ಲಿಯಾಫಿ ಒಕ್ಕೂಟದಿಂದ ಶಾಸಕರಿಗೆ ಮನವಿ

ಬ್ಯಾಡಗಿ,ನ.12: ಭಾರತೀಯ ಜೀವವಿಮಾ ನಿಗಮದ ಪ್ರತಿನಿಧಿಗಳ ಬೇಡಿಕೆಗಳು ಮತ್ತು ಪಾಲಸಿದಾರರ ಬೋನಸ್ ಹೆಚ್ಚಳ ಮಾಡುವ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಸಂಸದರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಧಾರವಾಡ ವಿಭಾಗ ಲಿಯಾಫಿ ಒಕ್ಕೂಟದಿಂದ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅವರು, ಸಂಸದರ ಮೂಲಕ ಕೇಂದ್ರ ಸರ್ಕಾರದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ನಿಮ್ಮ ಬೇಡಿಕೆಯ ಈಡೇರಿಕೆಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಬ್ಯಾಡಗಿ ಲಿಯಾಫಿ ಸಂಘದ ಪರವಾಗಿ ಧಾರವಾಡ ವಿಭಾಗದ ಲಿಯಾಫಿ ಒಕ್ಕೂಟದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿರುವ ಸುಭಾಷಚಂದ್ರ.ಎಸ್.ಶೆಟ್ಟಿ (ಅಧ್ಯಕ್ಷರು), ಶ್ರೀಶೈಲ ಚಳಗೇರಿ (ಉಪಾಧ್ಯಕ್ಷರು), ಎಂ.ಎಸ್.ಪಾಟೀಲ (ಖಜಾಂಚಿ) ಹಾಗೂ ಮಹಾಂತೇಶ ಎಲಿ (ಕಾರ್ಯದರ್ಶಿ) ಇವರುಗಳಿಗೆ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬ್ಯಾಡಗಿ ಲಿಯಾಫಿ ಸಂಘದ ಅಧ್ಯಕ್ಷ ನಾಗೇಶ ಗುತ್ತಲ, ಪದಾಧಿಕಾರಿಗಳಾದ ಸಿ.ಪಿ.ಹುದ್ದಾರ, ಜಯಣ್ಣ ಕರಡೇರ, ಎಸ್.ರವಿಕುಮಾರ, ಶಂಕರಗೌಡ ಮಾಳಗಿ, ಬಿ.ಬಿ.ಗುಬ್ಬಿ, ಎಸ್.ಸಿ.ತಿಪ್ಪೇಸ್ವಾಮಿ, ಎಂ.ಎಸ್.ಕರಡಿ, ಎಸ್.ಕೆ.ಜಡೆದ, ಎಲ್.ಎಂ.ಕಟ್ಟಿಮನಿ, ವಿ.ಬಿ.ಜಕರೆಡ್ಡಿ, ಜಿ.ಕೆ.ಹಾನಗಲ್, ಬಿ.ವಿ.ಹಿರೇಮಠ, ಎಂ.ಸಿ.ಕಮ್ಮಾರ, ಎಂ.ಎಸ್.ಕೊಪ್ಪದ, ಎಂ.ಎಂ.ರಂಗಾರಿ, ಎಂ.ಜಿಂಗಾಡೆ, ಬಿ.ಆರ್.ಮಂಗೋಜಿ, ಎಸ್.ಎಸ್.ಪೂಜಾರ, ಎಲ್.ಎಂ.ಹುಬ್ಬಳ್ಳಿ, ಎಲ್.ಎಚ್.ಕಟ್ಟಿಮನಿ, ಎಂ.ಎಸ್.ಗುಡಗುರ, ಪಿ.ಎಫ್.ದವಗಿ, ವಿ.ಪಿ.ಪಟ್ಟಣಶೆಟ್ಟಿ, ಕೆ.ಆರ್.ಮಂಜುಳಾ, ಎಸ್.ಕೆ.ಮಂಗಳಾ ಉಪಸ್ಥಿತರಿದ್ದರು.