
(ಸಂಜೆವಾಣಿ ಪ್ರತಿನಿಧಿಯಿಂದ)ಬಳ್ಳಾರಿ, ಅ.22: ನಗರ ಪಾಲಿಕೆಯಿಂದ ಲೀಜ್ ನೀಡಲಾಗಿದ್ದ ಅನೇಕ ಕಟ್ಟಡಗಳ ಅವಧಿ ಮುಗಿದಿದ್ದು. ಅಂತಹವುಗಳನ್ನು ಪಾಲಿಕೆಗೆ ಹಿಂದಕ್ಕೆ ಪಡೆಯಲು ತೀರ್ಮಾನಿಸಿತು.ಜಿಪಂ ನಜೀರ್ ಸಭಾಂಗಣದಲ್ಲಿ ಇಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯ್ತು.ಹಳೇ ನಗರಸಭೆ ಕಟ್ಟಡದ ಹಿಂಭಾಗದ ಕನಕದುರ್ಗಾ ಹೊಟೇಲ್ ಸೇರಿದಂತೆ ಎಂಟು ಕಟ್ಟಡಗಳನ್ನು ಭೂ ಬಾಡಿಗೆ ಆಧಾರದ ಮೇಲೆ ಲೀಜ್ ನೀಡಿತ್ತು ಈಗ ಅವಧಿ ಮುಗಿದಿದ್ದು ಅವನ್ನು ಖಾಲಿ ಮಾಡಿಸಲು ಬಾಡಿಗೆ ನೀಡಲು ಸಭೆ ಅನುಮೋದಿಸಿತು. ಸಭೆಯಲ್ಲಿ ಮುಖ್ಯ ಮಂತ್ರಿಗಳ 100 ಕೋಟಿ ರೂ ಅನುದಾನದಲ್ಲಿ 86 ಲಕ್ಷ ರೂ ದೊಡ್ಡ ಮಾರುಕಟ್ಟೆ ನಿರ್ಮಾಣ ಮಾಡಿತ್ತು. ಆದರೆ ಅದಕ್ಕೆ ಈಗ ಸರ್ಕಾರ ಹಣ ನೀಡದೆ, ಪಾಲಿಕೆಯಿಂದಲೇ ಪಾವತಿ ಮಾಡಲು ಹೇಳಿದೆಂದು ಹೇಳಿದರು ಆಯುಕ್ತರು. ಆಗ ಮತ್ತೊಮ್ಮೆ ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಪಡೆಯಲು ತೀರ್ಮಾನಿಸಿತು. @12bc = ಅನಧಿಕೃತ ಆಸ್ತಿ:ನಗರದಲ್ಲಿನ 35 ಸಾವಿರ ಅನಧಿಕೃತ ಆಸ್ತಿಗಳಿಗೆ ನಿಗಧಿತ ಶುಲ್ಕ ಪಡೆದು ಫಾರಂ 2 ನೀಡುವ ಕಾರ್ಯದ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲು ಸಭೆ ನಿರ್ಣಯಿಸಿತು.ಸರ್ಕಾರ ಸಹ ಈ ದಿಶೆಯಲ್ಲಿ ನಿರ್ಣಯ ನಡೆಯುತ್ತಿದೆ.@12bc = ಇಲ್ಲಿಗೆ ಬರ್ತ ಇಲ್ಲ: ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಇಲ್ಲಿಗೆ ಕೆಲಸ ಮಾಡಲು ಇಂಜಿನೀಯರ್ ಗಳು ಬರ್ತಾ ಇಲ್ಲ ಎಂದು ಆಯುಕ್ತರು ಸಭೆಯ ಗಮನಕ್ಕೆ ತಂದಾಗ.ಇಲ್ಲಿ ವ್ಯವಸ್ಥಿತವಾಗಿ, ಕಾನೂನು ಬದ್ಧವಾಗಿ ಕೆಲಸ ಮಾಡಲು ಅವಕಾಶ ಮಾಡಿದರೆ ಬರ್ತಾರೆ ಎಂದರು. @12bc = ಶಾಪಕ್ಕೆ ಗುರಿಯಾಗಬೇಡಿ:ಪಾಲಿಕೆಯಲ್ಲಿನ 423 ಗುತ್ತಿಗೆ ಆಧಾರಿತ ನೌಕರರಿಗೆ ಮೈಸೂರು ಪಾಲಿಕೆಯಂತೆ ವೇತನ ಹೆಚ್ಚಳಕ್ಕೆ ಇಬ್ರಾಹಿಂ ಬಾಬು ಆಗ್ರಹಿಸಿದಾಗ. ಸದಸ್ಯ ಮುಲ್ಲಂಗಿ ನಂದೀಶ, ಪಾಲಿಕೆಯ ಸಭಾಧ್ಯಕ್ಷ ಪಿ. ಗಾದೆಪ್ಪ ಈ ಕುರಿತು ಶಾಸಕರ ಜೊತೆ ಸಭೆ ನಡೆಸಿ ತೀರ್ಮಾನ ಮಾಡೋಣ ಎಂದರು. ಆದೆಲ್ಲ ಬೇಡ ಮೈಸೂರಿನಂತೆ ಮಾಡಿ ಇಲ್ಲದಿದ್ದರೆ ಪಾಲಿಕೆ ನೌಕರರ ಶಾಪಕ್ಕೆ ಗುರಿಯಾಗುತ್ತೀರಿ ಎಂದರು. ಆಗ ಗಾದೆಪ್ಪ ಅವರುಮೂರು ಕೋಟಿ ರೂ ಉಳಿಸಲು ಸರ್ಕಾರಕ್ಕೆ ಮನವಿ ಮಾಡೋಣ. ಒಟ್ಟಾರೆ ಈ ತಿಂಗಳ ಅಂತ್ಯದಲ್ಲಿ ಈ ಸಮಸ್ಯೆ ಬಗೆಹರಿಸೋಣ ಎಂದರು. ಟೋಲ್ ಸಂಗ್ರಹ:ನಗರದಲ್ಲಿ 100 ಟನ್ ಗೂ ಹೆಚ್ಚಿನ ಬೃಹತ್ ಲಾರಿಗಳು ನಗರದಲ್ಲಿ ಸಂಚರಿಸುತ್ತಿದ್ದು. ಇದರಿಂದ ರಸ್ತೆಗಳು ಹಾಳಾಗುತ್ತಿವೆ. ಅದಕ್ಕಾಗಿ ಅಂತಹ ಲಾರಿಗಳಿಂದ ಟೋಲ್ ಸಂಗ್ರಹ ಮಾಡಿ ಬಂದ ಹಣದಿಂದ ರಸ್ತೆಗಳ ಅಭಿವೃದ್ಧಿಗೆ ಬಳಸಲು ಸಭೆ ಸಮ್ಮತಿ ನೀಡಿತು.ಗಟ್ಟಿಯಾಗಿ ಅರಚಿದರೆ ಇಲ್ಲಿ ಯಾರೂ ಬಯ ಬೀಳಲ್ಲ:ತಮಗೆ ಸಕಾಲದಲ್ಲಿ ಸಭೆಯ ಪ್ರೊಸಿಡಿಂಗ್ ನೀಡದ ಪಾಲಿಕೆ ಅಧಿಕಾರಿ ಮಹಮ್ಮದ್ ಗೌಸ್ ಅವರಿಗೆ. ನೀವು ತುಂಬಾ ಕೆಲಸ ಇದೆ ಎಂದು ಹೇಳುತ್ತೀರಿ. ಹಾಗಾದರೆ ಬೇರೆ ಕೆಲಸಕ್ಕೆ ಹೋಗಿ ಎಂದು ಏರು ದನಿಯಲ್ಲಿ ಇಬ್ರಾಹಿಂ ಬಾಬು ಮಾತನಾಡಿದಾಗ. ಶಾಸಕ ಭರತ್ ರೆಡ್ಡಿ, ಗಟ್ಟಿಯಾಗಿ ಅರಚಿದರೆ ಇಲ್ಲಿ ಯಾರೂ ಬಯ ಬೀಳಲ್ಲ. ಅಧಿಕಾರಿಗಳಿಗೆ ಗೌರವ ಕೊಡಿ ಎಂದರು. ಆಗ ಬಾಬು ಗೌರವ ಕೊಟ್ಟೇ ಮಾತನಾಡ್ತಿದೆ ಅದಕ್ಕಾಗಿ ರೆಕಾರ್ಡಿಂಗ್ ಮಾಡಿತಪ್ಪು ಮಾಡಿದರೆ ಮೇಲೆ ಕ್ರಮ ಆಗಲಿ ಎಂದರು.