ಲಿ. ಪ್ರಭುಲಿಂಗೇಶ್ವರ ಪುಣ್ಯ ಸ್ಮರಣೋತ್ಸವ 20ರವರೆಗೆ

ವಿಜಯಪುರ:ಮಾ.13: ಅಗರಖೇಡದ ಪರಮಜ್ಯೋತಿ ನಾಡಿನ ಪರಮ ಗುರು ಶ್ರೀ ಲಿಂ. ಪ್ರಭುಲಿಂಗೇಶ್ವರ ಪುಣ್ಯ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವವು 10 ರಂದ 20ನೇ ತಾರೀಖಿನವಗೆ ನಡೆಯಲಿದೆ ಎಂದು ಪ್ರಭುಲಿಂಗೇಶ್ವರ ಸಂಸ್ಥಾನ ವಿರಕ್ತಮಠವು ಪ್ರಕಟಣೆಯಲ್ಲಿ ತಿಳಿಸಿದೆ.

ಶ್ರೀ ಅಭಿನವ ಪ್ರಭುಲಿಂಗೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ಲಿಂ. ಪ್ರಭುಲಿಂಗೇಶ್ವರ ಪುಣ್ಯ ಸ್ಮರಣೋತ್ಸವ ಹಾಗೂ ಜಾತ್ರಾ ಮಹೋತ್ಸವ ಪ್ರತಿದಿನ ಸಾಯಂಕಾಲ ಶ್ರೀ ಲಚ್ಯಾಣದ ಸಿದ್ದಲಿಂಗ ಮಹಾರಾಜರ ಪುರಾಣವನ್ನು ಜಮಖಂಡಿ ತಾಲೂಕಿನ ತುಂಗಳದ ಶ್ರೀ ಸಿದ್ದಲಿಂಗ ಶಾಂಬವಿ ಆಶ್ರಮದ ಮಾತೋಶ್ರೀ ಅನುಸೂಯ ದೇವಿ ನಡೆಸಿಕೊಡಲಿದ್ದು ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಣ್ಯ ಸ್ಮರಣೋತ್ಸವ ಯಶಸ್ವಿಗೊಳಿಸಬೇಕೆಂದು ಪ್ರಭುಲಿಂಗೇಶ್ವರ ಸಂಸ್ಥಾನ ವಿರಕ್ತಮಠವು ಪ್ರಕಟಣೆಯಲ್ಲಿ ತಿಳಿಸಿದೆ.