ಲೀಡಕರ್ ಕಾಲೋನಿಯಲ್ಲಿ 2 ಕೋಟಿ ವೆಚ್ಚದ ಕಾಮಗಾರಿಗೆ ಶಾಸಕ ಕುಮಠಳ್ಳಿ ಭೂಮಿ ಪೂಜೆ

ಅಥಣಿ :ಮಾ.4: ಪಟ್ಟಣದಲ್ಲಿ ಕೊಳಗೇರಿ ನಿವಾಸಿಗರಿಗೆ ಶಾಶ್ವತ ಸೂರಿನ ವ್ಯವಸ್ಥೆಯನ್ನು ಈಗಾಗಲೇ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಮಾಡಲಾಗಿದ್ದು ಈಗಾಗಲೇ ಹಲವಾರು ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ, ಆ ಮನೆಗಳ ನಿರ್ಮಾಣ ಕಾಮಗಾರಿಯಲ್ಲಿ ಗುಣಮಟ್ಟತೆ ಕಾಯ್ದುಕೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಮಹೇಶ ಕುಮಠಳ್ಳಿ ಸೂಚನೆ ನೀಡಿದರು.

ಅವರು ಅಥಣಿ ಪುರಸಭೆ ವ್ಯಾಪ್ತಿಯ ಲಿಡ್ಕರ್ ಕಾಲೋನಿಯಲ್ಲಿ ಡಾ. ಬಾಬು ಜಗಜೀವನರಾಮ ಅವರ ಪ್ರತಿಮೆಗೆ ಪುಷ್ಪ ಮಾಲೆ ಹಾಕಿ ನಂತರ ಸುಮಾರು ಎರಡು ಕೋಟಿ ವೆಚ್ಚದಲ್ಲಿ ಸಿ ಸಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಿ ಮಾತನಾಡುತ್ತಾ ಲೀಡಕರ್ ಕಾಲೋನಿಯಲ್ಲಿ ಸಾಕಷ್ಟು ಅನುದಾನವನ್ನು ತಂದು ವಿವಿಧ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು ಮುಂದೆ ಇನ್ನಷ್ಟು ಅನುದಾನ ಬಿಡುಗಡೆಗೊಳಿಸಿ ಮಾದರಿ, ಸ್ವಚ್ಚ ಹಾಗೂ ಸುಂದರ ಕ್ಷೇತ್ರವನ್ನಾಗಿಸುವುದೇ ನನ್ನ ಗುರಿ, ಅಥಣಿ ಮತಕ್ಷೇತ್ರದಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಅನುದಾನವನ್ನು ತಂದು ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಹಾಗೂ ಮತಕ್ಷೇತ್ರದ ಬಹು ಬೇಡಿಕೆಯ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶೀಘ್ರ ಶಂಕು ಸ್ಥಾಪನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಗುತ್ತಿಗೆದಾರ ರಾಜು ಆಲಬಾಳ, ಮುಖಂಡರಾದ ಡಾ ಅನೀಲ ಸೌದಾಗರ, ಡಾ ರವಿ ಸಂಕ, ಶಶಿ ಸಾಳವೆ, ಸಿದ್ದು ಪಾಟೀಲ, ರಮೇಶ ಪವಾರ, ವಿಲೀನರಾಜ ಯಳಮಲ್ಲೆ, ಈಶ್ವರ ಗಡದೆ, ಶೇಖರ ಸೌದಾಗರ, ಶಂಕರ ಶಿಂಧೆ, ಸದಾಶಿವ ಶಿಕ್ರೆ, ಬಸವರಾಜ ಹಳ್ಳದಮಳ, ಈರಣ್ಣ ದಡ್ಡಿ, ವಿಠ್ಠಲ ಕಾಂಬಳೆ, ಸುಂದರ ಸೌದಾಗರ, ವಿನಯಗೌಡ ಪಾಟೀಲ, ಸಿದ್ದು ಮಾಳಿ ಸೇರಿದಂತೆ ಇತರರಿದ್ದರು.