ಲೂಟಿ ಮಾಡಿದವರ ಬೆಂಬಲಿಸಬೇಡಿ: ಟಪಾಲ್ ಗಣೇಶ 


ಸಂಜೆವಾಣಿ ವಾರ್ತೆ  
ಗಂಗಾವತಿ, ಮೇ.04: ಅಕ್ರಮ ಗಣಿಗಾರಿಕೆ ಅರೋಪವಿರುವ ಜನಾರ್ದನ ರಡ್ಡಿಯನ್ನು ಚುನಾವಣೆ ಯಲ್ಲಿ ಬೆಂಬಲಿಸಬೇಡಿ ಎಂದು ಅಕ್ರಮ ಗಣಿಗಾರಿಕೆ ವಿರುದ್ದ ಹೋರಾಟಗಾರ ಟಪಾಲ್ ಗಣೇಶ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು. ಕರ್ನಾಟಕದ ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದು ಇಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ಚುನಾವಣೆ ಯಲ್ಲಿ ಸ್ಪರ್ಧಿಸಿದ್ದಾರೆ. ಜನಾರ್ಧನ ರಡ್ಡಿ ವಿರುದ್ದ ಹಲವಾರು ಪ್ರಕರಣವಿದ್ದು, ಇಂತಹ ವ್ಯಕ್ತಿಯನ್ನು ಬೆಂಬಲಿಸಬೇಡಿ. ಕರ್ನಾಟಕದ ನೆಲ ಜಲವನ್ನು ಲೂಟಿ ಮಾಡಿ ಅಕ್ರಮ ಸಂಪಾದನೆ ಮಾಡಿದ್ದಾರೆ‌. ಇವರ ವಿರುದ್ದ ಹೋರಾಟ ಮಾಡಲಾಗುತ್ತಿದೆ. ಮತದಾರರು ಗಂಗಾವತಿ ನಗರವನ್ನು ಅಭಿವೃದ್ಧಿ ಮಾಡುವ ಸ್ಥಳಿಯ ವ್ಯಕ್ತಿ ಯನ್ನು ಬೆಂಬಲಿಸಿ. ಇವರಿಗೆ ಮತವನ್ನು ಹಾಕಿ ಮೋಸ ಹೋಗಬೇಡಿ. ನಮ್ಮ ಬಳ್ಳಾರಿ ಜಿಲ್ಲೆಯ ನಾಶವಾದಂತೆ ಗಂಗಾವತಿ ನಾಶ ಮಾಡಲು ಅನುಕೂಲ‌ಮಾಡಿಕೊಡಬೇಡಿ ಎಂದು ಮನವಿ ಮಾಡಿದರು.