ್ ಅವರ ವಿವಾಹ ನಿಶ್ಚಿತಾರ್ಥ ಮುರಿದು ಬಿದ್ದ ನಂತರ ಬಚ್ಚನ್ ಮತ್ತು ಕಪೂರ್ ಕುಟುಂಬದ ನಡುವೆ ವಿರಸ ಕಾಣಿಸಿತ್ತು. ಹಾಗಾಗಿ ಕರೀನಾ ಕಪೂರ್ ಕೈಯಿಂದ ಬ್ಲಾಕ್ಬಸ್ಟರ್ ಫಿಲ್ಮ್ ’ಬ್ಲ್ಯಾಕ್’ ಕೈತಪ್ಪಿತು.

ರಣವೀರ್ ಸಿಂಗ್- ಬಾರ್ ಬಾರ್ ದೇಖೋ:

ಸಿದ್ಧಾರ್ಥ ಮಲ್ಹೋತ್ರಾ ಅವರಿಗಿಂತ ಮೊದಲು ಬಾರ್ ಬಾರ್ ದೇಖೋ ಇದರಲ್ಲಿ ರಣವೀರ್ ಸಿಂಗ್ ಗೆ ಆಫರ್ ಬಂದಿತ್ತು. ಆದರೆ ಕತ್ರಿನಾ ಕೈಫ್ ಕಾರಣ ಈ ಫಿಲ್ಮ್ ನಲ್ಲಿ ಅಭಿನಯಿಸಲು ಅವರು ನಿರಾಕರಿಸಿದರು .
ರಣಬೀರ್ ಕಪೂರ್ ಕಾರಣ ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ಅವರ ನಡುವೆ ಮಾತುಕತೆ ನಿಂತಿತ್ತು .ಇಂತಹ ಸ್ಥಿತಿಯಲ್ಲಿ ರಣವೀರ್ ಸಿಂಗ್ ನನ್ನ ಪ್ರಿಯತಮೆ ದೀಪಿಕಾ ಪಡುಕೋಣೆ ಅವರಿಗಾಗಿ ಈ ಫಿಲ್ಮ್ ತ್ಯಜಿಸಿದರು. ನಂತರ ಈ ಫಿಲ್ಮ್ ಗೆ ಸಿದ್ದಾರ್ಥ್ ಮಲ್ಹೊತ್ರಾ ಸಹಿ ಮಾಡಿದರು.

ಐಶ್ವರ್ಯ ರೈ- ಬಾದ್ ಶಾಹೋ:

ಐಶ್ವರ್ಯ ರೈ ೨೦೧೭ ಬಿಡುಗಡೆಯಾದ ಫಿಲ್ಮ್ ಬಾದ್ ಶಾಹೋ ಗೆ ಸಹಿ ಮಾಡಿದ್ದರು.ಆದರೆ ದಿಲ್ಜೀತ್ ದೊಸಾಂಝಾ ಅವರ ಜಾಗದಲ್ಲಿ ಫಿಲ್ಮ್ ನಲ್ಲಿ ಇಮ್ರಾನ್ ಹಾಶ್ಮಿ ಯವರನ್ನು ಸಹಿ ಮಾಡಿಸಲಾಗಿದೆ ಎಂದು ತಿಳಿಯುತ್ತಲೇ ಐಶ್ವರ್ಯ ಫಿಲ್ಮನ್ನು ತ್ಯಜಿಸಿದರು.
ಕಾಫಿ ವಿದ್ ಕರಣ್ ಚಾಟ್ ಶೋದಲ್ಲಿ ಇಮ್ರಾನ್ ಐಶ್ವರ್ಯ ರೈ ಯನ್ನು ಪ್ಲಾಸ್ಟಿಕ್ ಎಂದಿದ್ದರು. ಇದರಿಂದ ಐಶ್ವರ್ಯ ಬೇಸರಗೊಂಡಿದ್ದರು.. ಒಂದು ಸಂದರ್ಶನದಲ್ಲಿ ಐಶ್ವರ್ಯ ಈ ಕಮೆಂಟ್ ಗೆ “ಅತ್ಯಂತ ಕಳಪೆ ಕಮೆಂಟ್” ಎಂದಿದ್ದರು.