ಲುಂಬಿನಿ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜಿನಿಂದ ಎನ್ನೆಸ್ಸೆಸ್ ಶಿಬಿರ

ದಾವಣಗೆರೆ: ನಗರದ ಲುಂಬಿನಿ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜು ವತಿಯಿಂದ ಬಾತಿ ಬಳಿಯ ನೀಲಾನಹಳ್ಳಿಯಲ್ಲಿ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ರಾಷ್ಟ್ರೀಯ ಸ್ವಯಂ ಸೇವಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.ವಿದ್ಯಾರ್ಥಿಗಳು ಸರ್ಕಾರಿ ಶಾಲಾ ಅವರಣ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತ ಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸುವ ಮೂಲಕ ಜಾಗೃತಿ ಮೂಡಿಸಿದರು. ಗಿಡಗಳನ್ನು ನೆಡುವ ಮೂಲಕ ಇ. ಓ. ಅಧಿಕಾರಿ ಆನಂದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇಳೆ ಮಹಿಳಾ ಮತ್ತು ಮಕ್ಕಳ ಶೋಷಣೆ ಕುರಿತು ಉಪನ್ಯಾಸ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ. ಪಿ. ಕೆಂಚಪ್ಪನವರು ಹಾಗೂ ಮುಖ್ಯ ಅತಿಥಿಗಳಾಗಿ ಪಿ.ಡಿ.ಓ. ವಿರೂಪಾಕ್ಷಪ್ಪನವರು ಮತ್ತು ಗ್ರಾಮ ಪಂಚಾಯಿತಿ ಸದಸ್ಯ ಜಿ. ಎಂ. ನಾಗರಾಜ್, ಸೀತಾ, ಎನ್. ಎಂ. ರಮೇಶ್, ಅತಿಥಿಗಳಾಗಿ ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕರಾದ ಜಿ.ವಿ. ಗಂಗಾಧರ್, ಸಂಯೋಜಕ ಕೆ. ಚನ್ನಪ್ಪ ಹಾಗೂ ಜಯಶೀಲ ರೆಡ್ಡಿ, ಯು. ಸುನೀಲ್, ಪೂಜಾ, ರಂಜಿತಾ, ಮನೋಜ್‌, ಸಂಗೀತ, ಸಿಹೆಚ್ಓ ಅಮೃತ ಇವರು ಸಾಂಕ್ರಾಮಿಕ ರೋಗಗಳ ಕುರಿತು ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಿದರು.