ಲೂಟಿಗೆ ಸೀಮಿತವಾದ ಜಲಜೀವನ ಮಿಷನ್ ಯೋಜನೆ: ಕಾಂಗ್ರೆಸ್

ಚಿಂಚೋಳಿ,ಮಾ.9- ಲೂಟಿಗೆ ಸೀಮಿತವಾದ ಜಲ ಜೀವನ ಮಿಷನ್ ಯೋಜನೆ. ಕೇಂದ್ರ ಸರ್ಕಾರದ ಮನೆ ಮನೆಗೆ ಕುಡಿಯುವ ನೀರು ತಲುಪಿಸುವ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಚಿಂಚೋಳಿ ಮತಕ್ಷೇತ್ರದ ಹಲವಾರು ಗ್ರಾಮ ಮತ್ತು ತಾಂಡಾಗಳಲ್ಲಿ ಸುಮಾರು 70 ಕೋಟಿ ರೂಪಾಯಿಗಳ ಯೋಜನೆಯನ್ನು ಹಮ್ಮಿಕೊಳ್ಳಲಾಗಿದ್ದು, ಕ್ಷೇತ್ರದ ತುಂಬ ನಡೆದಿರುವ ಕಾಮಗಾರಿಗಳು ಸಂಪೂರ್ಣವಾಗಿ ಕಳಪೆಮಟ್ಟದಾಗಿದ್ದು, ಟೆಂಡರ್ ಒಬ್ಬರ ಹೆಸರಿನಲ್ಲಿ ಇದ್ದರೆ ಕಾಮಗಾರಿ ಐದಾರು ಜನರ ಪಾಲುದಾರಿಕೆಯಲ್ಲಿ ಹಳ್ಳಿಗಳಲ್ಲಿ ಕೆಲಸಗಳು ಮಾಡುತ್ತಿರುವದು, ಇಡೀ ಕಾಮಗಾರಿಯೇ ಹಳ್ಳಹಿಡಿದಿದೆ. ಎಂದು ಕಾಂಗ್ರೆಸ್ ಪಕ್ಷದ ತಾಲೂಕ ವಕ್ತಾರಾದ ಶರಣು ಪಾಟೀಲ ಮೋತಕಪಲ್ಲಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಈ ಕಾಮಗಾರಿಗಳ ಟೆಂಡರ್ ಪಡೆದವರಲ್ಲಿ ಹಲವಾರು ಗುತ್ತಿಗೆದಾರರು ಇಲ್ಲಿಯವರೆಗೂ ಒಂದೇ ಒಂದು ಕಾಮನಗಾರಿ ನಡೆಯುವ ಗ್ರಾಮಗಳಿಗೆ ಭೇಟಿ ಕೊಟ್ಟಿರುವುದಿಲ್ಲ. ಕಾಮಗಾರಿ ಎಲ್ಲಿ ನಡೆಯುತ್ತಿದೆ, ಯಾರು ಮಾಡುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಿಲ್ಲ, ಆದರೆ ಕಾಮಗಾರಿ ಪೂರ್ಣವಾಗಿದೆ ಎಂದು ಗುತ್ತಿಗೆದಾರನ ಖಾತೆಗೆ ದುಡ್ಡು ಮಾತ್ರ ಜಮಾ ಆಗುವಲ್ಲಿ ಯಾವುದೇ ತೊಡಕು ಇಲ್ಲ. ಇದರಲ್ಲಿ ಸರಕಾರಿ ಅಧಿಕಾರಿಗಳು ಮತ್ತು ಜನ್ರತಿನಿಧಿಗಳು ಶಾಮಿಲಾಗಿರುವುದು ಖಚಿತವಾಗಿದೆ.
ಈ ಕುರಿತು ನಾನು ವಯಕ್ತಿಕವಾಗಿ ಚಿಂಚೋಳಿ ಶಾಸಕರಿಗೆ ಮತ್ತು ಕಲಬುರಗಿ ಸಂಸದರಿಗೆ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿಗೆ, ಸಂಭಂದಿಸಿದ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಯಂತರ ಅವರ ಫೆÇೀನಿಗೆ ಧುತ್ತರಗ ಗ್ರಾಮದ ಅರ್ಧ ಅಡಿಯಷ್ಟು ಗುಂಡಿ ತೋಡಿ ಪೈಪ್ ಹಾಕಿರುವ ಫೆÇೀಟೋಗಳನ್ನು ಕಳುಹಿಸಿ ಕಾಮಗಾರಿಯ ಬಗ್ಗೆ ಗಮನ ಹರಿಸಿ ಎಂದು ಕೇಳಿಕೊಂಡರು ಯಾವುದೇ ರೀತಿಯಲ್ಲಿ ಅಧಿಕಾರಿಗಳಾಗಲಿ ಶಾಸಕ ಸಂಸದರಾಗಲಿ ಸ್ಪಂದಿಸಿಲ್ಲ. ಜನ ಪ್ರತಿನಿಧಿಗಳೇ ಕೇಳುತ್ತಿಲ್ಲ ಎಂದ ಮೇಲೆ ಜಲ ಜೀವನ ಮಿಷನ್ ಅಡಿಯಲ್ಲಿ ಕೆಲಸಮಾಡುವ ದಪ್ಪ ಚರ್ಮದ ಸರಕಾರಿ ಅಧಿಕಾರಿಗಳು ನಮ್ಮನು ಕೇಳುವವರು ಯಾರು ಇಲ್ಲ ಎನ್ನುವ ಹಾಗೆ ತಮ್ಮಿಚ್ಛೆಯಂತೆ ಶಾಸಕ, ಸಂಸದರ ಹಿಂಬಾಲಕರೊಂದಿಗೆ ಸೇರಿ ಮನಸೋ ಇಚ್ಛೆ ಲೂಟಿ ಮಾಡುತ್ತಿದ್ದಾರೆ.
ಹಳ್ಳಿಗಳಲ್ಲಿ ರಸ್ತೆಯ ಮದ್ಧೆ ಎಷ್ಟು ಆಳ ಅಗೆಯಬೇಕೋ ಅಷ್ಟು ಆಳ ಅಗೆಯದೆ ತಮಗೆ ಇಷ್ಟ ಬಂದ ಹಾಗೆ ಅಗೆದು ಪೈಪ್ ಗಳನ್ನು ಹಾಕಿ ತಾರಾತುರಿಯಲ್ಲಿ ಗುಂಡಿಗಳನ್ನು ಕಾಂಕ್ರಿಟ್ ಹಾಕಿ ಮುಚ್ಚದೆ ಮಣ್ಣಿನಿಂದ ಹಾಗೆ ಮುಚ್ಚಿದ್ದಾರೆ ಇದರಿಂದ ಹಳ್ಳಿಗಳಲ್ಲಿ ಮುಖ್ಯ ರಸ್ತೆಗಳು ಹಾಳಾಗಿದ್ದು ಹಳ್ಳಿಗಳ ಜನತೆ ಹಿಡಿ ಶಾಪ ಹಾಕುತ್ತಿದ್ದಾರೆ.
ಹಲವಾರು ಜನ ದ್ವಿಚಕ್ರ ಸವಾರರು ಬಿದ್ದು ಕೈ ಕಾಲು ಮುರಿದುಕೊಂಡು ಹಿಡಿಶಾಪ ಹಾಕುತ್ತಿದ್ದಾರೆ. ಗುಣಮಟ್ಟದ ಪೈಪ್ ಅಳವಡಿಸುತ್ತಿಲ್ಲ, ಕಳಪೆಮಟ್ಟದ ಮೀಟರ್, ಒಂದು ಮನೆಯ ಮುಂದೆ ಮೂರರಿಂದ ನಾಲಕ್ಕು ನಲ್ಲಿಗಳು ಹೀಗೆ ಸಾಕಷ್ಟು ಕಳಪೆ ಕಾಮಗಾರಿ ಚಿಂಚೋಳಿ ಮತಕ್ಷೇತ್ರದಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದು ಎಲ್ಲರೂ ಸೇರಿ ಹಾಡು ಹಗಲೇ ಲೂಟಿಯಲ್ಲಿ ತೊಡಗಿರುವುದು ಶೋಚನೀಯ, ಇಂತಹ ಯೋಜನೆಯ ಅದರ ಮೂಲ ಉದ್ದೇಶ ಅರಿಯದ ಇಲಾಖೆ ಹಾಗೂ ಶಾಸಕರ ಜಾಣಮೌನ ಕ್ಷೇತ್ರದ ಮತದಾರರು ಗಮನಿಸುತ್ತಿದ್ದಾರೆ.
ಮುಂಬರುವ ದಿನಗಳಲ್ಲಿ ತಿಂದಿದ್ದು ಕಾರಲೇಬೇಕು ಎನ್ನುನ ಕಟುಸತ್ಯದ ಪಾಠ ಕ್ಷೇತ್ರದ ಜನತೆ ಕಲಿಸುತ್ತಾರೆ ಎನ್ನುವ ಅರಿವು ಇರಲಿ ಎಂದು ಕಾಂಗ್ರೆಸ್ ಪಕ್ಷದ ತಾಲೂಕ ವಕ್ತಾರಾದ ಶರಣು ಪಾಟೀಲ ಮೋತಕಪಲ್ಲಿ, ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.